ಶಿರಸಿ: ಅತಿವೃಷ್ಟಿಯಲ್ಲಿ ಅಪಾರ ಹಾನಿ ರಾಜ್ಯದಲ್ಲಿ ಆಗಿದೆ. ತಕ್ಷಣ ಕೇಂದ್ರ ಸರಕಾರವು ಕರ್ನಾಟಕಕ್ಕೆ 10 ಸಾವಿರ ಕೋಟಿ ರೂ. ನೆರವು ನೀಡಬೇಕು ಎಂದು ಕೆಪಿಸಿಸಿ ಮಲೆನಾಡು ವಿಭಾಗದ ಚುನಾವಣಾ ಸತ್ಯ ಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಒತ್ತಾಯ ಮಾಡಿದರು.
ಅವರು ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಹಾನಿ ಆದಲ್ಲಿ ಪರಿಹಾರವನ್ನು ಕೇಂದ್ರ ಸರಕಾರ ನೀಡಬೇಕು. ಜತೆಗೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಭೂ ಕುಸಿತ, ಅತಿ ವೃಷ್ಟಿ, ಅತಿ ಬರಗಾಲದ ವೈಜ್ಞಾನಿಕ ಅಧ್ಯಯನ ನಡೆಸಲು ಪ್ರತಿ ವರ್ಷ 1 ಲಕ್ಷ ಕೋಟಿ ರೂ. ಹಣ ಮೀಸಲಿಟ್ಟು ಪ್ರತ್ಯೇಕ ವಿಭಾಗ ತೆರೆಯಬೇಕು. ಪರಿಸರ ಸಂರಕ್ಷಣಾ ಕಾರ್ಯ ಬಲಗೊಳಿಸಬೇಕು ಎಂದರು.
ಆದರೆ, ಇಂದು ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ದೇಶದ ಭದ್ದತೆಗೆ, ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಧಕ್ಕೆ ತರುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿ, ಬಿಜೆಪಿಯ ಮೋದಿ ಅವರು ಬಹಳ ಉಡಾಫೆ ಹೊಡಿತಾರೆ. ಕಾಂಗ್ರೆಸ್ ಕಾಲದಲ್ಲಿ ದೇಶದ ಜನರ ಮೇಲಿದ್ದ 52 ಲಕ್ಷ. ಕೋಟಿ ರೂ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದಾರೆ. ಈ ಹಣದಿಂದ ಆಲಮಟ್ಟಿ, ಭದ್ರಾ ಮಾದರಿಯಲ್ಲಿ ಒಂದಾದದರೂ ರೈತ ಪರ ಯೋಜನೆ, ಒಂದು ಕೈಗಾರಿಕೆ ತಂದಿದ್ದರೂ ಶಹಭಾಷ್ ಎನ್ನಬಹುದಿತ್ತು ಎಂದು ಹರಿಯಾಹ್ದರು.
ಈ ವೇಳೆ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಜಿಲ್ಲಾ ಭಾಗ್ಯ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ವಕ್ತಾರ ದೀಪಕ್ ದೊಡ್ಡೂರು, ಪ್ರಮುಖರಾದ ಎಸ್.ಕೆ.ಭಾಗವತ, ಅನ್ಬಾಸ ತೋನ್ಸೆ, ಎಂ.ಎಸ್.ಮೊಹಮ್ಮದ್, ಪ್ರಸನ್ನ ಶೆಟ್ಟಿ ಇತರರು ಇದ್ದರು.
ಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಆಶಯ ಪ್ರಧಾನಿ ಮೋದಿ ಅವರಿಗೆ ಗೊತ್ತಿಲ್ಲ. ಸೇಡಿನ ರಾಜಕಾರಣ ಮಾಡದೇ ಸಾಮರಸ್ಯ ಸೃಷ್ಟಿಸಬೇಕು. ಎಲ್ಲರೂ ಭಾರತೀಯರಾಗಿ ಕೆಲಸ ಮಾಡಬೇಕು.
– ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ನಾಯಕ
ಇದನ್ನೂ ಓದಿ: Bantwal: ಬಿಜೆಪಿ ಪಾದಯಾತ್ರೆಗೆ ಕುಮಾರಸ್ವಾಮಿ ಅಪಸ್ವರ… ಆರ್.ಅಶೋಕ್ ಹೇಳಿದ್ದೇನು ?