Advertisement

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

05:08 PM May 06, 2021 | Team Udayavani |

ಮೈಸೂರು: ಕೋವಿಡ್ ಪಾಸಿಟಿವ್ ಆದವರು ಮನೆಯಿಂದ ಹೊರಗೆ ಬಂದರೆ ಅವರ ವಿರುದ್ಧ ಎಫ್ ಐಆರ್ ವಿಧಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ ಸೋಮಶೇಖರ್ ಎಚ್ಚರಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಟೆಸ್ಟ್ ಕೊಟ್ಟು ಪಾಸಿಟಿವ್ ಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಅಂತವರ ಲೊಕೇಶನ್ ಪತ್ತೆ ಹಚ್ಚಬೇಕೆಂದು ಪೊಲೀಸರಿಗೆ ಸೂಚನೆ ನೀಡಿದರು.

ಲಾಕ್ ಡೌನ್ ಸಂಪೂರ್ಣ ಯಶಸ್ವಿಯಾಗಿದೆ‌. ಆದರೆ ಬೆಳಿಗ್ಗೆ 06 ರಿಂದ 10 ಗಂಟೆವರೆಗೆ ಅವಕಾಶ ನೀಡಿರುವುದು ಮಾತ್ರ ಎಡವಟ್ಟಾಗಿದೆ. ಪ್ರತಿದಿನವೂ ತರಕಾರ ಅಂಗಡಿ ಓಪನ್ ಆಗುತ್ತಿವೆ. ಆದರೆ ಜನ ವರ್ಷಪೂರ್ತಿ ಲಾಕ್ ಡೌನ್ ಆಗಿದೆಯೆನೋ ಎನ್ನುವ ಹಾಗೆ ಕ್ಯೂ ನಿಲ್ಲುತ್ತಿರೋದು ಸಮಸ್ಯೆಯಾಗಿದೆ ಎಂದು ಕಳವಳ ವ್ತಕ್ತಪಡಿಸಿದರು.

ಇದನ್ನೂ ಓದಿ:ತನ್ನ ಎಲ್ಲಾ ಚಾಲಕರಿಗೆ ಲಸಿಕೆಗಾಗಿ ಪ್ರೋತ್ಸಾಹ ಧನ ನೀಡಲು ಮುಂದಾದ ಉಬರ್ !

ಮೇ.14ರ ವರೆಗೂ ಈ ನಿಯಮವೇ ಮುಂದುವರೆಯುತ್ತದೆ. ಮೇ13 ರ ಸಂಜೆ ಮುಂದೆ ಏನು ಮಾಡಬೇಕು ಎನ್ನುದನ್ನ ಸಿಎಂ ತಿರ್ಮಾನ ಮಾಡುತ್ತಾರೆ ಎಂದರು.

Advertisement

ಮೈಸೂರಿನ ವರ್ತಕರು, ಪೊಲೀಸರು, ಸಂಘ ಸಂಸ್ಥೆಯವರು ಸೇರಿದಂತೆ ಹಲವರಿಂದ ನಾನೂ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇನೆ‌. ಮೈಸೂರಿಗೆ ಏನು ಬೇಕು ಬೇಡ ಅನ್ನೋದನ್ನ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಗಮನಕ್ಕೆ ತರುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next