Advertisement

ಎಸ್‌. ಕೋಡಿ: ತಾಂತ್ರಿಕ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಾಗಾರ

09:57 PM May 18, 2019 | Sriram |

ಎಸ್‌. ಕೋಡಿ: ನಿಟ್ಟೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಯಾದ ಮೂಲ್ಕಿ ರಾಮಕೃಷ್ಣ ಪೂಂಜಾ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2 ದಿನಗಳ ಎಲ್‌.ಇ.ಡಿ., ಎಲ್‌.ಸಿ.ಡಿ., ಸ್ಮಾರ್ಟ್‌, ಆಂಡ್ರಾಯ್ಡ, ಪ್ಲಾಸ್ಮಾ ಟಿ. ಸರ್ವಿಸಿಂಗ್‌, ರಿಪೇರಿ ಮತ್ತು ತಾಂತ್ರಿಕ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಜರಗಿತು.

Advertisement

ಮಣಿಪಾಲದ ಸಿಂಡ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ್‌ ನಾಯಕ್‌ ಇವರು ಕಾರ್ಯುಕ್ರಮವನ್ನು ಉದ್ಘಾಟಿಸಿ ಕೌಶಲ ತರಬೇತಿ ಮತ್ತು ಸ್ವಉದ್ಯೋಗದ ಕುರಿತು ಮಾಹಿತಿಯನ್ನು ನೀಡಿದರು.

ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಮೂಡುಬಿದಿರೆಯ ತನ್ಮಯ ಟೆಕ್ನಾಲಜಿ ಇದರ ಮಾಲಕ ಜೆ.ಸಿ. ಪ್ರದೀಪ್‌ ಕುಮಾರ್‌ ಇವರು ಟಿ.ಯ. ವಿವಿಧ ಬ್ರಾಂಡ್‌ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಹಾಗೂ ಸರ್ವಿಸಿಂಗ್‌ ಮತ್ತು ರಿಪೇರಿಯ ಬಗ್ಗೆ ತರಬೇತಿ ನೀಡಿದರು.

ಅಧ್ಯಕತೆಯನ್ನು ವಹಿಸಿದ ಸಂಸ್ಥೆಯ ಪ್ರಾಚಾರ್ಯ ವೈ.ಎನ್‌. ಸಾಲ್ಯಾನ್‌ ಇವರು ತರಬೇತಿ ಕಾರ್ಯಕ್ರಮದ ಪ್ರಾಮುಖ್ಯತೆ ಬಗ್ಗೆ ಮತ್ತು ಮುಂದೆ ಅದರಿಂದಾಗುವ ಅನುಕೂಲತೆ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉದ್ಯೋಗಾಧಿಕಾರಿ ರಘುರಾಮ್‌ ರಾವ್‌, ಕಚೇರಿ ಅಧೀಕ್ಷಕ ಹರೀಶ್ಚಂದ್ರ ಹಾಗೂ ಕಿರಿಯ ತರಬೇತಿ ಅಧಿಕಾರಿ ಸುರೇಶ್‌ ಎಸ್‌.ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next