Advertisement

ಮೊಜಾಂಬಿಕ್‌ನಲ್ಲಿ ‘Made In India’ರೈಲಿನಲ್ಲಿ ಸವಾರಿ ಮಾಡಿದ ಸಚಿವ S Jaishankar

12:32 PM Apr 14, 2023 | Team Udayavani |

ಮಾಪುಟೊ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮೊಜಾಂಬಿಕಾ ರಾಜಧಾನಿಗೆ ಭೇಟಿ ನೀಡಿದ ಸಂದರ್ಭದಲ್ಲಿ  ‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಸವಾರಿ ಮಾಡಿದರು.

Advertisement

ರೈಲು ಜಾಲಗಳಲ್ಲಿ ವಿದ್ಯುತ್ ಬಳಕೆ ಮತ್ತು ಜಲಮಾರ್ಗ ಸಂಪರ್ಕವನ್ನು ವಿಸ್ತರಿಸಲು ಸಹಾಯ ಮಾಡುವಲ್ಲಿ ಭಾರತದ ಪಾಲುದಾರಿಕೆಯ ಬಗ್ಗೆ ಮೊಜಾಂಬಿಕಾ ಸಾರಿಗೆ ಸಚಿವರೊಂದಿಗೆ ಚರ್ಚಿಸಿದರು.

ಶ್ರೀ ಜೈಶಂಕರ್ ಅವರು ಮೂರು ದಿನಗಳ ಭೇಟಿಗಾಗಿ ಗುರುವಾರ ಮೊಜಾಂಬಿಕ್‌ ನ ರಾಜಧಾನಿಗೆ ಆಗಮಿಸಿದರು ಮತ್ತು ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಆಫ್ರಿಕನ್ ದೇಶದ ಸಂಸತ್ತಿನ ಅಧ್ಯಕ್ಷರನ್ನು ಭೇಟಿ ಮಾಡಿದರು.

ಎಪ್ರಿಲ್ 13 ರಿಂದ 15 ರವರೆಗೆ ಮೊಜಾಂಬಿಕಾ ಭೇಟಿಯು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರೊಬ್ಬರು ಆ ದೇಶಕ್ಕೆ ನೀಡಿರುವ ಮೊದಲ ಭೇಟಿಯಾಗಿದೆ.

“ಮೊಜಾಂಬಿಕನ್ ಸಾರಿಗೆ ಮತ್ತು ಸಂವಹನ ಸಚಿವ ಮತ್ತು ಮೊಜಾಂಬಿಕನ್ ಬಂದರು, ರೈಲು ಪ್ರಾಧಿಕಾರದ ಅಧ್ಯಕ್ಷ ಮೇಟಿಯುಸ್ ಮಗಾಲಾ ಅವರೊಂದಿಗೆ ನಡೆಸಿದ ಹಸಿರು ಸಾರಿಗೆ ಸಂಭಾಷಣೆ ಅದ್ಭುತವಾಗಿದೆ.

Advertisement


ರೈಲು ಜಾಲಗಳು, ವಿದ್ಯುತ್ ಚಲನಶೀಲತೆ ಮತ್ತು ಜಲಮಾರ್ಗಗಳ ಸಂಪರ್ಕವನ್ನು ವಿಸ್ತರಿಸುವ ಕುರಿತು ಮಾತನಾಡಿದೆವು. ಈ ನಿಟ್ಟಿನಲ್ಲಿ ಭಾರತವು ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿದೆ” ಎಂದು ಸಚಿವ ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ.

ಮೊಜಾಂಬಿಕನ್ ಸಾರಿಗೆ ಸಚಿವ ಮೇಟಿಯುಸ್ ಮಾಗಾಲಾ ಅವರೊಂದಿಗೆ ಮಾಪುಟೊದಿಂದ ಮಚಾವಾಗೆ ‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಜೈಶಂಕರ್ ಸವಾರಿ ಮಾಡಿದರು.

ಸಿಎಂಡಿ ರೈಟ್ಸ್ ರಾಹುಲ್ ಮಿಥಾಲ್ ಅವರು ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿಕೊಂಡಿದ್ದನ್ನು ಶ್ಲಾಘಿಸಿ ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ. ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next