Advertisement

ನ. 8ರ ಬಳಿಕ ಐಟಿ ದಾಳಿಯಿಂದ 4,800 ಕೋ.ರೂ. ಕಪ್ಪು ಹಣ ಪತ್ತೆ

03:45 AM Jan 09, 2017 | Team Udayavani |

ಹೊಸದಿಲ್ಲಿ: 500, 1000 ರೂ. ಮುಖಬೆಲೆಯ ನೋಟುಗಳ ರದ್ದತಿ ಬಳಿಕ ಕರ್ನಾಟಕ ಸೇರಿದಂತೆ ದೇಶಾದ್ಯಂತ ನಿರಂತರ ದಾಳಿಗಳನ್ನು ನಡೆಸಿದ್ದ ಆದಾಯ ತೆರಿಗೆ ಇಲಾಖೆ, ಜನವರಿ 5ರವರೆಗೆ ಬರೋಬ್ಬರಿ 4807 ಕೋಟಿ ರೂ. ಕಪ್ಪು ಹಣವನ್ನು ಪತ್ತೆ ಹಚ್ಚುವಲ್ಲಿ ಸಫ‌ಲವಾಗಿದೆ. ಈ ಪೈಕಿ 112 ಕೋಟಿ ರೂ. ಹಣ ಹೊಸ ನೋಟುಗಳ ರೂಪದಲ್ಲಿ ಸಿಕ್ಕಿದೆ.

Advertisement

ನ.8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಪನಗದೀಕರಣ ನಿರ್ಧಾರ ಘೋಷಣೆ ಮಾಡುತ್ತಿದ್ದಂತೆ ಕಾರ್ಯಪ್ರವೃತ್ತರಾದ ತೆರಿಗೆ ಅಧಿಕಾರಿಗಳು 1138 ಶೋಧ, ಸಮೀಕ್ಷೆ ಹಾಗೂ ವಿಚಾರಣೆಗಳನ್ನು ನಡೆಸಿದ್ದಾರೆ. ತೆರಿಗೆ ವಂಚನೆ ಹಾಗೂ ಹವಾಲಾ ರೀತಿಯ ವ್ಯವಹಾರ ಆರೋಪದ ಮೇರೆಗೆ 5184 ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಶೋಧ ಕಾರ್ಯಾಚರಣೆ ವೇಳೆ 609.39 ಕೋಟಿ ರೂ. ಮೌಲ್ಯದ ನಗದು ಹಾಗೂ ಆಭರಣಗಳು ಜಪ್ತಿಯಾ ಗಿವೆ. ಈ ಪೈಕಿ ಆಭರಣದ ಮೌಲ್ಯ 97.8 ಕೋಟಿ ರೂ. ಉಳಿದಂತೆ ಬಹುತೇಕ 2000 ರೂ. ಮುಖಬೆಲೆಯ ನೋಟುಗಳ ರೂಪದಲ್ಲಿ ಇದ್ದ 112.8 ಕೋಟಿ ರೂ. ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next