Advertisement
ಮುನಿ ಎಲ್ ಕಡಬೂರ: ಭಾರತ ದೇಶ ಈಗ ಉಭಯ ಸಂಕಷ್ಟದಲ್ಲಿ ಸಿಲುಕಿದಂತೆ ಕಾಣುತ್ತಿದೆ ಒಂದೆಡೆ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಅನಿವಾರ್ಯ ಆದರೆ ಸಾಮಾನ್ಯ ಜನಜೀವನ ಜೊತೆಗೆ ಆರ್ಥಿಕತೆಯ ಸಬಲತೆಗೆ ಸಡಿಲಿಕೆಯೂ ತೀರಾ ಅವಶ್ಯಕವಾಗಿದೆ.ಹೀಗಾಗಿ ಈ ದೊಡ್ಡ ಸವಾಲಿನ ನಡುವೆಯೇ ಬದುಕು ಕಟ್ಟಿ ಕೊಳ್ಳುವುದು ಅನಿವಾರ್ಯವಾಗಿದೆ.
Related Articles
Advertisement
ಮಹೇಶ್: ಕೆಲವು ಜನ ಮಾಡ್ತಿರೋ ತಪ್ಪಿಗೆ, ಸಂಕಷ್ಟವಿದ್ದರೂ ಸ್ವಹಿತ ಮತ್ತು ಸರ್ಕಾರದ ಆದೇಶಗಳನ್ನು ತಪ್ಪದೆ ಪಾಲಿಸಿಕೊಂಡು ಬರುತ್ತಿರುವವರಿಗೆ ಕಾನೂನು ಹೇರುವುದು ಎಷ್ಟರಮಟ್ಟಿಗೆ ಸರಿ. ನಾವೂ ಲಾಕ್ ಡೌನ್ ಮಾಡ್ಕೊಂಡ್ ಸಾಯಿತೀವಿ ಮನೆಯಲ್ಲಿ. ಉಳಿದವರು ಲಾಕ್ ಡೌನ್ ಪಾಲಿಸದೆ ಸ್ವೇಚ್ಚಚಾರವಾಗಿ ಓಡಾಡಿಕೊಂಡು ಹಬ್ಬಿಸಲಿ, ಇದ್ಯಾವ ನ್ಯಾಯ ಸ್ವಾಮಿ. ನೋ ಲಾಕ್ ಡೌನ್ ಬೇಡ ಆದಿದ್ದು ಆಗಲಿ,
ಅಜಯ್ ಕುಮಾರ್ ಎಸ್: ಲಾಕ್ ಡೌನ್ ಮುಂದುವರಿಕೆ….ಈ ಪದ ಕೇಳಿದ ಕೂಡಲೇ ಭಯ ಆಗುತ್ತೆ ನಾವು ಕೆಲಸ ಕಳೆದು ಕೊಂಡು 2 ತಿಂಗಳು ಆಯ್ತು ಹೇಗೋ ಜೀವನ ನಡಿತಾ ಇದೆ ಆದರೆ ತೀರಾ ತಳಮಟ್ಟದಲ್ಲಿ ಇರುವ ಜನರು ಹೇಗೆ ಜೀವನ ಸಾಗಿಸಬೇಕು ಇನ್ನೂ ಇದು ಹೀಗೆ ಮುಂದುವರದರೆ ನಮ್ಮಂತ ದಿನಗೂಲಿ ನೌಕರರು ಹಸಿವಿನಿಂದ ಸಾಯಬೇಕು ಅಷ್ಟೇ.