Advertisement

6ರ ಪೋರನ ಒಪ್ಪಂದ

06:00 AM Aug 07, 2018 | Team Udayavani |

ನ್ಯೂಯಾರ್ಕ್‌: ಯೂಟ್ಯೂಬ್‌ನಲ್ಲಿ ಆಟಿಕೆಗಳ ರಿವ್ಯೂ ಮಾಡಿ ಕೋಟ್ಯಧೀಶನಾಗಿರುವ ಆರು ವರ್ಷದ ಬಾಲಕ ರ್ಯಾನ್‌ ಇದೀಗ ಅಮೆರಿಕದ ಅತಿದೊಡ್ಡ ಮಾರಾಟ ಮಳಿಗೆ ಬ್ರಾಂಡ್‌ ವಾಲ್‌ಮಾರ್ಟ್‌ ಜೊತೆ ಒಪ್ಪಂದ ಮಾಡಿ ಕೊಂಡಿದ್ದಾನೆ. ತನ್ನದೇ ಹೆಸರಿನ ಬ್ರಾಂಡ್‌ನ‌ಡಿ ವಾಲ್‌ಮಾರ್ಟ್‌ನಲ್ಲಿ ಈತ ಆಟಿಕೆಗಳನ್ನು ಮಾರಾಟ ಮಾಡಲಿದ್ದಾರೆ.

Advertisement

ರ್ಯಾನ್‌ ವರ್ಲ್ಡ್ ಎಂದು ಇದಕ್ಕೆ ಹೆಸರಿಡಲಾಗಿದ್ದು, ಅಕ್ಟೋಬರ್‌ನಿಂದ ಅಮೆರಿಕದ ಇತರ ಮಳಿಗೆಗಳಲ್ಲೂ ಈ ಬ್ರ್ಯಾಂಡ್‌ನ‌ ಆಟಿಕೆಗಳು ಲಭ್ಯವಾಗಲಿವೆ. ಯೂಟ್ಯೂಬ್‌ನಲ್ಲಿ ಆಟಿಕೆಗಳನ್ನು ರಿವ್ಯೂ ಮಾಡುವುದರಿಂದಲೇ ರ್ಯಾನ್‌ ಕಳೆದ ವರ್ಷ 70 ಕೋಟಿ ರೂ.ಗಳಿಸಿದ್ದ ರ್ಯಾನ್‌. ಈತನ ಯೂಟ್ಯೂಬ್‌ ಚಾನೆಲ್‌ಗೆ 1.5 ಕೋಟಿ ಸಬ್‌ಸೈಬರ್‌ಗಳಿದ್ದಾರೆ. ಯೂಟ್ಯೂಬ್‌ನಿಂದ ಪೇಮೆಂಟ್‌ ಪಡೆಯುವ ಚಾನೆಲ್‌ಗ‌ಳ ಪೈಕಿ ರ್ಯಾನ್‌ನ ಈ ಚಾನೆಲ್‌ 8ನೇ ಸ್ಥಾನದಲ್ಲಿದೆ.

ರ್ಯಾನ್‌ ಒಟ್ಟು ಆರು ಯೂಟ್ಯೂಬ್‌ ಚಾನೆಲ್‌ಗ‌ಳನ್ನು ಹೊಂದಿದ್ದು, ಒಂದು ತಿಂಗಳಲ್ಲಿ ಈತನ ವಿಡಿಯೋಗಳು 100 ಕೋಟಿ ವೀಕ್ಷಣೆ ಪಡೆಯುತ್ತವೆ. 2015ರ ಮಾರ್ಚ್‌ನಿಂದ ಈತ ಆಟಿಕೆಗಳೊಂದಿಗೆ ಆಟವಾಡುವ ಹಾಗೂ ಅದರ ಸ್ಪೆಸಿಫಿಕೇಶನ್‌ ವಿಶ್ಲೇಷಿಸುವ ವಿಡಿಯೋಗಳನ್ನು ಯೂಟ್ಯೂಬ್‌ಗ ಪಾಲಕರು ಅಪ್‌ಲೋಡ್‌ ಮಾಡಲು ಆರಂಭಿಸಿದ್ದರು. ಬಳಿಕ ಈತ ಯೂಟ್ಯೂಬ್‌ ಸ್ಟಾರ್‌ ಆಗಿದ್ದ. ಈಗ ರ್ಯಾನ್‌ ಹೆಸರಲ್ಲಿ ಹಲವು ಉತ್ಪನ್ನಗಳೂ ಮಾರುಕಟ್ಟೆಗೆ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next