ನಟ ಶರಣ್ “ರ್‍ಯಾಂಬೊ’ ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬಂದಿದ್ದು ನಿಮಗೆ ನೆನಪಿರಬಹುದು. ಅಲ್ಲಿಯವರೆಗೂ, ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ, ಪೋಷಕ ನಟನಾಗಿಹಾಗೂ ಸಹ ನಟನಾಗಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಶರಣ್, ಮೊದಲ ಬಾರಿಗೆ”ರ್‍ಯಾಂಬೊ’ದಲ್ಲಿ ಹೀರೋ ಆಗಿ ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗಿದ್ದರು.
ಇನ್ನು ಶರಣ್ ಸಿನಿಕೆರಿಯರ್‌ಗೆ ಹೊಸ ಟರ್ನ್ ಕೊಟ್ಟ “ರ್‍ಯಾಂಬೊ’ತೆರೆಕಂಡು, ಇದೇ ಸೆ.7ಕ್ಕೆ ಒಂಭತ್ತು ವರ್ಷವಾಯಿತು.ಈ ಖುಷಿಯನ್ನು ಶರಣ್ ಸೋಶಿಯಲ್ ಮಿಡಿಯಾಮೂಲಕ ಹಂಚಿಕೊಂಡಿದ್ದಾರೆ.ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಶರಣ್,””ಇಂದಿಗೆ “ರ್‍ಯಾಂಬೊ’ ಚಿತ್ರ ತೆರೆಯ ಮೇಲೆ ಕಂಡು ಬಂದು 9 ವರ್ಷಗಳು ಪೂರ್ಣಗೊಂಡಿದೆ. 2012ರ ಸೆ.7 ನನ್ನ ಜೀವನದಲ್ಲಿ ಮರೆಯಲಾರದಂತಹ ಹಾಗೂ ನನ್ನ ವೃತ್ತಿ ಜೀವನಕ್ಕೆ ಒಂದು ದೊಡ್ಡ ತಿರುವು ನೀಡಿದಂತಹದಿನ.
“ರ್‍ಯಾಂಬೊ’ ನನ್ನ ಬದುಕಿಗೆ ಹೊಸ ಆಯಾಮಕೊಟ್ಟು ನಿಮ್ಮೆಲ್ಲರ ಪ್ರೀತಿ ಆಶೀರ್ವಾದಹೆಚ್ಚು ಮಾಡಿಸಿದ ಒಂದು ಅಕ್ಷಯ ಪಾತ್ರೆ ಎಂದರೆ ತಪ್ಪಾಗಲಾರದು. ಈ ಯಶಸ್ಸಿಗೆ ಕಾರಣಕರ್ತರಾದ ನನ್ನ ಇಡೀ ತಂಡ ಹಾಗೂ ನಿಮ್ಮೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು’ ಎಂದು ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ವೈರಲ್ ವೀಡಿಯೋ | ಹಜೀಬ್ ಇಲ್ಲದ ಮಹಿಳೆ, ಕತ್ತರಿಸಿದ ಕಲ್ಲಂಗಡಿ ಹಣ್ಣಿನಂತೆ : ತಾಲಿಬಾನ್ ಉಗ್ರ
ಇನ್ನು “ರ್‍ಯಾಂಬೊ’ ಚಿತ್ರದ ಬಳಿಕ ಶರಣ್ ಗೆಲುವಿನ ನಾಗಾಲೋಟ ಮುಂದುವರೆದಿದ್ದು, “ವಿಕ್ಟರಿ’, “ಜೈ ಲಲಿತಾ’, “ಅಧ್ಯಕ್ಷ’,”ರಾಜರಾಜೇಂದ್ರ’, “ಬುಲೆಟ್ ಬಸ್ಯಾ’, “ಜೈ ಮಾರುತಿ 800′, “ನಟರಾಜ ಸರ್ವಿಸ್’,”ರಾಜ್‌ವಿಷ್ಣು’, “ಸತ್ಯ ಹರಿಶ್ಚಂದ್ರ’, “ರ್‍ಯಾಂಬೊ-2′, “ವಿಕ್ಟರಿ-2′, “ಅಧ್ಯಕ್ಷ ಇನ್ ಅಮೆರಿಕಾ ‘ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಹೀರೋ ಆಗಿ ಶರಣ್ ತನ್ನದೇ ಪ್ರೇಕ್ಷಕರ ವರ್ಗವನ್ನು ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಶರಣ್ ಅಭಿನಯದ”ಅವತಾರ್ ಪುರುಷ’ ತೆರೆಗೆ ಬರಲು ರೆಡಿಯಾಗಿದ್ದರೆ, ಮತ್ತೂಂದು ಚಿತ್ರ “ಗುರು ಶಿಷ್ಯರು’ಚಿತ್ರೀಕರಣದ ಅಂತಿಮ ಹಂತದಲ್ಲಿದೆ.