Advertisement

ನಿಯಮ ಉಲ್ಲಂಘಿಸುವವರಿಗೆ ರುವಾಂಡಾದಲ್ಲಿ ಇಡೀ ರಾತ್ರಿ ಪಾಠ ಕೇಳುವ ಶಿಕ್ಷೆ

12:25 PM Aug 16, 2020 | sudhir |

ಕಿಗಾಲಿ: ಕೋವಿಡ್‌ ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸುವ ಜನರಿಗೆ ವಿವಿಧ ದೇಶಗಳು ದಂಡ ಹೇರುವ ಕ್ರಮಕ್ಕೆ ಮುಂದಾಗಿದ್ದರೆ, ಆಫ್ರಿಕನ್‌ ದೇಶ ರುವಾಂಡಾದಲ್ಲಿ ವಿಭಿನ್ನ ಮಾರ್ಗ ಹಿಡಿಯಲಾಗಿದೆ. ಇಲ್ಲಿ ನಿಯಮಗಳನ್ನು ಉಲ್ಲಂಘಿಸಿದವರು ಇಡೀ ರಾತ್ರಿ ಕೋವಿಡ್‌ ಸುರಕ್ಷತೆ ಬಗ್ಗೆ ಪಾಠ ಕೇಳಬೇಕು. ಇದೇ ಅವರಿಗೆ ನೀಡುವ ಶಿಕ್ಷೆ!

Advertisement

ಅಲ್ಲಿ ರಾತ್ರಿ ಕರ್ಫ್ಯೂ ಇದ್ದು, ಜುಲೈ ಬಳಿಕ ಸುಮಾರು 70 ಸಾವಿರ ಮಂದಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರನ್ನು ವಶಕ್ಕೆ ಪಡೆದು ಕೋವಿಡ್‌ ಸುರಕ್ಷತೆ ಬಗ್ಗೆ ಬೋಧನೆ ಮಾಡಲಾಗಿದೆ. ಕೆಲವರಿಗೆ ಸಶಸ್ತ್ರ ಪೊಲೀಸರ ಬಂದೋಬಸ್ತ್ನಲ್ಲಿ ಆರೋಗ್ಯ ಅಧಿಕಾರಿಗಳಿಂದ ಪಾಠ ಮಾಡಿಸಲಾಗಿದೆ. ಪಾಠ ಕೇಳಿದವರು ಬಳಿಕ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಿರುತ್ತದೆ.

ಒಂದು ವೇಳೆ ಪಾಠ ಕೇಳಲು ತಯಾರಿಲ್ಲದಿದ್ದರೆ ಎರಡೂವರೆ ಸಾವಿರ ರೂ.ವರೆಗೆ ದಂಡ ಕಟ್ಟಬೇಕು. ಪದೇ ಪದೇ ನಿಯಮ ಉಲ್ಲಂಘಿಸುವವರಿಗೆ ದಂಡದ ಪ್ರಮಾಣ, ಪಾಠವೂ ಹೆಚ್ಚಿರಲಿದೆ ಎಂದು ಪೊಲೀಸರು ಹೇಳಿದ್ದಾರೆ. ರುವಾಂಡದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 2293 ದಾಟಿದೆ. ಸೋಂಕಿತರು ಹೆಚ್ಚಾದರೆ ಆಸ್ಪತ್ರೆಗಳಲ್ಲಿ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಕಠಿನ ನಿಯಮಗಳನ್ನು ಜಾರಿಗೆ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next