Advertisement

ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಆರ್.ವಿ.ದೇಶಪಾಂಡೆ

01:35 PM May 22, 2023 | Team Udayavani |

ದಾಂಡೇಲಿ : ರಾಜ್ಯ ವಿಧಾನ ಸಭೆಯ ಹಂಗಾಮಿ ಸ್ಪೀಕರ್ ಆಗಿ ಹಿರಿಯ ಶಾಸಕರಾದ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಆರ್.ವಿ.ದೇಶಪಾಂಡೆಯವರು ಇಂದು ಸೋಮವಾರ ಬೆಳಿಗ್ಗೆ ಬೆಂಗಳೂರಿನ ರಾಜಭವನದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

Advertisement

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣ ವಚನವನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಉಪಸ್ಥಿತರಿದ್ದರು.

9ನೇ ಬಾರಿಗೆ ಆಯ್ಕೆಯಾಗಿರುವ ಆರ್.ವಿ.ದೇಶಪಾಂಡೆಯವರು ಸದನದಲ್ಲಿ ಹಿರಿಯ ಸದಸ್ಯರಾಗಿರುವುದರಿಂದ ನಿಯಾಮವಳಿಯಂತೆ ಹಿರಿಯ ಶಾಸಕರನ್ನು ಸದನದ ಹಂಗಾಮಿ ಸಭಾಧ್ಯಕ್ಷರನ್ನಾಗಿಸುವುದು ಸಂಪ್ರದಾಯ. ಈ ಹಿನ್ನಲೆಯಲ್ಲಿ ಆರ್.ವಿ.ದೇಶಪಾಂಡೆಯವರನ್ನು ಸಹಜವಾಗಿ ಹಂಗಾಮಿ ಸ್ಪೀಕರನ್ನಾಗಿ ಆಯ್ಕೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next