Advertisement
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ದ್ವಿತೀಯ ಹಾಗೂ ತೃತೀಯ ಸ್ತರದ ನಗರಗಳಲ್ಲಿ ಜಾಗತಿಕ ವಾಣಿಜ್ಯ ಪರಿಸ್ಥಿತಿ ಪರಿಗಣಿಸಿ ಕೌಶಲ್ಯ ಅಭಿವೃದಿಟಛಿ ಕಾರ್ಯಕ್ರಮಗಳನ್ನು ಹೇಗೆ ರೂಪಿಸಬೇಕು ಎನ್ನುವ ಅಂಶದ ಬಗ್ಗೆ ಚರ್ಚಿಸಲಾಯಿತು. ಮರು ಕೌಶಲ್ಯ, ವೃತ್ತಿ ಜೀವನದ ಮಧ್ಯ ಭಾಗದಲ್ಲಿ ಕೊಡಬೇಕಾದ ತರಬೇತಿ ಮತ್ತು ಸಮುದಾಯ ಆಧಾರಿತ ಕೌಶಲ್ಯ ಡಿಪ್ಲೊಮಾ ಇವುಗಳಿಗೆ ಸಂಬಂಧಿಸಿದಂತೆ ಅಮೆರಿಕದ ಜತೆ ಹೊಂದಬಹುದಾದ ಸಹಕಾರ ಮತ್ತು ಆ ದೇಶದ ಕಾಲೇಜುಗಳ ಜತೆ ಸಹಭಾಗಿತ್ವ ಸ್ಥಾಪಿಸಿಕೊಳ್ಳುವ ಕುರಿತು ವಿಚಾರ ವಿನಿಮಯ ನಡೆಸಲಾಯಿತು. ಬಳಿಕ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ, ಕರ್ನಾಟಕದಲ್ಲಿ ಉದ್ಯಮಶೀಲನೆ ಮತ್ತು ನವೋದ್ಯಮ ಸ್ಥಾಪನೆಗೆ ತಕ್ಕದಾದ ವಾತಾವರಣವಿದ್ದು ಅದನ್ನು ಮತ್ತಷ್ಟು ಸುಧಾರಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಎ.ಎ.ಬಿಸ್ವಾಸ್, ಡಾ.ಗುರುಚರಣ್ ಮತ್ತಿತರರಿದ್ದರು.
– ಆರ್.ವಿ.ದೇಶಪಾಂಡೆ, ಕಂದಾಯ ಸಚಿವ