Advertisement

ಬಳಕೆಗೆ ಮುನ್ನವೇ ತುಕ್ಕು ಹಿಡಿದ ಸೈಕಲ್‌

12:47 PM Jul 24, 2018 | |

ಬಸವಕಲ್ಯಾಣ: ಅಂಗವಿಕಲರಿಗಾಗಿ ನಗರಸಭೆಯಿಂದ ಮಂಜೂರಾದ ಸೈಕಲ್‌ಗ‌ಳು ಆಯ್ಕೆಯಾದ ಫಲಾನುಭವಿಗಳಿಗೆ ಸೇರದೇ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸೈಕಲ್‌ಗ‌ಳು ಉಪಯೋಗಕ್ಕೆ ಬರುವ ಮುನ್ನವೇ ತುಕ್ಕು ಹಿಡಿದು ಸಂಪೂರ್ಣ
ಹಾಳಾಗಿವೆ.

Advertisement

ಲಕ್ಷಾಂತರ ರೂ. ಖರ್ಚು ಮಾಡಿ ಖರೀದಿ ಮಾಡಿದ್ದ 150ಕ್ಕೂ ಹೆಚ್ಚು ಸೈಕಲ್‌ಗ‌ಳು ನಗರದ ಹೊರವಲಯದ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಇಟ್ಟ ಸ್ಥಳದಲ್ಲಿಯೇ ತುಕ್ಕು ಹಿಡಿದು, ಟೂಬ್‌ ಮತ್ತು ಟೈರ್‌ಗಳು ಮಣ್ಣು ಪಾಲಾಗಿವೆ. ಮೂರು ವರ್ಷಗಳ ಹಿಂದೆ ನಗರಸಭೆಯ ಬಜೆಟ್‌ನ ಶೇ.3ರಷ್ಟು ಅಂಗವಿಕಲರ ಮೀಸಲಾತಿ ಅನುದಾನದಲ್ಲಿ ಸೈಕಲ್‌ ಖರೀದಿ ಮಾಡಿ ಇಡಲಾಗಿತ್ತು. ಆದರೆ ಆಯ್ಕೆಯಾದ ಫಲಾನುಭವಿಗಳಿಗೆ ವಿತರಣೆ ಮಾಡದೆ ಇರುವುದು ನೋವಿನ ಸಂಗತಿಯಾಗಿದೆ.

ಕಳೆದ ಕೆಲವು ವರ್ಷಗಳಿಂದ ಸೈಕಲ್‌ಗಳನ್ನು ನೀರು ಶುದ್ಧೀಕರಣ ಘಟಕದಲ್ಲಿ ಇಡಲಾಗಿತ್ತು. ಈವರೆಗೂ ಸೈಕಲ್‌ಗ‌ಳು ಇವೆಯೋ ಅಥವಾ ಇಲ್ಲವೊ ಎಂಬುದನ್ನು ನೋಡಲಿಕ್ಕೂ ಬಂದಿಲ್ಲ. ಇದರಿಂದ ಉಪಯೋಗಕ್ಕೆ ಬರುವ ಮುನ್ನವೇ ಅವುಮಣ್ಣುಪಾಲಾಗಿವೆ ಎಂದು ಸಿಬ್ಬಂದಿ ವೊಬ್ಬರು ಮಾಹಿತಿ ನೀಡಿದರು. 

ಆಯ್ಕೆಯಾದ ಫಲಾನುಭವಿಗಳಿಗೆ ಸೈಕಲ್‌ ಹಂಚದೇ ಹಾಗೆ ಇಟ್ಟಿರುವುದನ್ನು ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಇದರಿಂದ ಅಂಗವಿಕಲರ ಹಿತದೃಷ್ಟಿಯಿಂದ ಸರಕಾರ ಅನುದಾನ ನೀಡಿ ಮಂಜೂರು ಮಾಡಿದ ಸೈಕಲ್‌ಗಳು ಉಪಯೋಗಕ್ಕೆ ಬರುವ ಮುನ್ನವೇ ಹಾಳಾಗಲು ಕಾರಣವಾಯಿತು ಎಂದು ಎಂಆರ್‌ಡಬ್ಲೂ ಕಾರ್ಯಕರ್ತರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಮೂರು ವರ್ಷಗಳ ಹಿಂದೆ ಅಂಗವಿಕಲರಿಗಾಗಿ ಮಂಜೂರಾದ ಸೈಕಲ್‌ಗ‌ಳನ್ನು ಫಲಾನುಭವಿಗಳಿಗೆ ವಿತರಣೆ ಮಾಡದೆ ಇರುವುದನ್ನು ನೋಡಿದರೆ ಅಧಿಕಾರಿಗಳ ನಿರ್ಲಕ್ಷ ತಿಳಿಯುತ್ತದೆ.

Advertisement

ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಪ್ರತಿಭಟನೆ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕೂಡ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಆಯ್ಕೆಯಾದ ಫಲಾನುಭವಿಗಳಿಗೆ ಸೇರಬೇಕಾದ ಸೈಕಲ್‌ಗ‌ಳು ಇಟ್ಟ ಸ್ಥಳದಲ್ಲಿ ತುಕ್ಕು ಹಿಡಿದಿವೆ.
 ಶಿವಕುಮಾರ, ಎಂಆರ್‌ಡಬ್ಲೂ ಕಾರ್ಯಕರ್ತ

ನೀರು ಶುದ್ಧೀಕರಣ ಘಟಕದಲ್ಲಿ ನಾಲ್ಕು ವರ್ಷಗಳಿಂದ ಅಂಗವಿಕಲರ ಸೈಕಲ್‌ಗ‌ಳು ಬಿದ್ದಿವೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಆದರೆ ನಾನು ಅಧಿಕಾರ ವಹಿಸಿಕೊಳ್ಳುವ ಮುಂಚೆ ಮಂಜೂರಾಗಿರುವುದು. ಹೀಗಾಗಿ ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.
 ಮೀನಾಕುಮಾರಿ, ಸಿಎಂಸಿ ಅಧಿಕಾರಿ

ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next