Advertisement

ರಷ್ಯಾ “ಬಲಿಷ್ಠ ಪಡೆ’ಯೇ ಯುದ್ಧಕ್ಕೆ ಬಲಿ!

10:45 PM Apr 09, 2023 | Team Udayavani |

ಕಳೆದೊಂದು ವರ್ಷದಿಂದಲೂ ನಡೆಯುತ್ತಿರುವ ಉಕ್ರೇನ್‌ ಹಾಗೂ ರಷ್ಯಾ ಸಮರವು ಸೋವಿಯತ್‌ ಹಾಗೂ ಆಫ್ಘನ್‌ ಯುದ್ಧಕ್ಕಿಂತಲೂ ಭೀಕರವಾದದ್ದು ಎಂದು ಬಿಬಿಸಿ ವರದಿ ಮಾಡಿದೆ. ಅಫ್ಘಾನಿಸ್ತಾನದ ವಿರುದ್ಧ 9 ವರ್ಷಗಳ ಕಾಲ ವೀರೋಚಿತವಾಗಿ ಹೋರಾಡಿದ್ದ ರಷ್ಯಾ ಸೈನಿಕರು ಉಕ್ರೇನ್‌ ಯುದ್ಧದಲ್ಲಿ ರಕ್ತದ ಮಡುವು ಸೇರಿದ್ದಾರೆ. ಅಪಾರ ಶಸ್ತ್ರಾಸ್ತ್ರ, ಹಣವನ್ನು ಮಾತ್ರವಲ್ಲದೇ ತನ್ನ ಅತೀ ಬಲಿಷ್ಠ ದಳವನ್ನೂ ರಷ್ಯಾ ಕಳೆದುಕೊಂಡಿದೆ.

Advertisement

ಅತಿ ಬಲಿಷ್ಠ ತಂಡದಲ್ಲೇ 94 ಸಾವು!
331 ಗಾರ್ಡ್ಸ್‌ ಪ್ಯಾರಾಚೂಟ್‌ ರೆಜಿಮೆಂಟ್‌ ಅನ್ನು ರಷ್ಯಾದ ರಕ್ಷಣಾ ಪಡೆಯ “ಅತಿ ಬಲಿಷ್ಠ ತಂಡ’ವೆಂದು ಪರಿಗಣಿಸಲಾಗಿದೆ. ಉಕ್ರೇನ ಯದ್ಧ ಶುರುವಾದಾಗಿನಿಂದ ಪ್ರಸಕ್ತ ವರ್ಷದ ಏಪ್ರಿಲ್‌ವರೆಗೆ ಈ ತಂಡದ 94 ಸೈನಿಕರು ಮೃತಪಟ್ಟಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಈ ತಂಡದ 62 ಸಿಬ್ಬಂದಿ ಅಸುನೀಗಿದ್ದರು.

ಆಫ್ಘನ್‌ ಯುದ್ಧಕ್ಕಿಂತ ಭೀಕರವೇಕೆ?
1979ರಿಂದ 1989ರವರೆಗೆ ಸೋವಿಯತ್‌ ಒಕ್ಕೂಟ ಹಾಗೂ ಆಫ್ಘನ್‌ ನಡುವೆ ಸತತ 9 ವರ್ಷಗಳು ಯುದ್ಧವಾದಾಗಲೂ ಮೃತಪಟ್ಟ ಸೈನಿಕರ ಸಂಖ್ಯೆ 56. ಆದರೆ, ಉಕ್ರೇನ್‌ ಜತೆಗಿನ ಯುದ್ಧದಲ್ಲಿ ರಷ್ಯಾ ಲಕ್ಷಾಂತರ ಸಾವುಗಳನ್ನು ಕಂಡಿದೆ.

1,50,000
ಕಳೆದ 1 ವರ್ಷದಲ್ಲಿ ಮೃತಪಟ್ಟ ರಷ್ಯಾ ಸೈನಿಕರು

1,00,000
ಯುದ್ಧದಿಂದ ಮೃತರಾದ ಉಕ್ರೇನ್‌ ಸೈನಿಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next