ನವದೆಹಲಿ: ಕೋವಿಡ್ 19 ಸೋಂಕಿನ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸುತ್ತಿರುವ ಸಂದರ್ಭದ ನಡುವೆಯೇ ಶನಿವಾರ(ಮೇ 1) ರಷ್ಯಾದಿಂದ ಸ್ಫುಟ್ನಿಕ-5 ಲಸಿಕೆ ಹೈದರಾಬಾದ್ ಗೆ ಸರಕು ಸಾಗಣೆ ವಿಮಾನದ ಮೂಲಕ ಬಂದಿಳಿದಿದೆ.
ಇದನ್ನೂ ಓದಿ:ಕೋವಿಡ್ ಕರ್ಪ್ಯೂ ಸಂದರ್ಭದಲ್ಲಿಯೂ ಎದೆಗುಂದದೆ ವೃದ್ಧೆ ಗಂಗಮ್ಮನ ಸ್ವಾಭಿಮಾನಿ ಬದುಕು
ಕಳೆದ ತಿಂಗಳು ಔಷಧ ನಿಯಂತ್ರಕ ಮಂಡಳಿ(ಡಿಸಿಜಿಐ), ತುರ್ತು ಬಳಕೆಗಾಗಿ ರಷ್ಯಾದಿಂದ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಡಾ.ರೆಡ್ಡೀಸ್ ಲ್ಯಾಬೋರೇಟರಿಸ್ ಗೆ ಅನುಮತಿ ನೀಡಿತ್ತು. ರಷ್ಯಾದ ಸ್ಫುಟ್ನಿಕ್ ಲಸಿಕೆಯಿಂದ ಭಾರತದಲ್ಲಿ ಮೇ 1ರಿಂದ ಪ್ರಾರಂಭವಾದ ಮೂರನೇ ಹಂತದ ಲಸಿಕೆ ಅಭಿಯಾನಕ್ಕೆ ಅನುಕೂಲವಾಗುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.
ಭಾರತದಲ್ಲಿ ಇಂದು ಮೊದಲ ಬಾರಿಗೆ ಕಳೆದ 24ಗಂಟೆಗಳಲ್ಲಿ ದಾಖಲೆಯ 4 ಲಕ್ಷಕ್ಕೂ ಅಧಿಕ ನೂತನ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿತ್ತು, ಇದರೊಂದಿಗೆ ಭಾರತದಲ್ಲಿ ಒಟ್ಟು ಕೋವಿಡ್ 19 ಸೋಂಕು ಪ್ರಕರಣ 1,91,64,969ಕ್ಕೆ ಏರಿಕೆಯಾದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿತ್ತು.
ಭಾರತಕ್ಕೆ ಮೇ ತಿಂಗಳ ಆರಂಭದಲ್ಲಿ 1,50,000ದಿಂದ 2,00,000 ಲಸಿಕೆ ಶೀಘ್ರವಾಗಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ರಷ್ಯಾದಲ್ಲಿರುವ ಭಾರತದ ರಾಯಭಾರಿ ಬಾಲಾವೆಂಕಟೇಶ್ ವರ್ಮಾ ತಿಳಿಸಿದ್ದರು.