Advertisement

ಅಕ್ಟೋಬರ್‌ ನಲ್ಲಿ ರಷ್ಯಾದ ಲಸಿಕೆ ಬಳಕೆಗೆ ಸಿದ್ಧ

11:06 AM Aug 02, 2020 | sudhir |

ಮಾಸ್ಕೋ: ಇಡೀ ಜಗತ್ತೇ ಕೋವಿಡ್ ಸೋಂಕಿಗೆ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಪೈಪೋಟಿಗೆ ಬಿದ್ದಿರುವ ನಡುವೆಯೇ, ರಷ್ಯಾವು ಲಸಿಕೆಯೊಂದರ ಪ್ರಯೋಗವನ್ನು ಪೂರ್ಣಗೊಳಿಸಿ ಅಕ್ಟೋಬರ್‌ನಲ್ಲೇ ದೇಶಾದ್ಯಂತ ಸಾಮೂಹಿಕ ಲಸಿಕೆ ಅಭಿಯಾನ ನಡೆಸಲು ಮುಂದಾಗಿದೆ.

Advertisement

ರಷ್ಯಾ ಆರೋಗ್ಯ ಸಚಿವ ಮಿಖಾಯಿಲ್‌ ಮುರಶೊ ಅವರೇ ಶನಿವಾರ ಈ ಮಾಹಿತಿ ನೀಡಿದ್ದಾರೆ. ಮಾಸ್ಕೋದಲ್ಲಿರುವ ಸರ್ಕಾರಿ ಸ್ವಾಮ್ಯದ ಸಂಶೋಧನಾ ಕೇಂದ್ರ ಗಮ ಲೇಯಾ ಇನ್‌ಸ್ಟಿಟ್ಯೂಟ್‌ ಈಗಾಗಲೇ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗಿಸುವ ಹಂತಗಳನ್ನು ಪೂರ್ಣಗೊಳಿಸಿದೆ. ಪ್ರಸ್ತುತ ಲಸಿಕೆಯ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವ ಮುರಶೊ ಹೇಳಿದ್ದಾರೆ. ಆರಂಭದಲ್ಲಿ ವೈದ್ಯರು ಮತ್ತು ಶಿಕ್ಷಕರಿಗೆ ಲಸಿಕೆ ನೀಡಲಾಗುವುದು. ಅಕ್ಟೋಬರ್‌ನಿಂದ ವ್ಯಾಪಕ ಲಸಿಕೆ ಅಭಿಯಾನ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪಾಶ್ಚಾತ್ಯ ಮಾಧ್ಯಮಗಳಿಂದ ಟೀಕೆ ಹಲವು ದೇಶಗಳು ಕೋವಿಡ್ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿವೆ. ಇನ್ನೂ ಯಾವುದೇ ದೇಶ ನಿರ್ಣಾಯಕ ಹಂತಕ್ಕೆ ತಲುಪಿಲ್ಲ. ಹೀಗಿರುವಾಗ ರಷ್ಯಾವು ಅಷ್ಟೊಂದು ತ್ವರಿತವಾಗಿ ಲಸಿಕೆಯನ್ನು ಬಿಡುಗಡೆ ಮಾಡಲು ಹಾತೊರೆಯುತ್ತಿರುವುದು ನೋಡಿದಾಗ, ಆ ದೇಶಕ್ಕೆ ವಿಜ್ಞಾನ ಮತ್ತು ಸುರಕ್ಷತೆಗಿಂತಲೂ ರಾಷ್ಟ್ರೀಯ ಘನತೆಯೇ ಮುಖ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಪಾಶ್ಚಾತ್ಯ ಮಾಧ್ಯಮಗಳು ಪ್ರಶ್ನಿಸಿವೆ.

ಇದೇ ವೇಳೆ, ರಷ್ಯಾದ ನೇರ ಹೂಡಿಕೆ ನಿಧಿ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್‌ ಅವರು ಕೋವಿಡ್ ಲಸಿಕೆ ಅಭಿವೃದ್ಧಿಯನ್ನು ಸೋವಿಯತ್‌ ಒಕ್ಕೂಟವು 1957ರಲ್ಲಿ ಜಗತ್ತಿನ ಮೊದಲ ಉಪಗ್ರಹ ಉಡಾವಣೆ ಮಾಡಿ ಇತಿ ಹಾಸ ಸೃಷ್ಟಿಸಿದ ಘಟನೆಗೆ ಹೋಲಿಸಿದ್ದಾರೆ. ರಷ್ಯಾದಲ್ಲಿ ಈ ವರೆಗೆ 8.45 ಲಕ್ಷ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 14,058 ಮಂದಿ ಸಾವಿಗೀಡಾಗಿದ್ದಾರೆ.

100 ಲಸಿಕೆ ಪ್ರಯೋಗ
ಭಾರತವೂ ಸೇರಿದಂತೆ ವಿವಿಧ ದೇಶಗಳು ಒಟ್ಟಾರೆ 100ಕ್ಕೂ ಅಧಿಕ ಲಸಿಕೆಗಳ ಪ್ರಯೋಗದಲ್ಲಿ ತೊಡಗಿವೆ. ಈ ಪೈಕಿ ಕನಿಷ್ಠ 4 ಲಸಿಕೆಗಳು (ಚೀನದ 3, ಬ್ರಿಟನ್‌ನ 1) ಮಾನವನ ಮೇಲಿನ ಮೂರನೇ ಹಂತದ ಪ್ರಯೋಗದಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next