ವಾಷಿಂಗ್ಟನ್ : ರಶ್ಯ ಮತ್ತು ಅಮೆರಿಕದ ಇಬ್ಬರು ಚಾಲಕ ಸಿಬಂದಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಒಯ್ಯುತ್ತಿದ್ದ ರಶ್ಯದ ಸೋಯಜ್ ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಇದು ಕಜಕ್‌ಸ್ಥಾನದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿರುವುದಾಗಿ ವರದಿಗಳು ತಿಳಿಸಿವೆ.
ರಾಕೆಟ್ ನಲ್ಲಿದ್ದ ಇಬ್ಬರು ಚಾಲಕ ಸಿಬಂದಿಗಳನ್ನು ಶೋಧಿಸಿ ಪಾರುಗೊಳಿಸಿ ಯತ್ನಗಳು ಸಫಲವಾಗಿದ್ದು ಅವರಿಬ್ಬರೂ ಈಗ ಸುರಕ್ಷಿತರಾಗಿದ್ದಾರೆ ಎಂದು ನಾಸಾ ಹೇಳಿದೆ.
ನಾಸಾದ ವ್ಯೋಮಯಾನಿ ನಿಕ್ ಹೇಗ್ ಮತ್ತು ರಶ್ಯದ ಬಾಹ್ಯಾಕಾಶ ಸಂಸ್ಥೆಯ ಗಗನ ಯಾತ್ರಿ ಅಲೆಕ್ಸಿ ಒವ್‌ಶಿನಿನ್ ಅವರನ್ನು ಒಳಗೊಂಡಿದ್ದ ರಶ್ಯದ ಸೋಯಜ್ ರಾಕೆಟ್ ನಸುಕಿನ 4.40ರ ವೇಳೆಗೆ ಆಗಸಕ್ಕೆ ನೆಗೆದಿತ್ತು.
ಒಡನೆಯೇ ಅದರ ಬೂಸ್ಟರ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂತು. ಕೂಡಲೇ ಅದನ್ನು ತುರ್ತಾಗಿ ಭೂಮಿಗೆ ತಿರುಗಿಸಿ ಬಲವಂತದಿಂದ ಇಳಿಸಲಾಯಿತು. ಇಬ್ಬರೂ ಯಾನಿಗಳು ಸುರಕ್ಷಿತರಿದ್ದಾರೆ ಎಂದು ನಾಸಾ ಹೇಳಿಕೆ ತಿಳಿಸಿದೆ.