ರಷ್ಯಾ-ಉಕ್ರೇನ್ ನಡುವಿನ ಯುದ್ಧದ ತೀವ್ರತೆ ಜಾಗತಿಕ ರಾಷ್ಟ್ರಗಳಲ್ಲಿ ಭೀತಿ ಹುಟ್ಟಿಸಿದ್ದರೆ, ಅದೇ ಯುದ್ಧಭೂಮಿಯಲ್ಲಿ ರಷ್ಯಾದ ಸೈನಿಕನೊಬ್ಬ ಬಿಲ್ಲು-ಬಾಣವನ್ನು ಹಿಡಿದು ಯುದ್ಧಕ್ಕೆ ಅಣಿಯಾಗಿದ್ದಾನೆ.
ಬಿಲ್ಲು-ಬಾಣ ಹಿಡಿದುರುವ ಆತನ ಚಿತ್ರಪಟ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ರಷ್ಯಾದ ಆಧುನಿಕ ಯುದ್ಧಾಸ್ತ್ರವೆಂದು ನೆಟ್ಟಿಗರು ಅಪಹಾಸ್ಯ ಮಾಡಿದ್ದಾರೆ.
ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯದ ಸಲಹೆಗಾರ ಆ್ಯಂಟನ್ ಗೆರಾಶ್ಚೆಂಕೊ ರಷ್ಯಾ ಯೋಧನ ಫೋಟೋ ಹಂಚಿಕೊಂಡು, ಈ ಯೋಧ ಬಿಲ್ಲುಬಾಣಗಳಿಂದ ಸಜ್ಜಿತನಾಗಿದ್ದಾನೆ, ರೈಫಲ್‌ಗಳು ಅವನ ಬೆನ್ನಿನಲ್ಲಿವೆ. ಆತನ ಯುದ್ಧ ಕುದುರೆ ಅಲ್ಲೆ ಎಲ್ಲಾದರೂ ಇರಬಹುದೇ ಎಂದು ವ್ಯಂಗ್ಯ ಮಾಡಿದ್ದಾರೆ.
ನೆಟ್ಟಿಗರು ಫೋಟೋ ಬಗ್ಗೆ ಕಮೆಂಟ್ ಮಾಡಿ, ಉಕ್ರೇನ್ ಮೇಲೆ ಯುದ್ಧ ಮಾಡಿ, ರಷ್ಯಾದ ಬತ್ತಳಿಕೆಯ ಶಸ್ತ್ರಾಸ್ತ್ರಗಳೆಲ್ಲ ಖಾಲಿಯಾಗಿ ಈಗ ಉಳಿದಿರುವುದು ಬಿಲ್ಲು ಬಾಣ ಅಷ್ಟೇ ಎಂದು ಅಪಹಾಸ್ಯ ಮಾಡಿದ್ದು, ಈ ಚಿತ್ರ 3.4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.