ರಷ್ಯಾ : ಇತ್ತೀಚೆಗೆ ಜನರು ದೊಡ್ಡ ದೊಡ್ಡ ಸಾಹಸಗಳಿಗೆ ಮುಂದಾಗಿದ್ದಾರೆ. ಥ್ರಿಲ್ ಪಡೆಯುವ ಉದ್ದೇಶದಿಂದ ಏನನ್ನು ಬೇಕಾದರು ಮಾಡಲು ಸಿದ್ಧರಿದ್ದಾರೆ. ಎತ್ತರದ ಬೆಟ್ಟದ ತುದಿಗಳಿಂದ ಜಿಗಿಯುವುದು, ಪ್ಯಾರಚೂಟ್ ಕಟ್ಟಿಕೊಂಡು ಬೀಳುವುದು. ವಿಮಾನಗಳಿಂದ ಜಿಗಿಯುವುದು, ಇಂತಹ ಹತ್ತಾರು ಸಾಹಸಗಳಲ್ಲಿ ಜನರು ಖುಷಿ ಪಡುತ್ತಿದ್ದಾರೆ. ಇವು ನೋಡಲು ಎಷ್ಟು ಭಯಂಕರವಾಗಿರುತ್ತವೆ ಅಂದ್ರೆ ಒಂದು ಕ್ಷಣ ಮೈ ಜುಮ್ಮೆನಿಸುತ್ತೆ.
ಇತ್ತೀಚೆಗೆ ರಷ್ಯಾದಲ್ಲಿ ಇಂತಹದ್ದೇ ಒಂದು ಭಯಾನಕ ದೃಶ್ಯ ಕಂಡು ಬಂದಿದೆ. ಆದ್ರೆ ಇದು ಅಚಾನಕ್ಕಾಗಿ ನಡೆದ ಘಟನೆ. ಹಾರುವ ಹೆಲಿಕಾಪ್ಟರ್ ಗೆ ಪ್ಯಾರಾಚೂಟ್ ಸಿಕ್ಕಿಕೊಂಡು ಅದರಲ್ಲಿದ್ದ ವ್ಯಕ್ತಿಯೊಬ್ಬ ಹೆಲಿಕಾಪ್ಟರ್ ಬಾಲಕ್ಕೆ ಸಿಕ್ಕಿಕೊಂಡು ನೇತಾಡಿದ್ದಾನೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.
ಹೌದು ರಷ್ಯಾದ ಚಿತ ಪ್ರದೇಶದ ಕಶ್ತಕ್ ಎಂಬಲ್ಲಿ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳು ಹೇಳುವ ಪ್ರಕಾರ ಹಾರುತ್ತಿದ್ದ ಪ್ಯಾರಾಚೂಟ್ ತೊಂದರೆಗೆ ಒಳಗಾಗಿದೆ. ನಂತ್ರ ಅದೇ ಪ್ರದೇಶದಲ್ಲಿ ಹಾರುತ್ತಿದ್ದ ಹೆಲಿಕಾಪ್ಟರ್ ಗೆ ಸಿಕ್ಕಿಕೊಂಡಿದೆ. ಈ ವಿಡಿಯೋವನ್ನು ಮ್ಯಾಕ್ಸಿಮ್ ಎಂಬುವವು ಸೆರೆ ಹಿಡಿದಿದ್ದಾರೆ. ಅದೃಷ್ಟವಶಾತ್ ಯಾರ ಪ್ರಾಣ ಹಾನಿಯಾಗಿಲ್ಲ.
ವಿಡಿಯೋ ಶೂಟ್ ಮಾಡಿರುವ ಮ್ಯಾಕ್ಸಿಮ್ ಗೆ ಇಲ್ಲಿ ತೊಂದರೆಯಾಗುತ್ತಿದೆ ಎಂದು ತಿಳಿದ ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಅಲ್ಲಿಂದ ಮಿಲಿಟರಿ ಪೈಲೆಟ್ ಗೆ ಮಾಹಿತಿ ನೀಡಿದ್ದು ರಕ್ಷಣಾ ಕಾರ್ಯ ಸುಗಮವಾಗಿದೆ.