ಮಾಸ್ಕೋ:ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮುಂದುವರಿದಿದ್ದು, ರಷ್ಯಾ ಪಡೆಗಳು ದಕ್ಷಿಣ ಉಕ್ರೇನ್ ನಲ್ಲಿರುವ ಹೆರಿಗೆ ಆಸ್ಪತ್ರೆಯೊಂದರ ಮೇಲೆ ರಾಕೆಟ್ ದಾಳಿ ನಡೆಸಿದ ಪರಿಣಾಮ ಹಸುಗೂಸು ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಬುಧವಾರ (ನವೆಂಬರ್ 23) ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಸಿ.ವಿ.ಆನಂದ ಬೋಸ್ ಪ್ರಮಾಣ ವಚನ ಸ್ವೀಕಾರ
ಘಟನೆಯಲ್ಲಿ ಅವಶೇಷಗಳಡಿ ಸಿಲುಕಿದ್ದ ಮಗುವಿನ ತಾಯಿ ಮತ್ತು ವೈದ್ಯರನ್ನು ರಕ್ಷಿಸಲಾಗಿದೆ ಎಂದು ವರದಿ ವಿವರಿಸಿದೆ. ಝೆಪೊರಿಝಿಯಾ ನಗರಕ್ಕೆ ಸಮೀಪ ಇರುವ ವಿಲಿನಿನ್ಸ್ಕ್ ಮೇಲಿನ ರಷ್ಯಾದ ದಾಳಿಯು ಹತ್ತನೇ ತಿಂಗಳಿಗೆ ಕಾಲಿಟ್ಟಿದೆ. ರಾಕೆಟ್ ದಾಳಿಯಿಂದಾಗಿ ಆಸ್ಪತ್ರೆಗಳು, ವೈದ್ಯಕೀಯ ಸೌಲಭ್ಯಗಳು ಸಂಪೂರ್ಣವಾಗಿ ನಾಶವಾಗಿರುವುದಾಗಿ ವರದಿ ತಿಳಿಸಿದೆ.
ಮಾರ್ಚ್ 9ರಂದು ಬಂದರು ನಗರಿ ಮಾರಿಯುಪೋಲ್ ನಲ್ಲಿ ರಷ್ಯಾದ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹೆರಿಗೆ ಆಸ್ಪತ್ರೆ ನಾಶಗೊಂಡಿತ್ತು. ಇಂದು ನಡೆಸಿದ ದಾಳಿಯಲ್ಲಿ ನವಜಾತ ಶಿಶು ಸಾವನ್ನಪ್ಪಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದಾಗಿ ವರದಿ ತಿಳಿಸಿದೆ.