Advertisement

ಉಕ್ರೇನ್‌ನ ಖೆರ್ಸಾನ್‌ನಲ್ಲಿ ಇನ್ನು ಮುಂದೆ ರಷ್ಯಾ ಕರೆನ್ಸಿ

09:31 AM Apr 29, 2022 | Team Udayavani |

ಕೀವ್‌/ಮಾಸ್ಕೋ: ಉಕ್ರೇನ್‌ನ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ ಗುರುವಾರ ಹೊಸ ದೊಂದು ಘೋಷಣೆ ಮಾಡಿದೆ. ರಷ್ಯಾ ಪಡೆಯು ಪೂರ್ತಿಯಾಗಿ ವಶಪಡಿಸಿಕೊಂಡಿರುವ ಉಕ್ರೇನ್‌ನ ಖೆರ್ಸಾನ್‌ ಪ್ರಾಂತ್ಯದಲ್ಲಿ ಮೇ 1ರಿಂದ ರಷ್ಯಾದ ರುಬೆಲ್‌ ಅಧಿಕೃತ ಕರೆನ್ಸಿಯಾಗಿರಲಿದೆ. ಅಲ್ಲಿನ ಜನರಿಗೆ ಕರೆನ್ಸಿ ಬದಲಾವಣೆ ಮಾಡಿಕೊಳ್ಳಲು 4 ತಿಂಗಳ ಕಾಲಾವಕಾಶ ಕೊಡಲಾಗು ವುದು ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಹಾಗೆಯೇ ರಷ್ಯಾದ ಭೂ ಪ್ರದೇಶದ ಮೇಲೆ ದಾಳಿ ನಡೆಸಲು ಉಕ್ರೇನ್‌ಗೆ ಪಾಶ್ಚಿಮಾತ್ಯ ರಾಷ್ಟ್ರಗಳು ಬೆಂಬಲಿಸುತ್ತಿರುವ ಬಗ್ಗೆಯೂ ರಷ್ಯಾ ಕೆಂಡ ಕಾರಿದೆ. ಇದೇ ರೀತಿ ಬೆಂಬಲ ಮುಂದುವರಿಸಿದರೆ, ಪಾಶ್ಚಿ ಮಾತ್ಯ ರಾಷ್ಟ್ರಗಳು ಅದಕ್ಕೆ ತಕ್ಕ ಸ್ಪಂದನೆಯನ್ನು ನಮ್ಮಿಂದ ಅನುಭವಿಸಬೇಕಾಗುತ್ತದೆ ಎಂದು ಕಟು ವಾಗಿ ಎಚ್ಚರಿಸಿದೆ.

ಫೆ.24ರಿಂದ ಈಚೆಗೆ ರಷ್ಯಾ 8,500ಕ್ಕೂ ಅಧಿಕ ಯುದ್ಧಾಪರಾಧ ಮಾಡಿದೆ ಎಂದು ಉಕ್ರೇನ್‌ ದೂರಿದೆ. ಈ ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆಸು ತ್ತಿರುವುದಾಗಿಯೂ ತಿಳಿಸಿದೆ. ಈ ನಡುವೆ, ಉಕ್ರೇನ್‌ ರಾಜಧಾನಿಯ ಕೀವ್‌ನ ಬೊರೊಡಿಯಾಕಾ ಎಂಬ ಲ್ಲಿಗೆ  ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರೆಸ್‌ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೂಡಲೇ ಕಾಳಗ ನಿಲ್ಲಬೇಕು ಎಂದು ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next