“”ಈಗ ಯುದ್ಧದ ಕಾಲವಲ್ಲ. ಏನು ಸಮಸ್ಯೆಗಳಿದ್ದರೂ, ರಷ್ಯಾ ಮತ್ತು ಉಕ್ರೇನ್ ನಾಯಕರು ಪರಸ್ಪರ ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು” ಎಂದು ಉಕ್ರೇನ್‌ಗೆ ಭೇಟಿ ಪ್ರಧಾನಿ ನರೇಂದ್ರ ಮೋದಿಯವರು ಆ ದೇಶದ ಅಧ್ಯಕ್ಷ ವೊಲೊದಮಿರ್ ಝೆಲೆನ್‌ಸ್ಕಿ ಅವರಿಗೆ ಮನವರಿಕೆ ಮಾಡಿ ವಾಪಸಾದ ಬೆನ್ನಲ್ಲಿಯೇ ಈ ಬೆಳವಣಿಗೆಗಳು ನಡೆದಿವೆ.
Advertisement
ರಷ್ಯಾ ನಡೆಸಿದ ದಾಳಿಗೆ ಕೆಲವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ರಷ್ಯಾ ನಡೆಸಿದ ದಾಳಿಯು ಉಕ್ರೇನ್‌ನ ಇಂಧನ ವಲಯಕ್ಕೆ ಭಾರೀ ನಷ್ಟವನ್ನುಂಟು ಮಾಡಿದೆ ಎಂದು ಝೆಲೆನ್‌ಸ್ಕಿ ತಿಳಿಸಿದ್ದಾರೆ. ಪಶ್ಚಿಮ ಉಕ್ರೇನ್‌ನ ಕಿವ್‌ನಿಂದ ಒಡೆಸಾ ಮತ್ತು ಖಾರ್ಕಿವ್ ಪ್ರದೇಶದಲ್ಲಿನ ಬಹುತೇಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ರಷ್ಯಾ ನದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ. ಸೋಮವಾರವೂ ರಷ್ಯಾ ಉಕ್ರೇನ್ ಮೇಲೆ ದಾಳಿಯನ್ನು ಮುಂದುವರಿಸಿದೆ. ಈ ವೇಳೆ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ರಷ್ಯಾದ ಪ್ರಧಾನ ನಗರವಾಗಿರುವ ಸರಟೋವ್ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. ಈ ಪೈಕಿ ಒಂದು ಡ್ರೋನ್ ಆ ನಗರದ ಅತಿ ಎತ್ತರದ ಕಟ್ಟಡಕ್ಕೆ ಅಪ್ಪಳಿಸಿದೆ. ಈ ಕುರಿತು ವೀಡಿಯೋ ವೈರಲ್ ಆಗಿದೆ. ನೆಟ್ಟಿಗರೆಲ್ಲರೂ ಇದೊಂದು 9/11 ಮಾದರಿಯ ದಾಳಿಯನ್ನು ಪ್ರತಿಬಿಂಬಿಸುವಂತೆ ಇದೆ ಎಂದು ಅಚ್ಚರಿಪಟ್ಟಿ ದ್ದಾರೆ. 2001ರಲ್ಲಿ ಅಲ್-ಖೈದಾ ಉಗ್ರರು ನ್ಯೂಯಾರ್ಕ್‌ನಲ್ಲಿರುವ ವಲ್ಡ್ ಟ್ರೇಡ್ ಸೆಂಟರ್‌ಗೆ ವಿಮಾನ ಢಿಕ್ಕಿ ಹೊಡೆಸಿ ದಾಳಿ ನಡೆಸಿದ್ದರು.