Advertisement

ಈಗ ಲುವ್ಯೂ ನಗರ ಟಾರ್ಗೆಟ್‌

12:01 AM Mar 19, 2022 | Team Udayavani |

ಕೀವ್‌/ಮಾಸ್ಕೋ: ಉಕ್ರೇನ್‌ ರಾಜಧಾನಿ ಕೀವ್‌, ಖಾರ್ಕಿವ್‌, ಮರಿಯುಪೋಲ್‌ನಲ್ಲಿ ಆಕ್ರಮಣ ಮುಂದುವರಿಸಿರುವ ರಷ್ಯಾ ಪಡೆ, ಗುರುವಾರ ತಡರಾತ್ರಿಯಿಂದ ನಿರಂತರವಾಗಿ ಲುವ್ಯೂ ನಗರದ ಮೇಲೆ ಕ್ಷಿಪಣಿಗಳ ಮಳೆ ಸುರಿಸಿದೆ.

Advertisement

ಕಪ್ಪು ಸಮುದ್ರದಿಂದ ಕ್ಷಿಪಣಿಗಳು ತೂರಿ ಬಂದಿದ್ದು, ನಗರದ ಸೇನಾ ವಿಮಾನಗಳ ರಿಪೇರಿ ಘಟಕದ ಮೇಲೆ ಹಲವು ಕ್ಷಿಪಣಿಗಳು ಅಪ್ಪಳಿಸಿವೆ. ದಾಳಿ ಹಿನ್ನೆಲೆಯಲ್ಲಿ ಘಟಕ ವನ್ನು ಸ್ಥಗಿತಗೊಳಿಸ ಲಾಗಿದೆ. ಇದಲ್ಲದೇ ಬಸ್‌ ರಿಪೇರಿ ಘಟಕ ವೊಂದು ದಾಳಿಗೀಡಾ ಗಿದೆ. ಸಾವು- ನೋವಿನ ಮಾಹಿತಿ ಲಭ್ಯವಾ ಗಿಲ್ಲ. ಲುವ್ಯೂ ನಗರದ ಶಾಲೆಗಳು, ಆಸ್ಪತ್ರೆ ಗಳು, ವಸತಿ ಕಟ್ಟಡಗಳಿಗೆ ಅಪ್ಪಳಿಸಿರುವ ಕ್ಷಿಪಣಿಗಳ ಪೈಕಿ ಎರಡನ್ನು ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಮೂಲಕ ಹೊಡೆದುರುಳಿಸಲಾ ಗಿದೆ ಎಂದು ಉಕ್ರೇನ್‌ ವಾಯುಪಡೆ ತಿಳಿಸಿದೆ.

ಶುಕ್ರವಾರ ಬೆಳಗ್ಗೆ ಪೂರ್ವ ಉಕ್ರೇನ್‌ನ ಬಹು ಮಹಡಿ ಕಟ್ಟಡವೊಂದರ ಮೇಲೆ ರಷ್ಯಾ  ಶೆಲ್‌ ದಾಳಿ ನಡೆಸಿದ್ದು, ಒಬ್ಬ ವ್ಯಕ್ತಿ ಮೃತಪಟ್ಟು, ಮತ್ತೂಬ್ಬರು ಗಾಯಗೊಂಡಿದ್ದಾರೆ. ಕ್ರಮಾಟೋಸ್ಕ್ ನಗರದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.  ಮರಿಯುಪೋಲ್‌ನಲ್ಲಿ ದಾಳಿಗೆ ತುತ್ತಾದ ಥಿಯೇಟರ್‌ನ ಅವಶೇಷಗಳಡಿಯಿಂದ 136 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ನೂರಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ.

ಇನ್ನೊಂದೆಡೆ, ಯುದ್ಧಕ್ಕೆ ಅಂತ್ಯಹಾಡುವ ನಿಟ್ಟಿ ನಲ್ಲಿ ಪರಿಹಾರ ಕಂಡುಕೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ ಸಂಧಾನ ಮಾತುಕತೆಗೆ ಉಕ್ರೇನ್‌ ಅಡ್ಡ ಗಾಲು ಹಾಕುತ್ತಿದೆ ಎಂದು ರಷ್ಯಾ ಅಧ್ಯಕ್ಷ ಪುತಿನ್‌ ಆರೋಪಿಸಿದ್ದಾರೆ.

ಬೈಡೆನ್‌ -ಕ್ಸಿ ಮಾತುಕತೆ: ಉಕ್ರೇನ್‌ನಲ್ಲಿ ನಡೆಯುತ್ತಿ ರುವ ಯುದ್ಧವು ಯಾರ ಹಿತಾಸಕ್ತಿಯೂ ಅಲ್ಲ ಎಂದು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿದ್ದಾರೆ. ಕ್ಸಿ ಹಾಗೂ ಅಮೆರಿಕ ಅಧ್ಯಕ್ಷ ಬೈಡೆನ್‌ ಶುಕ್ರವಾರ ಮಾತುಕತೆ ನಡೆಸಿದ್ದು, “ಅಮೆರಿಕ ಮತ್ತು ಚೀನ ದೇಶಗಳು ಅಂತಾರಾಷ್ಟ್ರೀಯ ಜವಾಬ್ದಾರಿಯನ್ನು ಹೊತ್ತುಕೊಂಡು, ಶಾಂತಿ ಮೂಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕು’ ಎಂದೂ ಕ್ಸಿ ಅಭಿಪ್ರಾಯಪಟ್ಟಿದ್ದಾರೆ.

Advertisement

ನಕಲಿ ಸುದ್ದಿ: ರಷ್ಯಾಗೆ ಚೀನ ತನ್ನ ಸೇನೆಯನ್ನು ರವಾನಿಸಿದೆ ಎಂಬ ಸುದ್ದಿಯನ್ನು ಚೀನ ಸರಕಾರ ನಿರಾಕರಿಸಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಹೇಳಿದೆ. ರಷ್ಯಾ ಗಡಿಯಲ್ಲಿ ಚೀನದ ಸೇನಾ ಟ್ರಕ್‌ಗಳ ಬೆಂಗಾವಲು ಪಡೆ ನಿಂತಿರುವುದಾಗಿ ತಿರುಚ ಲಾದ ಫೋಟೋಗಳನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಬಿಡುಗಡೆ ಮಾಡಲಾಗಿದೆ. 2021ರ ಫೋಟೋಗಳನ್ನು ತಿರುಚಿ ಈಗಿನವು ಎಂದು ತೋರಿಸಲಾಗುತ್ತಿದೆ ಎಂದು ಚೀನ ಸ್ಪಷ್ಟಪಡಿಸಿದೆ.

ಪುತಿನ್‌ ಬಲಪ್ರದರ್ಶನ :

ರಷ್ಯಾದ ವರ್ಲ್ಡ್ ಕಪ್‌ ಸ್ಟೇಡಿಯಂನಲ್ಲಿ ಶುಕ್ರವಾರ ಬಲಪ್ರದರ್ಶನ ಮಾಡಿರುವ ಅಧ್ಯಕ್ಷ ಪುತಿನ್‌, “ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾ ಯಶಸ್ಸು ಸಾಧಿಸಿದೆ’ ಎಂದು ಘೋಷಿಸಿದ್ದಾರೆ. “ಝಡ್‌’ ಚಿಹ್ನೆಯ ಧ್ವಜಗಳನ್ನು ಹಿಡಿದ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಅವರು ಭಾಷಣವನ್ನೂ ಮಾಡಿದ್ದಾರೆ. ಉಕ್ರೇನ್‌ನಲ್ಲಿ ಹೋರಾಡುತ್ತಿರುವ ರಷ್ಯಾ ಸೈನಿಕರನ್ನೂ ಕೊಂಡಾಡಿದ್ದಾರೆ. ಪುತಿನ್‌ ಬೆಂಬಲಿಗರ “ರಷ್ಯಾ, ರಷ್ಯಾ, ರಷ್ಯಾ’ ಘೋಷಣೆ ಸ್ಟೇಡಿಯಂ ನಾದ್ಯಂತ ಅನುರಣಿಸಿದೆ.

ಓಡಿ ಹೋಗದೆ, ಸಹಾಯಕ್ಕೆ ನಿಂತ ಶ್ರೀಮಂತ :

ಯುದ್ಧಪೀಡಿತ ಉಕ್ರೇನ್‌ನಿಂದ 30 ಲಕ್ಷಕ್ಕೂ ಅಧಿಕ ಮಂದಿ ಬೇರೆ ರಾಷ್ಟ್ರಗಳಿಗೆ ತೆರಳಿದ್ದಾರೆ. ಆದರೆ ಅಲ್ಲಿನ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾಗಿರುವ ವೆÕವೊಲೊಡ್‌ ಕೊಜೆಮ್ಯಾಕ ಅವರು ಅಲ್ಲಿಯೇ ಇದ್ದುಕೊಂಡು ಉಕ್ರೇನ್‌ ಸೇನೆ ಮತ್ತು ನಾಗರಿಕರ ಸಹಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದ ಹಾಗೆ ಫೋಬ್ಸ್ìನ 2020ನೇ ಸಾಲಿನ ಉಕ್ರೇನ್‌ನ ಶ್ರೀಮಂತರ ಪಟ್ಟಿಯಲ್ಲಿ ವೆÕವೊಲೊಡ್‌ ಕೊಜೆಮ್ಯಾಕ ಅವರು 88ನೇ ಸ್ಥಾನ ಪಡೆದಿದ್ದಾರೆ. 70,500 ಹೆಕ್ಟೇರ್‌ಗೂ ಅಧಿಕ ಭೂಮಿ, 1500ಕ್ಕೂ ಅಧಿಕ ಸಿಬಂದಿ ಹೊಂದಿರುವ ಈ ಶ್ರೀಮಂತ ತಾನು ಬಚಾವಾಗುವುದನ್ನು ಮಾತ್ರ ನೋಡದೆ, ಬೇರೆಯವರಿಗಾಗಿ ದುಡಿಯುತ್ತಿರುವುದು ಅನೇಕರಿಗೆ ಸ್ಫೂರ್ತಿ ತುಂಬಿದೆ.

ಯುದ್ಧ ಮಾಡುತ್ತೇನೆ ಎಂದ 98ವೃದ್ಧೆ! :

ಉಕ್ರೇನ್‌ನ ಮೇಲೆ ಸತತ ದಾಳಿ ನಡೆಸುತ್ತಿರುವ ರಷ್ಯಾವನ್ನು ಎದುರಿಸಲು ಉಕ್ರೇನ್‌ನ ನಾಗರಿಕರೆಲ್ಲರೂ ಯೋಧರಾಗುತ್ತಿದ್ದಾರೆ. ಅದೇ ರೀತಿ ಈ ಹಿಂದೆ 2ನೇ ವಿಶ್ವ ಯುದ್ಧದಲ್ಲಿ ಹೋರಾಡಿದ್ದ 98 ವರ್ಷದ ವೃದ್ಧೆ ಒಲ್ಹಾ ತೆÌರ್ಡೊಖೀಬೋವಾ ಇದೀಗ ರಷ್ಯಾ ವಿರುದ್ಧ ಬಂದೂಕು ಹಿಡಿದು ಹೋರಾಡಲು ಸಿದ್ಧರಾಗಿದ್ದಾರೆ. ಈ ವಿಚಾರವಾಗಿ ಅವರು ಸೇನೆಯನ್ನೂ ಕೇಳಿಕೊಂಡಿದ್ದಾರೆ. ಆದರೆ ಅವರ ವಯಸ್ಸಿನ ಕಾರಣದಿಂದಾಗಿ ಅವರಿಗೆ ನಾವು ವಿಶ್ರಾಂತಿ ತೆಗೆದುಕೊಳ್ಳಲು ತಿಳಿಸಿದ್ದೇವೆ ಎಂದು ಉಕ್ರೇನ್‌ನ ವಿದೇಶಾಂಗ ಸಚಿವಾಲಯ ತಿಳಿಸಿದೆ. ಖಂಡಿತವಾಗಿಯೂ ಅವರು ತಮ್ಮ ಎರಡನೇ ಯುದ್ಧದ ವಿಜಯವನ್ನು ಆಚರಿಸುವಂತೆ ಮಾಡುತ್ತೇವೆ ಎಂದೂ ಸಚಿವಾಲಯ ಹೇಳಿದೆ.

ಭಾರತದ ರಾಯಭಾರ  ಕಚೇರಿ ಪೋಲೆಂಡ್‌ಗೆ ಶಿಫ್ಟ್ :

ಯುದ್ಧ ಮುಂದುವರಿದಿರುವ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿನ ಭಾರತದ ರಾಯಭಾರ ಕಚೇರಿಯನ್ನು ಪೋಲೆಂಡ್‌ಗೆ ಶಿಫ್ಟ್ ಮಾಡಲಾಗಿದೆ. ಪೋಲೆಂಡ್‌ನ‌ ರಾಜಧಾನಿ ವಾರ್ಸಾದಲ್ಲಿ ಇನ್ನು ಮುಂದೆ ಕಚೇರಿ ಕಾರ್ಯನಿರ್ವಹಿಸಲಿದೆ. “ಕಚೇರಿಯ ಕಾರ್ಯನಿರ್ವ ಹಣೆ ಮುಂದುವರಿಯುತ್ತದೆ’ ಎಂದು ಹೇಳಿರುವ ರಾಯಭಾರ ಕಚೇರಿಯು, ಸಂಪರ್ಕಿಸಬೇಕಾದ ವರಿಗೆ ದೂರವಾಣಿ ಸಂಖ್ಯೆ ಮತ್ತು ಇಮೇಲ್‌ ವಿಳಾಸವನ್ನೂ ನೀಡಿದೆ. ಜತೆಗೆ ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಸಹಾ ಯವಾಣಿ ಸಂಖ್ಯೆಯನ್ನೂ ಒದಗಿಸಿದೆ. ಇದಕ್ಕೂ ಮುನ್ನ, ಕೀವ್‌ನಲ್ಲಿದ್ದ ಕಚೇರಿಯನ್ನು ಲುವ್ಯೂಗೆ ಸ್ಥಳಾಂತರಿ ಸ ಲಾಗಿತ್ತು. ಆದರೆ ಈಗ ಲುವ್ಯೂನಲ್ಲೂ ರಷ್ಯಾ ದಾಳಿ ತೀವ್ರ ಗೊಂಡಿ ರುವ ಕಾರಣ ಪೋಲೆಂಡ್‌ಗೆ ಸ್ಥಳಾಂತರಿಸಲಾಗಿದೆ.

ಯುದ್ಧಪೀಡಿತ ದೇಶದಲ್ಲಿನ ಮಾನವೀಯ ಪರಿಸ್ಥಿತಿ ಹದಗೆಡುತ್ತಿರುವುದು ಕಳವಳಕಾರಿಯಾ ಗಿದೆ. ಈ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು. ಭಾರತವು 22,500 ನಾಗರಿಕರಲ್ಲದೇ ಇತರ 18 ದೇಶಗಳ ನಾಗರಿಕರನ್ನೂ ರಕ್ಷಿಸಿದೆ.-ತಿರುಮೂರ್ತಿ, ಯುಎನ್‌ಎಸ್‌ಸಿ ಭಾರತದ ರಾಯಭಾರಿ

Advertisement

Udayavani is now on Telegram. Click here to join our channel and stay updated with the latest news.

Next