Advertisement

ನಮಸ್ತೇ ಬೋರಿಸ್‌; ಇಂಗ್ಲೆಂಡ್‌ ಪ್ರಧಾನಿಯ ಭಾರತ ಭೇಟಿ ಅಜೆಂಡಾವೇನು?

09:59 AM Apr 18, 2022 | Team Udayavani |
ಈ ಹಿಂದೆ ಗಣರಾಜ್ಯೋತ್ಸವ ದಿನಕ್ಕೆ ವಿಶೇಷ ಅತಿಥಿಯಾಗಿ, ಬಳಿಕ ಕೋವಿಡ್‌ ಕಾಲಘಟ್ಟದಲ್ಲಿ ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಭಾರತಕ್ಕೆ ಆಗಮಿಸಲು ದಿನಾಂಕ ನಿಶ್ಚಯವಾಗಿತ್ತು. ಇವೆ ರಡೂ ಸಂದರ್ಭಗಳ ಪ್ರವಾಸವನ್ನೂ ಕೊರೊನಾ ಲಾಕ್‌ಡೌನ್‌ ಆಹುತಿ ತೆಗೆದುಕೊಂಡಿತ್ತು. ಈಗ 3ನೇ ಬಾರಿಗೆ ಪ್ರವಾಸ ಕೈಗೂಡಿದೆ. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿಎ) ಚಾಲ್ತಿಯಲ್ಲಿರುವ ವಿಷಯ. ಸ್ಪರ್ಧಾತ್ಮಕ ಬೆಲೆಯಲ್ಲಿ ವಸ್ತುವನ್ನು ರಫ್ತು ಮಾಡುವ, ಅಗ್ಗದ ದರದಲ್ಲಿ ಕಚ್ಚಾವಸ್ತುವನ್ನು ಆಮದು ಮಾಡಿಕೊಳ್ಳುವ ಅವಕಾಶಕ್ಕೆ ಎಫ್ಟಿಎ ಅನುವು ಮಾಡಿಕೊಡುತ್ತದೆ. ಈ ವಿಚಾರದಲ್ಲಿ ಭಾರತ- ಇಂಗ್ಲೆಂಡ್‌ ನಡುವೆ 2 ಸುತ್ತಿನ ಮಾತುಕತೆ ಪೂರ್ಣಗೊಂಡಿದೆ...
Now pay only for what you want!
This is Premium Content
Click to unlock
Pay with

ರಷ್ಯಾ- ಉಕ್ರೇನ್‌ ಯುದ್ಧ ಶುರುವಾದ ಬಳಿಕ ಇದೇ ಮೊದಲ ಬಾರಿಗೆ ಯುರೋಪಿಯನ್‌ ರಾಷ್ಟ್ರದ ಮೇರು ನಾಯಕರೊಬ್ಬರು ಭಾರತದ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಎ.21ರಂದು ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಭಾರತಕ್ಕೆ ಇದೇ ಮೊದಲ ಭೇಟಿ ಕೈಗೊಳ್ಳಲಿದ್ದಾರೆ. 2 ದಿನಗಳ ಪ್ರವಾಸದ ಹಿಂದಿರುವ ಅಜೆಂಡಾ ಏನು?

Advertisement

 ಉಕ್ರೇನ್‌ ಬೆನ್ನಲ್ಲೇ ಭಾರತದ ಭೇಟಿ ಏಕೆ?
ಐದಾರು ದಿನಗಳ ಹಿಂದಷ್ಟೇ ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಓಡಾಡಿ ಬಂದಿದ್ದರು. ಬೋರಿಸ್‌ ಅವರ ಈ ನಿಲುವನ್ನು ರಷ್ಯಾ ತೀವ್ರ ಖಂಡಿಸಿತ್ತು. ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧ ಹೇರಿರುವ ಇಂಗ್ಲೆಂಡಿಗೆ, ಹಲವು ಉತ್ಪನ್ನಗಳ ವಿಚಾರದಲ್ಲಿ ಭಾರತವನ್ನು ಅವಲಂಬಿಸುವ ಅನಿವಾರ್ಯತೆ ಒದಗಿದೆ. ಅಲ್ಲದೆ, ಯುದ್ಧದ ವಿಚಾರದಲ್ಲಿ ತಟಸ್ಥ ನೀತಿ ಅನುಸರಿಸುತ್ತ, ಅತ್ತ ರಷ್ಯಾದೊಂದಿಗೂ ಉತ್ತಮ ಸಂಬಂಧ ಕಾಯ್ದುಕೊಂಡಿರುವ ಭಾರತದ ಸ್ನೇಹ ಕಾಯ್ದುಕೊಳ್ಳುವ ರಾಜತಾಂತ್ರಿಕತೆ ಇಂಗ್ಲೆಂಡಿಗೆ ಅನಿವಾರ್ಯವಾಗಿದೆ. ಏತನ್ಮಧ್ಯೆ, ಬೋರಿಸ್‌ ಜಾನ್ಸನ್‌ಗೆ ರಷ್ಯಾ ಪ್ರವೇಶ ನಿರ್ಬಂದ ಬೆನ್ನಲ್ಲೇ ಭಾರತದ ಈ ಭೇಟಿ ಇನ್ನಷ್ಟು ಮಹತ್ವ ಹೆಚ್ಚಿಸಿದೆ.

2 ಬಾರಿ ಮುಹೂರ್ತ ಕೂಡಲಿಲ್ಲ!
ಈ ಹಿಂದೆ ಗಣರಾಜ್ಯೋತ್ಸವ ದಿನಕ್ಕೆ ವಿಶೇಷ ಅತಿಥಿಯಾಗಿ, ಬಳಿಕ ಕೋವಿಡ್‌ ಕಾಲಘಟ್ಟದಲ್ಲಿ ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಭಾರತಕ್ಕೆ ಆಗಮಿಸಲು ದಿನಾಂಕ ನಿಶ್ಚಯವಾಗಿತ್ತು. ಇವೆರಡೂ ಸಂದರ್ಭಗಳ ಪ್ರವಾಸವನ್ನೂ ಕೊರೊನಾ ಲಾಕ್‌ಡೌನ್‌ ಆಹುತಿ ತೆಗೆದುಕೊಂಡಿತ್ತು. ಈಗ 3ನೇ ಬಾರಿಗೆ ಪ್ರವಾಸ ಕೈಗೂಡಿದೆ.

ಇವುಗಳ ಮೇಲೆ ಫೋಕಸ್‌
-ಗುಜರಾತ್‌ನ ಭೇಟಿ ವೇಳೆ ಬೋರಿಸ್‌ ವಿಜ್ಞಾನ, ಆರೋಗ್ಯ ಮತ್ತು ತಂತ್ರಜ್ಞಾನಗಳ ಕುರಿತ ಹೊಸಯೋಜನೆ ಪ್ರಕಟಿಸಲಿದ್ದಾರೆ.

-ಭಾರತದ ದಿಗ್ಗಜ ಉದ್ದಿಮೆದಾರ ರೊಂದಿಗೆ ಸಂವಾದ.

Advertisement

-ಹೊಸದಿಲ್ಲಿಯ ಭೇಟಿ ವೇಳೆ ರಕ್ಷಣೆ, ಭದ್ರತೆ, ಶೈಕ್ಷಣಿಕ ಕ್ಷೇತ್ರಗಳ ಜಂಟಿ ಒಪ್ಪಂದಗಳಿಗೆ ಸಹಿ ಸಾಧ್ಯತೆ.

-ರಷ್ಯಾ-ಉಕ್ರೇನ್‌ ಬಿಕ್ಕಟ್ಟು ಹಿನ್ನೆಲೆ ಯಲ್ಲಿ ಭಾರತದೊಟ್ಟಿಗೆ ಭವಿಷ್ಯದ ಸಂಬಂಧವನ್ನು ಸದೃಢಗೊಳಿಸಲು, ಮೋದಿ ಜತೆಗೆ ಬೋರಿಸ್‌ ಚರ್ಚೆ.

ಎಫ್ ಟಿಎ ಮೇಲೆ ಕಣ್ಣು
ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿಎ) ಚಾಲ್ತಿಯಲ್ಲಿರುವ ವಿಷಯ. ಸ್ಪರ್ಧಾತ್ಮಕ ಬೆಲೆಯಲ್ಲಿ ವಸ್ತುವನ್ನು ರಫ್ತು ಮಾಡುವ, ಅಗ್ಗದ ದರದಲ್ಲಿ ಕಚ್ಚಾವಸ್ತುವನ್ನು ಆಮದು ಮಾಡಿಕೊಳ್ಳುವ ಅವಕಾಶಕ್ಕೆ ಎಫ್ಟಿಎ ಅನುವು ಮಾಡಿಕೊಡುತ್ತದೆ. ಈ ವಿಚಾರದಲ್ಲಿ ಭಾರತ- ಇಂಗ್ಲೆಂಡ್‌ ನಡುವೆ 2 ಸುತ್ತಿನ ಮಾತುಕತೆ ಪೂರ್ಣಗೊಂಡಿದೆ. ಅಂತಿಮ ಸುತ್ತಿನ ಮಾತುಕತೆ ಬೋರಿಸ್‌ ಅವರ ಭೇಟಿ ವೇಳೆ ನಡೆಯಲಿದೆ. ಭಾರತದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ ಭರವಸೆಯನ್ನು ಇಂಗ್ಲೆಂಡ್‌ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.