ಮಣಿಪಾಲ: ರಷ್ಯಾದಲ್ಲಿ ನೆಲೆಸಿದ್ದ ಚೀನಿ ಪ್ರಜೆಯೊಬ್ಬರು ಸ್ವದೇಶಕ್ಕೆ ಹಿಂತಿರುಗಿದ್ದಾರೆ. ಅವರು ಮಾಸ್ಕೋದಲ್ಲಿ ವಾಸವಾಗಿದ್ದು, ಅಲ್ಲಿಂದ ರಷ್ಯಾದ ಪೂರ್ವದ ವ್ಲಾಡಿವೋಸ್ಟಾಕ್ (ಚೀನಕ್ಕೆ ಹತ್ತಿರ ಇರುವ ನಗರ)ಗೆ ವಿಮಾನದ ಮೂಲಕ ಪ್ರಯಾಣಿಸಿದ್ದಾರೆ.
ಅಲ್ಲಿಂದ ಚೀನದ ಗಡಿ ನಗರಕ್ಕೆ ಬಸ್ ಪ್ರಯಾಣ ಮಾಡಿ ಅಂತೂ ದೇಶ ತಲುಪಿದ್ದಾರೆ.
ತನ್ನ ಪ್ರಯಾಣದಲ್ಲಿ ಜಿ ಜಾಂಗ್‌ಪೆಂಗ್ ತನ್ನ 20 ಗಂಟೆಗಳ ಈ ಪ್ರಯಾಣದಲ್ಲಿ ದೇಹದ ಸುರಕ್ಷಾ ಸೂಟ್, ಮಾಸ್ಕ್ ಮತ್ತು ಕೈಗೆವಸ್ತುಗಳನ್ನು ಧರಿಸಿದ್ದರು. ತನ್ನ ಪ್ರಯಾಣದ ಸಮಯದಲ್ಲಿ ತಿನ್ನಲಿಲ್ಲ ಮತ್ತು ನೀರೂ ಕುಡಿದಿರಲಿಲ್ಲ. “ನನ್ನ ರೂಮ್‌ಮೇಟ್ ಸೋಂಕಿಗೆ ಒಳಗಾದ ಅನಂತರ ತುಂಬಾ ಹೆದರುತ್ತಿದ್ದೆ. ಚೀನ ಗಡಿಯನ್ನು ದಾಟಿದ ಬಳಿಕ ನಾನು ಸುರಕ್ಷಿತ’ ಎಂದು 54 ವರ್ಷದ ಜೀ ಹೇಳಿದರು.
ಇವರು ಪೂರ್ವ ಮಾಸ್ಕೋದ ಲ್ಯುಬ್ಲಿನೊದಲ್ಲಿನ ಸಗಟು ಮಾರುಕಟ್ಟೆಯೊಂದರಲ್ಲಿ 15 ವರ್ಷಗಳಿಗಿಂತ ಹೆಚ್ಚು ಕಾಲ ಶೂಗಳನ್ನು ಮಾರುತ್ತಿದ್ದರು.
ವ್ಲಾಡಿವೋಸ್ಟಾಕ್‌ನಲ್ಲಿರುವ ಚೀನಾದ ದೂತಾವಾಸ, ಮಾಸ್ಕೋದಿಂದ ಸೂಫೆನ್ಹೆ ಮೂಲಕ ಹಿಂದಿರುಗಿದ ಒಟ್ಟು 346 ಚೀನೀ ಪ್ರಜೆಗಳು ಕೋವಿಡ್ -19 ಸೋಂಕು ತಗುಲಿದ್ದವರು ಎಂದು ಹೇಳಿದೆ. ಪರಿಣಾಮವಾಗಿ ಈಗ ಚೀನಾದ ಒಟ್ಟು ಹೊರದೇಶಗಳಿಂದ ಬಂದ ಪ್ರಕರಣಗಳ ಸಂಖ್ಯೆ 1,534ಕ್ಕೆ ಏರಿದೆ.
ರಷ್ಯಾದಿಂದ ಚೀನಿಗರು ಬಂದ ಬಳಿಕ ಗಡಿ ಪ್ರದೇಶವಾದ ಸೂಫೆನ್ಹೆಯಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಜೀಯಲ್ಲಿ ನೆಗೆಟಿವ್
ರಷ್ಯಾದಿಂದ ಸೋಂಕಿತಳಾಗಿರುವ ಭಯದಿಂದ ಬಂದ ಜೀ ಅವರು ಗಡಿ ದಾಟಿದ ಬಳಿಕ ಕೋವಿಡ್ -19 ಪರೀಕ್ಷೆಯನ್ನು ಎದುರಿಸಿದರು. ನೆಗೆಟಿವ್ ಪರೀಕ್ಷೆ ಎಂದ ಬಳಿಕ 14 ದಿನಗಳ ಕಡ್ಡಾಯ ಸಂಪರ್ಕ ತಡೆಯನ್ನು ಅವಳಿಗೆ ನೀಡಲಾಗಿದೆ. ಪರಿಣಾಮವಾಗಿ ಮುದಂಜಿಯಾಂಗ್ ನಗರದ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.
ರಷ್ಯಾ ಚೀನದ ಆಪ್ತರಾಷ್ಟ್ರವಾಗಿದ್ದು, ಗಡಿಯನ್ನು ಬಂದ್ ಮಾಡಿದ್ದರೂ ಸಡಿಲಿಕೆ ತೋರಿಸಿದೆ. ಇದು ಸದ್ಯ ಉಭಯ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಮಾಸ್ಕೋದಲ್ಲಿ ಯಾವಾಗ ಮತ್ತೆ ಮಾರುಕಟ್ಟೆ ತೆರೆಯುತ್ತದೆ ಎಂದು ಗೊತ್ತಿಲ್ಲ. ತೆರೆದಾಗ ನಾನು ಆರೋಗ್ಯವಾಗಿದ್ದರೆ, ಖಂಡಿತವಾಗಿಯೂ ಹೋಗುವೆ ಎಂದಿದ್ದಾರೆ.