Advertisement

ಸಬ್‌ಮರಿನ್‌ ಜಂಟಿ ನಿರ್ಮಾಣ

06:00 AM Jul 07, 2018 | Team Udayavani |

ನವದೆಹಲಿ: ಅತ್ಯಾಧುನಿಕ ಸಬ್‌ಮರಿನ್‌ ವಿನ್ಯಾಸ ಹಾಗೂ ನಿರ್ಮಾಣವನ್ನು ಜಂಟಿಯಾಗಿ ನಡೆಸುವ ಪ್ರಸ್ತಾಪವನ್ನು ಭಾರತಕ್ಕೆ ರಷ್ಯಾ ಸಲ್ಲಿಸಿದೆ. ಜಲಾಂತರ್ಗಾಮಿ ನಿರ್ಮಾ ಣದ ನಂತರ ಸಂಪೂರ್ಣ ತಂತ್ರಜ್ಞಾನ ವನ್ನು ಭಾರತಕ್ಕೆ ವರ್ಗಾಯಿಸ ಲಾಗುತ್ತದೆ. ಅಷ್ಟೇ ಅಲ್ಲ, ಇದು ಭಾರತೀಯ ನೌಕಾ ಪಡೆ ಖರೀದಿಸಲು ನಿರ್ಧರಿಸಿದ್ದ ವೆಚ್ಚಕ್ಕಿಂತ ಅತ್ಯಂತ ಕಡಿಮೆ ಮೊತ್ತದಲ್ಲಿ ಲಭ್ಯವಾಗಲಿದೆ. 68 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆರು ಡೀಸೆಲ್‌ ಎಲೆಕ್ಟ್ರಿಕ್‌ ಸಬ್‌ಮರಿನ್‌ ಅನ್ನು ಖರೀದಿಸಲು ನೌಕಾಪಡೆ ನಿರ್ಧರಿಸಿತ್ತು. ಆದರೆ ರಷ್ಯಾ ಪ್ರಸ್ತಾಪ ಮಾಡಿದ ಈ ಯೋಜನೆಯ ಅಡಿಯಲ್ಲಿ ಕೇವಲ 1360 ಕೋಟಿ ರೂ. ವೆಚ್ಚದಲ್ಲಿ ತಂತ್ರಜ್ಞಾನ ಭಾರತಕ್ಕೆ ಸಿಗಲಿದೆ. 

Advertisement

ಕಳೆದ ಮೇ ತಿಂಗಳಲ್ಲಿ ಸೋಚಿಯಲ್ಲಿ ಉಭಯ ದೇಶಗಳು ನಡೆಸಿದ ಚರ್ಚೆಯ ವೇಳೆ ಈ ಪ್ರಸ್ತಾಪ ಮಾಡಲಾಗಿದ್ದು, ಈಗ ಇದಕ್ಕೆ ಅಂತಿಮ ರೂಪ ಲಭ್ಯವಾಗಿದೆ. ಈ ಯೋಜನೆ ಅಡಿಯಲ್ಲಿ ತಂತ್ರಜ್ಞಾನವು ಭಾರತಕ್ಕೆ ಲಭ್ಯವಾಗಲಿದ್ದು, ಎಷ್ಟು ಬೇಕಾದರೂ ಸಬ್‌ಮರಿನ್‌ಗಳನ್ನು ಭಾರತ ನಿರ್ಮಿಸಬಹುದಾಗಿದೆ. ಈ ಯೋಜನೆ ಜಾರಿಗೆ ಬಂದಲ್ಲಿ, ರಷ್ಯಾ ಸಹಭಾಗಿತ್ವದಲ್ಲಿ ಭಾರತದಲ್ಲಿ ನಿರ್ಮಿಸಲಾದ ಅಣ್ವಸ್ತ್ರ ಸಜ್ಜಿತ ಐಎನ್‌ಎಸ್‌ ಅರಿಹಂತ್‌ಗೂ ಮಹತ್ವದ ನೆರವು ಸಿಕ್ಕಂತಾಗಲಿದೆ.

ಸಬ್‌ಮರಿನ್‌ಗಳನ್ನು ಭಾರತದ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗುತ್ತದೆ. ಬ್ರಹ್ಮೋಸ್‌ ಅಣ್ವಸ್ತ್ರ ಕ್ಷಿಪಣಿಗಳನ್ನೂ ಅಳವಡಿಸಬಹುದಾದ ರೀತಿಯಲ್ಲಿ ವಿನ್ಯಾಸ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next