ಮಾಸ್ಕೋ: ಭಾರತದ ಸಹಭಾಗಿತ್ವದೊಂದಿಗೆ ಸ್ಪುಟ್ನಿಕ್ 5 ಕೊರೊನಾ ಲಸಿಕೆ ತಯಾರಿಸಲು ರಷ್ಯಾ ಉತ್ಸುಕವಾಗಿದೆ. ಇಷ್ಟು ದಿನ ಈ ಕುರಿತು ಕೇವಲ ಊಹಾಪೋಹಗಳಿತ್ತು. ಇದಕ್ಕೆ ಈ ಹಿಂದೆ ಸ್ಪಷ್ಟನೆ ನೀಡಿದ ಭಾರತ ಸರಕಾರ ಅಂತಹ ಯಾವುದೇ ಪ್ರಸ್ತಾವಿವಿಲ್ಲ ಎಂದು ಸುದ್ದಿಯನ್ನು ತಳ್ಳಿ ಹಾಕಿತ್ತು.
ಆದರೆ ಈಗ ರಷ್ಯನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಫಂಡ್ ಸಿಇಓ ಕಿರಿಲ್ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ. ರಷ್ಯಾವು ವಿಶ್ವದಲ್ಲೇ ಮೊತ್ತ ಮೊದಲು ಕೊರೊನಾ ಲಸಿಕೆಯನ್ನು ಸಿದ್ಧಪಡಿ ಸಿತ್ತು. ಮನುಷ್ಯನ ದೇಹ ದಲ್ಲಿ ರೋಗನಿರೋಧಕರ ಶಕ್ತಿಯನ್ನು ಉಂಟು ಮಾಡುತ್ತದೆ ಎಂದು ಮಾಹಿತಿ ನೀಡಿದ್ದರು.
ಗಮಲೇಯದಿಂದ ಲಸಿಕೆ ಸಂಶೋಧನೆ ಗಮಲೇಯ ಇನ್‌ಸ್ಟಿಟ್ಯೂಟ್ ಸ್ಪುಟ್ನಿಕ್ 5 ಲಸಿಕೆಯನ್ನು ಸಿದ್ಧಪಡಿಸಿದೆ. ಆರ್‌ಡಿಐಎಫ್ ಜತೆಗೂಡಿ ಈ ಲಸಿಕೆ ತಯಾರಿಸಲಾಗಿದ್ದು, ಲ್ಯಾಟಿನ್ ಅಮೇರಿಕ, ಏಷ್ಯಾ, ಮಿಡಲ್ ಈಸ್ಟ್ ಲಸಿಕೆ ಬಗ್ಗೆ ಒಲವು ತೋರಿವೆ.
ಜಗತ್ತನ್ನು ತನ್ನ ಹತೋಟಿಗೆ ತೆಗೆದುಕೊಂಡಿರುವ ಮಹಾಮಾರಿಯನ್ನು ಮಣಿಸಲು ಬೇಕಾಗಿರುವ ಲಸಿಕೆ ಉತ್ಪಾದನೆಯೇ ಬಹು ದೊಡ್ಡ ಸವಾಲಾಗಿದೆ.
ಹೀಗಾಗಿ ಭಾರತದ ಸಹಭಾಗಿತ್ವಕ್ಕೆ ನಾವು ಎದುರು ನೋಡುತ್ತಿದ್ದೇವೆ ಎಂದು ರಷ್ಯಾ ತಿಳಿಸಿದೆ. ಸಹಭಾಗಿತ್ವ ದೊರೆತರೆ ಬೇಡಿಕೆಗೆ ತಕ್ಕಂತೆ ಲಸಿಕೆಯ ಉತ್ಪಾದನೆ ಮಾಡಬಹುದಾಗಿ¨ ಹೀಗಾಗಿ ರಷ್ಯಾ ಅಂತಾರಾಷ್ಟ್ರೀಯ ಸಹಕಾರವನ್ನು ಕೇಳಿದೆ. ಕೇವಲ ರಷ್ಯಾದಲ್ಲಿ ಮಾತ್ರ ಕ್ಲಿನಿಕಲ್ ಟ್ರಯಲ್ ನಡೆಸಲಾಗುವುದಿಲ್ಲ.
ಯುಎಇ , ಸೌದಿ ಅರೇಬಿಯಾ, ಬ್ರೆಜಿಲ್ ಹಾಗೂ ಭಾರತದಲ್ಲಿ ನಡೆಯಲಿದೆ. ನಾವು ಲಸಿಕೆಯನ್ನು 5ಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ ತಯಾರಿಸಲು ಮುಂದಾಗಿದ್ದೇವೆ. ಏಷ್ಯಾ, ಲ್ಯಾಟಿನ್ ಅಮೆರಿಕ, ಇಟಲಿ, ಹಾಗೂ ಇತರೆ ದೇಶಗಳಲ್ಲಿ ಲಸಿಕೆಗೆ ಬೇಡಿಕೆ ಇದೆ. ಮೂರನೇ ಹಂತದ ಪ್ರಯೋಗ ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ 5 ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಫಿಲಿಪೈನ್ಸ್‌ನಲ್ಲಿ ನಡೆಯಲಿದೆ. ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಟ್ರಯಲ್ ನಡೆಯಲಿದೆ.