ಖಾರ್ಕಿವ್: ಉಕ್ರೇನ್ ನಲ್ಲಿ ರಷ್ಯಾ ವಶಪಡಿಸಿಕೊಂಡಿರುವ ಕ್ರೀಮಿಯಾ ಪ್ರಾಂತ್ಯದ ಕ್ರೆಮ್ಲಿನ್ ನಲ್ಲಿ ಅತೀ ಮುಖ್ಯ ಸೇತುವೆಯೊಂದನ್ನು ಸ್ಫೋಟಿಸಿದ ಘಟನೆಯ ಬೆನ್ನಲ್ಲೇ ಉಕ್ರೇನ್ ನ ಹಲವು ನಗರಗಳ ಮೇಲೆ ರಷ್ಯಾ ಸೋಮವಾರ (ಅಕ್ಟೋಬರ್ 10) 75 ಮಿಸೈಲ್ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನಾನು ಸಿಎಂ ಆದಾಗ ಆಡಳಿತದಲ್ಲಿ ಹೆಚ್ಚಿನ ಅನುಭವ ಇರಲಿಲ್ಲ: ಪ್ರಧಾನಿ ಮೋದಿ
ರಷ್ಯಾ ಪಡೆಗಳು ಇಂದು ಉಕ್ರೇನ್ ನಗರಗಳ ಮೇಲೆ ಸುಮಾರು 75 ಮಿಸೈಲ್ ದಾಳಿ ನಡೆಸಿದ್ದು, ಸುರಕ್ಷತೆಯ ಹಿನ್ನೆಲೆಯಲ್ಲಿ ಜನರು ಶೆಲ್ಟರ್ ಗಳಲ್ಲಿ ಉಳಿಯುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಕೀವ್ ತಿಳಿಸಿದೆ.
ಸ್ಫೋಟದ ನಂತರ ಹಲವಾರು ಆ್ಯಂಬುಲೆನ್ಸ್ ಗಳು ಸಂಚರಿಸುತ್ತಿರುವುದು ಕಂಡು ಬಂದಿದೆ ಎಂದು ಎಎಫ್ ಪಿ ಪತ್ರಕರ್ತರು ಮಾಧ್ಯಮಗಳಿಗೆ ತಿಳಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಐದು ಮಂದಿ ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಮಿಸೈಲ್, ಬಾಂಬ್ ದಾಳಿಯಿಂದ ಉಕ್ರೇನ್ ಹಲವು ನಗರ ನಲುಗಿ ಹೋಗಿದ್ದು, ದಟ್ಟ ಕಪ್ಪು ಹೊಗೆ ಇಡೀ ನಗರ ಆವರಿಸಿಕೊಂಡಿರುವ ಫೋಟೊವನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಕಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಷ್ಯಾ ಮತ್ತು ಕ್ರೀಮಿಯಾವನ್ನು ಸಂಪರ್ಕಿಸುವ ಪ್ರಮುಖ ಸೇತುವೆ ಸ್ಫೋಟದ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾ ಬೆಂಬಲಿತ ಕ್ರೀಮಿಯಾದ ಕ್ರೆಮ್ಲಿನ್ ಪ್ರಾದೇಶಿಕ ಸಂಸತ್ ಸ್ಪೀಕರ್ ಆರೋಪಿಸಿದ್ದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಬೆನ್ನಲ್ಲೇ ಈ ಸ್ಫೋಟ ಸಂಭವಿಸಿತ್ತು.