Advertisement
ಉಕ್ರೇನ್ ಜತೆಗಿನ ರಷ್ಯಾ ಸಂಘರ್ಷ ಕೊನೆಗಾಣಿಸಲು ಕಾಣಿಕೆ ನೀಡಲು ಭಾರತ ಸಿದ್ಧ ಎಂಬ ಸಂದೇಶವನ್ನು ಮೋದಿ ಅಂತಾರಾಷ್ಟ್ರೀಯ ಸಮುದಾಯ ಹಾಗೂ ಪುಟಿನ್‌ಗೆ ರವಾನಿಸಿದರು. ಪುಟಿನ್ ಜತೆಗಿನ ಶೃಂಗಸಭೆಯ ಬಳಿಕ ಮಾತನಾಡಿದ ಮೋದಿ, ಯುದ್ಧ, ಉಗ್ರ ದಾಳಿಗಳಲ್ಲಿ ಜೀವಹಾನಿಯಾದಾಗ, ಮಾನವತೆಯ ಮೇಲೆ ನಂಬಿಕೆ ಇಟ್ಟವವರಿಗೆ ತೀವ್ರ ಆಘಾತವಾಗುತ್ತದೆ.
Related Articles
Advertisement
ಭಾರತದ ಇಂಧನ ವಲಯಕ್ಕೆ ರಷ್ಯಾ ನೀಡಿರುವ ಕೊಡುಗೆಯನ್ನು ಮೋದಿ ಶ್ಲಾಘಿಸಿದರು. ಇಡೀ ಜಗತ್ತೇ ಆಹಾರ, ಇಂಧನ, ರಸಗೊಬ್ಬರ ಕೊರತೆ ಎದುರಿಸುತ್ತಿರುವಾಗ, ನಮ್ಮ ರೈತರು ಯಾವುದೇ ಸಮಸ್ಯೆಯಲ್ಲಿ ಸಿಲುಕಿಕೊಳ್ಳಲು ನಾವು ಬಿಡಲಿಲ್ಲ. ಈ ವಿಷಯದಲ್ಲಿ ರಷ್ಯಾ ಮತ್ತು ಭಾರತದ ಸ್ನೇಹವು ಮಹತ್ವದ ಪಾತ್ರ ನಿರ್ವಹಿಸಿದೆ ಎಂದರು. ಉಕ್ರೇನ್ ಬಿಕ್ಕಟ್ಟಿಗೆ ಶಾಂತಿ ಯುತ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದ ಪ್ರಧಾನಿ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ಪುಟಿನ್ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ವೇಳೆ ಭಾರತ ಮತ್ತು ರಷ್ಯಾ ಪ್ರಮುಖ 9 ಒಪ್ಪಂದಗಳಿಗೆ ಸಹಿ ಹಾಕಿವೆ. ಅಣುಶಕ್ತಿ ಘಟಕ ನಿರ್ಮಾಣ ಮಾತ್ರವಲ್ಲದೇ, ವ್ಯಾಪಾರ, ಹವಾಮಾನ ಬದಲಾವಣೆ, ಸಂಶೋಧನೆ, ಬಂಡವಾಳ ಹೂಡಿಕೆ ಮತ್ತು ಬಿಸಿನೆಸ್ ರಷ್ಯಾ ಸೇರಿ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ 9 ಒಪ್ಪಂದ ಹಾಗೂ ತಿಳಿವಳಿಕಾ ಪತ್ರಗಳಿಗೆ ಸಹಿ ಹಾಕಲಾಗಿದೆ. ಭಾರತ ಹಾಗೂ ರಷ್ಯಾದ ವಿವಿಧ ಸಂಸ್ಥೆಗಳ ನಡುವೆ ಈ ಒಪ್ಪಂದಗಳು ಏರ್ಪಟ್ಟಿವೆ. ಇದರೊಂದಿಗೆ ಮೋದಿ ಅವರ ರಷ್ಯಾ ಪ್ರವಾಸ ಫಲಪ್ರದವಾಗಿದೆ.
ರಷ್ಯಾ ಪ್ರವಾಸ ಮುಗಿಸಿಕೊಂಡು ಮೋದಿ ಮಂಗಳವಾರ ಆಸ್ಟ್ರಿಯಾಗೆ ಬಂದಿಳಿದರು. ವಿಯೆನ್ನಾದಲ್ಲಿ ಮೋದಿಯನ್ನು ಆಸ್ಟ್ರಿಯಾ ವಿದೇಶಾಂಗ ಸಚಿವರು ಬರಮಾಡಿಕೊಂಡರು. ಆಸ್ಟ್ರಿಯಾಗೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ ಎಂದು ಮೋದಿ ಹೇಳಿದ್ದಾರೆ. ಆಸ್ಟ್ರಿಯಾ ಚಾನ್ಸಲರ್ ಜತೆ ಮೋದಿ ಮಾತುಕತೆ ನಡೆಸಲಿದ್ದಾರೆ.