Advertisement

Ukraine ವಿರುದ್ಧ ಒಂದೇ ದಿನ 122 ಕ್ಷಿಪಣಿಗಳಿಂದ ದಾಳಿ ನಡೆಸಿದ ರಷ್ಯಾ

12:10 AM Dec 30, 2023 | Team Udayavani |

ಕೀವ್‌: ಉಕ್ರೇನ್‌ ವಿರುದ್ಧದ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ರಷ್ಯಾ, ಶುಕ್ರವಾರ ರಷ್ಯಾ ಪಡೆಗಳು ಉಕ್ರೇನ್‌ನ ಆಯಕಟ್ಟಿನ ಸ್ಥಳಗಳನ್ನು ಗುರಿಯಾಗಿಸಿ 122 ಕ್ಷಿಪಣಿಗಳು ಮತ್ತು 36 ಡ್ರೋನ್‌ಗಳಿಂದ ದಾಳಿ ನಡೆಸಿದೆ.

Advertisement

ಈ ದಾಳಿಗಳಲ್ಲಿ ಉಕ್ರೇನ್‌ನ ವಿವಿಧೆಡೆ ಕನಿಷ್ಠ 24 ನಾಗರಿಕರು ಸಾವನ್ನಪ್ಪಿದ್ದು ರಷ್ಯಾ ನಡೆಸಿದ ಅತೀ ದೊಡ್ಡ ವಾಯು ದಾಳಿ ಇದಾಗಿದೆ ಎಂದು ಉಕ್ರೇನ್‌ನ ವಾಯುಪಡೆ ಅಧಿಕಾರಿಗಳು ಹೇಳಿದ್ದಾರೆ.

ರಷ್ಯಾ 2022ರ ಫೆಬ್ರವರಿಯಲ್ಲಿ ಸೇನಾ ಆಕ್ರಮಣ ಆರಂಭಿಸಿದ ಬಳಿಕ ನಡೆಸಿದ ಅತ್ಯಂತ ದೊಡ್ಡ ವಾಯು ದಾಳಿ ಇದಾಗಿದ್ದು ಈ ದಾಳಿಯಲ್ಲಿ ಪ್ರಕ್ಷೇಪಣ ಮತ್ತು ಗುರಿ ನಿರ್ದೇಶಿತ ಕ್ಷಿಪಣಿಗಳು ಮತ್ತು ಶಾಹೆದ್‌ ಮಾದರಿಯ ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next