Advertisement

ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್!

08:45 AM Feb 24, 2022 | Team Udayavani |

ಮಾಸ್ಕೋ: ದಿಗ್ಬಂಧನದ ಹೊರತಾಗಿಯೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಣೆ ಮಾಡಿದ್ದಾರೆ.

Advertisement

ರಷ್ಯಾ ಮತ್ತು ಉಕ್ರೇನಿಯನ್ ಪಡೆಗಳ ನಡುವಿನ ಘರ್ಷಣೆಗಳು “ಅನಿವಾರ್ಯ” ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಉಕ್ರೇನಿಯನ್ ಸೇವಾ ಸದಸ್ಯರಿಗೆ “ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗಿ” ಎಂದು ಪುಟಿನ್ ಹೇಳಿದ್ದಾರೆ.

ಮಿಲಿಟರಿ ಕ್ರಮವು ಉಕ್ರೇನ್ ಅನ್ನು “ಸೈನ್ಯಮುಕ್ತಗೊಳಿಸಲು” ಪ್ರಯತ್ನಿಸುತ್ತದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದರು.

ಇದನ್ನೂ ಓದಿ:ಇನ್ನೊಂದೇ ರಫೇಲ್‌ ಬಾಕಿ; 3 ಹೊಸ ವಿಮಾನ ಆಗಮನ

ಇದಕ್ಕೂ ಮೊದಲು, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮುಂಬರುವ ದಿನಗಳಲ್ಲಿ ಯುರೋಪ್ ನಲ್ಲಿ ರಷ್ಯಾ ‘’ಪ್ರಮುಖ ಯುದ್ಧ” ವನ್ನು ಪ್ರಾರಂಭಿಸಬಹುದು ಎಂದು ಗುರುವಾರ ಹೇಳಿದ್ದರು. ದಾಳಿಯನ್ನು ವಿರೋಧಿಸಲು ರಷ್ಯನ್ನರನ್ನು ಒತ್ತಾಯಿಸಿದ್ದರು.

Advertisement

ಮೂರು ಷರತ್ತು: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಪರಿಸ್ಥಿತಿ ಶಾಂತಗೊಳಿಸುವುದಕ್ಕಾಗಿ ಮೂರು ಷರತ್ತುಗಳನ್ನು ಹಾಕಿದ್ದರು. ಕ್ರಿಮಿಯಾವನ್ನು ರಷ್ಯಾದ ಪ್ರದೇಶವೆಂದು ಗುರುತಿಸಬೇಕು; ಕಪ್ಪು ಸಮುದ್ರದಲ್ಲಿರುವ ಪೆನಿನ್ಸುಲಿಯಾವನ್ನು ರಷ್ಯಾದ್ದೆಂದು ಹೇಳಬೇಕು ಮತ್ತು ಉಕ್ರೇನ್‌ ನ್ಯಾಟೋಗೆ ಸೇರಬಾರದು ಎಂಬ ಷರತ್ತು ಇಟ್ಟಿದ್ದರು. ಆದರೆ, ಈಗಾಗಲೇ ಈ ಷರತ್ತುಗಳನ್ನು ಉಕ್ರೇನ್‌ ಮತ್ತು ಪಾಶ್ಚಿಮಾತ್ಯ ದೇಶಗಳು ತಿರಸ್ಕರಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next