ಮಾಸ್ಕೋ, ರಷ್ಯಾ : ರಷ್ಯಾ ಹಾಗೂ ಚೀನಾ ರಾಷ್ಟ್ರಗಳು ಸೇರಿ ಚಂದ್ರನ ಅಂಗಳದಲ್ಲಿ ಸಂಶೋಧನಾ ಕೇಂದ್ರವನ್ನು ನಿರ್ಮಿಸಲು ಮುಂದಾಗಿವೆ. ಈ ಮೂಲಕ ಉಭಯ ರಾಷ್ಟ್ರಗಳು ಬಾಹ್ಯಾಕಾಶ ಸಂಬಂಧವನ್ನು ಪ್ರಾರಂಭಿಸಲಿವೆ.
ಈ ಸಂಬಂಧ ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತದ ಆಡಳಿತಾಧಿಕಾರಿ ಜಾಂಗ್ ಕಾಜ್ಹಿಯನ್ ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೊಸ್ಕೊಸ್ಮೊಸ್ ನ ಮುಖ್ಯಸ್ಥ ಡಿಮಿಟ್ರಿ ರೋಗೊಜಿನ್ ಅವರು ಮಂಗಳವಾರ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದಾರೆ.
ಓದಿ : ಆಸರೆ ಮನೆಗಳ ಹಕ್ಕು ಪತ್ರಕ್ಕೆ ಒತ್ತಾಯ : ತಲೆ ಮೇಲೆ ಕಲ್ಲುಹೊತ್ತು ಪ್ರತಿಭಟನೆ
ಅಂತರರಾಷ್ಟ್ರೀಯ ಚಂದ್ರನ ಸಂಶೋಧನಾ ಕೇಂದ್ರವನ್ನು (ಐ ಎಲ್ ಎಸ್ ಎಸ್) ಇತರೆ ರಾಷ್ಟ್ರಗಳು ಸಹ ಬಳಸಬಹುದು ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತವು ತನ್ನ ವೆಬ್ಸೈಟ್ ನಲ್ಲಿ ಮೂಲಕ ತಿಳಿಸಿದೆ. ಆದರೆ ಈ ಸಂಶೋಧನಾ ಕೇಂದ್ರವನ್ನು ಯಾವಾಗ ನಿರ್ಮಾಣ ಮಾಡಲಾಗುವುದು ಎನ್ನುವುದರ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಇದುವರೆಗೆ ಹಂಚಿಕೊಂಡಿಲ್ಲ.
ಚಂದ್ರನ ಮೇಲ್ಮೈ ಅಥವಾ ಚಂದ್ರನ ಕಕ್ಷೆಯಲ್ಲಿ ಸಂಶೋಧನಾ ಕೇಂದ್ರವನ್ನು ನಿರ್ಮಿಸಲಾಗುವುದು. ಚಂದ್ರನ ಪರಿಶೀಲನೆ, ಚಂದ್ರನ ಆಧಾರಿತ ಅವಲೋಕನ, ಮೂಲ ವೈಜ್ಞಾನಿಕ ಪ್ರಯೋಗ ಮತ್ತು ತಾಂತ್ರಿಕ ಪರಿಶೀಲನೆಗಳನ್ನು ನಡೆಸಲಾಗುವುದು ಎಂದು ವೆಬ್ಸೈಟ್ ನಲ್ಲಿ ಮಾಹಿತಿ ನೀಡಿದೆ.
ಓದಿ : ಕೋವಿಡ್ ಭೀತಿ : ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಜಾತ್ರೆ, ಉರೂಸ್ ಗಳಿಗೆ ನಿಷೇಧ