ಮಾಸ್ಕೋ: ಮಾಜಿ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿ, 111 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿ ಶಿಕ್ಷೆಗೆ ಗುರಿಯಾಗಿದ್ದ ವ್ಲಾಡಿಸ್ಲಾವ್ ಕಾನ್ಯಾಸ್ ಎಂಬಾತನಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಕ್ಷಮಾದಾನ ನೀಡಿದ್ದಾರೆ. ಆತನನ್ನು ಉಕ್ರೇನ್ ವಿರುದ್ಧ ಹೋರಾಡಲು ಸೇನೆಗೆ ನೇಮಿಸಿದ್ದಾರೆ.
ಮಾಜಿ ಪ್ರೇಯಸಿ ವೆರಾ ಪೆಖೆಲೆವಾ ಮೇಲೆ ಅತ್ಯಾಚಾರ ಎಸಗಿದ್ದ ವ್ಲಾಡಿಸ್ಲಾವ್ ಕಾನ್ಯಾಸ್. ಅನಂತರ ಮೂರು ಗಂಟೆಗಳ ಕಾಲ ಆಕೆಯನ್ನು ಕ್ರೂರ ವಾಗಿ ಹಿಂಸಿಸಿದ್ದ. ಬಳಿಕ ಚೂರಿಯಿಂದ 111 ಬಾರಿ ಚುಚ್ಚಿದ್ದ, ಅನಂತರ ಕೇಬಲ್‌ನಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಈತನಿಗೆ ಸ್ಥಳೀಯ ನ್ಯಾಯಾಲಯವು 17 ವರ್ಷಗಳ ಕಠಿನ ಕಾರಾ ಗೃಹ ಶಿಕ್ಷೆ ವಿಧಿಸಿತ್ತು. 6 ತಿಂಗಳ ಕಾಲ ಜೈಲಿನಲ್ಲಿ ಕಳೆದಿದ್ದ ಕಾನ್ಯಾಸ್‌ನ ಕ್ಷಮಾದಾನ ಅರ್ಜಿ ಪುರಸ್ಕರಿಸಿರುವ ಪುತಿನ್, ಆತನನ್ನು ರಷ್ಯಾ ಸೇನೆಗೆ ನೇಮಿಸಿದ್ದಾರೆ.