Advertisement

ರಶ್ದಿ ಹಲ್ಲೆ ಪ್ರಕರಣ: ಆರೋಗ್ಯದಲ್ಲಿ ಸುಧಾರಣೆ

08:03 PM Aug 14, 2022 | Team Udayavani |

ನ್ಯೂಯಾರ್ಕ್‌: ಉಪನ್ಯಾಸ ಮಾಡಬೇಕಿದ್ದ ಕಾರ್ಯಕ್ರಮದ ವೇದಿಕೆಯ ಮೇಲೆಯೇ ಚಾಕು ಇರಿತಕ್ಕೆ ಒಳಗಾದ ಭಾರತೀಯ ಮೂಲದ ಅಮೆರಿಕನ್‌ ಹಿರಿಯ ಲೇಖಕ ಸಲ್ಮಾನ್‌ ರಶ್ದಿ ಅವರ ಆರೋಗ್ಯ ಸುಧಾರಿಸಿದೆ.

Advertisement

ವೆಂಟಿಲೇಟರ್‌ ಸಹಾಯದೊಂದಿಗೆ ಉಸಿರಾಡುತ್ತಿದ್ದ ಅವರು ವೆಂಟಿಲೇಟರ್‌ ಇಲ್ಲದೆಯೂ ಉಸಿರಾಡಲಾರಂಭಿಸಿದ್ದಾರೆ. ಹಾಗೆಯೇ ಮಾತನಾಡುವುದಕ್ಕೂ ಸಾಧ್ಯವಾಗುತ್ತಿದೆ ಎಂದು ಲೇಖಕರ ಆಪ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಜಾಸ್ತಿ ತಲೆಕೆಡಿಸಿಕೊಳ್ಳಬೇಡ ಮುಂದಿನ ಸರದಿ ನಿನ್ನದು: ಲೇಖಕಿ ರೌಲಿಂಗ್‌ಗೆ ಬೆದರಿಕೆ ಸಂದೇಶ

ರಶ್ದಿ ಅವರ ಹತ್ಯೆ ಯತ್ನವನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಖಂಡಿಸಿದ್ದಾರೆ. “ಈ ವಿಚಾರ ಅಘಾತವುಂಟುಮಾಡಿದೆ. ರಶ್ದಿ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಅವರು ಸಾರ್ವತ್ರಿಕ ಆದರ್ಶಗಳನ್ನು ಪ್ರತಿನಿಧಿಸುವಂತಹ ವ್ಯಕ್ತಿ’ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next