Advertisement

ಜನಧನ್‌ ಖಾತೆ ತೆರೆಯಲು ಜನಜಂಗುಳಿ

07:37 AM May 16, 2020 | Suhan S |

ಬೀರೂರು: ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಕೇಂದ್ರಸರ್ಕಾರ ಘೋಷಿಸಿರುವ ಹಲವು ಪ್ಯಾಕೇಜ್‌ ಗಳಲ್ಲಿ ಸಂಕಷ್ಟದಲ್ಲಿರುವ ಕುಟುಂಬದ ಮಹಿಳೆಯರ ಜನಧನ್‌ ಖಾತೆಗೆ ಮಾಸಿಕ ರೂ.500 ಜಮಾ ಸೇರಿದ್ದು ಅದು ಈಗಾಗಲೇ ಹಲವರ ಖಾತೆಗೆ ಜಮೆಯಾಗಿದೆ. ಜನ್‌ ಧನ್‌ ಖಾತೆ ಹೊಂದಿರದ ನೂರಾರು ಮಹಿಳೆಯರು ಗುರುವಾರ ಬೆಳಗಿನಿಂದಲೇ ಬೀರೂರು ಕೆನರಾ ಬ್ಯಾಂಕ್‌ ಶಾಖೆಯ ಮುಂದೆ ಖಾತೆ ತೆರೆಯಲು ಸಾಲುಗಟ್ಟಿ ನಿಂತಿದ್ದರು.

Advertisement

ಈ ಕುರಿತು ಸರತಿಯಲ್ಲಿದ್ದ ಕೆಲವರನ್ನು ಪ್ರಶ್ನಿಸಿದಾಗ ಮೋದಿ ಲಕ್ಷಾಂತರ ಕೋಟಿ ಪ್ಯಾಕೇಜ್‌ ಘೋಷಿಸಿದ್ದಾರಂತೆ, ಅದರಲ್ಲಿ ಜನ್‌ಧನ್‌ ಖಾತೆಗೆ ದುಡ್ಡು ಬರುತ್ತಂತೆ, ನಮ್ಮದು ಮೋದಿ ಅಕೌಂಟ್‌ ಇರಲಿಲ್ಲ, ಈಗ ಖಾತೆ ತೆರೆಯಲು ಬಂದಿದ್ದೇವೆ, ರೇಣುಕಮ್ಮ ಎನ್ನುವವರಿಂದ ಉತ್ತರ ಕೇಳಿಬಂತು. ಈಗಾಗಲೇ ಬೀರೂರಿನ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಸುಮಾರು 6ಸಾವಿರ ಜನಧನ್‌ ಖಾತೆಗಳಿದ್ದು ಮಹಿಳೆಯರ ಅಕೌಂಟ್‌ಗೆ ರೂ.500 ಹಣ ಬಂದಿರುವುದು ಹೌದು. ಬೇರೆ ಯಾವ ಬ್ಯಾಂಕ್‌ ಬಳಿಯೂ ಖಾತೆ ತೆರೆಯಲು ಇಲ್ಲದ ಇಷ್ಟುದ್ದ ಜನಜಂಗುಳಿ ನಮ್ಮಲ್ಲಿ ಕಂಡು ಬಂದಿದ್ದು ಆಶ್ಚರ್ಯ ತಂದಿದೆ. ಬುಧವಾರದಿಂದ ಹೊಸದಾಗಿ 300 ಖಾತೆ ತೆರೆಯಲಾಗಿದೆ.

ಈ ಖಾತೆಗಳಿಗೆ ಹಣ ಬರುತ್ತದೆ ಎನ್ನುವ ಯಾವ ಗ್ಯಾರಂಟಿ ಇಲ್ಲ. ಆದರೆ ಖಾತೆ ತೆರೆಯಲು ಬಂದವರನ್ನು ವಾಪಸ್‌ ಕಳಿಸಬಾರದು ಎನ್ನುವ ಉದ್ದೇಶದಿಂದ ಇಬ್ಬರು ಸಿಬ್ಬಂದಿಯನ್ನು ನೇಮಿಸಿ ಶೂನ್ಯ ಉಳಿಕೆಯ ಹೊಸಖಾತೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಮತ್ತು ಕೆಲವರಿಗೆ ಅರ್ಜಿ ನೀಡಿ ಮನೆಯಲ್ಲಿ ತುಂಬಿ ತರುವಂತೆ ತಿಳಿಸಲಾಗಿದೆ ಎನ್ನುತ್ತಾರೆ ಶಾಖಾ ವ್ಯವಸ್ಥಾಪಕ ಎಂ.ರಮೇಶ್‌.

Advertisement

Udayavani is now on Telegram. Click here to join our channel and stay updated with the latest news.

Next