Advertisement

ಸಮಕಾಲೀನ ಸಮಾಜಕ್ಕೆ ಕನ್ನಡಿ ಹಿಡಿದ ಗ್ರಾಮೀಣ ರಂಗೋತ್ಸವದ ನಾಟಕಗಳು

11:16 AM Mar 06, 2020 | mahesh |

ನವಸುಮ ರಂಗಮಂಚ ಕೊಡವೂರು, ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಮೂಡಬೆಟ್ಟು ಯುವಕ ಮಂಡಲ ಇವರ ಸಹಯೋಗದ ರಂಗೋತ್ಸವ ಫೆ.5ರಿಂದ ಫೆ.7ರವರೆಗೆ ಗ್ರಾಮೀಣ ಪ್ರದೇಶದ ರಂಗೋತ್ಸವವಾಗಿ ಮೂಡಿಬಂತು.

Advertisement

ಮೊದಲ ದಿನ ಕರಾವಳಿ ಕಲಾವಿದರು ಮಲ್ಪೆ ಇವರು ಪ್ರಸ್ತುತ ಪಡಿಸಿದ “ಪಗರಿದ ಸುಡುಕಳೂ’ ಎನ್ನುವ ಪೌರಾಣಿಕ ನಾಟಕ ಪ್ರದರ್ಶನವಾಯಿತು. ಮನೋಜ್‌ ಮಾಮಂಜೂರು ರಚಿಸಿದ, ಸತ್ಯ ಉಡುಪಿ ತುಳುವಿಗೆ ಅನುವಾದಿಸಿದ ದಿವಾಕರ ಕಟೀಲು ನಿರ್ದೇಶನದಲ್ಲಿ ಮೂಡಿಬಂತು.

ಮಹಾಭಾರತ ಯುದ್ಧ ಪ್ರಾರಂಭವಾಗಿದೆ. ಕೃಷ್ಣನ ಸಂಧಾನವೂ ಮುಗಿದು, ಕೃಷ್ಣ ಪಾಂಡವ ಪಕ್ಷದಲ್ಲಿದ್ದಾನೆ. ಆದರೆ ಅದು ಪಾಂಡವರ ಮತ್ತು ಕೌರವರ ನಡುವೆ ನಡೆದ ಯುದ್ಧವಾಗಿರಲಿಲ್ಲ. ಪ್ರಾರಂಭದಲ್ಲೆ ಯುದ್ಧದ ಭೀಕರತೆಯನ್ನು ಹೇಳುವ ಭಯಂಕರ ಗಿಡುಗಗಳು, ಹೇಳುವ ಹಾಗೆ, ಗಿಡುಗಗಳಿಗೆ ಹ‌ಬ್ಬದೂಟ, ನಾಟಕದ ಉದ್ದಕ್ಕೂ ನಮಗೆ ಕಂಡು ಬಂದಿದ್ದು ಯುದ್ಧಕ್ಕಾಗಿ ಹೋರಾಡಿದ ಸಾಮಾನ್ಯ ಸೈನಿಕನ ಕತೆ, ಅದು ಅವನ ಹಿಂದೆಯೇ ಹೋದ ಕತೆ, ಯುದ್ಧಕ್ಕಾಗಿ ದುಡಿದ ಶ್ರಮಿಕರ, ಸೈನಿಕರ, ಯುದ್ಧ ವರದಿ ಮಾಡಲು ಬಂದ ವರದಿಗಾರರನ್ನ ಪ್ರಶ್ನೆ ಮಾಡುವ ಕಾರ್ಮಿಕರು, ಕುಶಲಕರ್ಮಿಗಳು, ತಮ್ಮ ಬಗ್ಗೆ ಒಂದು ಪುಟವನ್ನಾದರೂ ಬರೆ ಎಂದು ಗೋಗೆರೆವ ವಿಶ್ವಕರ್ಮರು, ಭಾರತ ಯುದ್ಧದಲ್ಲಿ ನಾವು ಯಾವುದೇ ಭೀಷ್ಮ ಕರ್ಣರಿಗಿಂತ ಕಡಿಮೆ ಏನಿಲ್ಲ, ನಾವು ಮಾಡಿದ ರಥದಿಂದಲೇ ಎಲ್ಲ ವೀರರು ಹೋರಾಡಿದ್ದಾರೆ, ನಾವಿದ್ದರೆ ಮಾತ್ರ ಇಂತವರು ಎಂದು ತಮ್ಮಲ್ಲೇ ಹೆಮ್ಮೆ ಪಡುವ ವಿಶ್ವಕರ್ಮರು ಇತ್ಯಾದಿ.

ತಂದೆ ಮಗನಿಗಾಗಿ, ಹೆಂಡತಿ ಗಂಡನಿಗಾಗಿ ರಣಭೂಮಿಯಲ್ಲಿ ಹುಡುಕುವ ದಯನೀಯ ಸ್ಥಿತಿ, ಭೀಷ್ಮನ ತಪ್ಪುಗಳನ್ನು ಎತ್ತಿ ಹಿಡಿದು ಹೇಳುವ ಸೈನಿಕ ಮಣಿಕಂಠ, ಕೊನೆಗೆ ಮಣಿಕಂಠ ಭೀಷ್ಮ ಮಧ್ಯೆ ಮಾತಿನ ಜಟಾಪ ಟಿ ನಡೆದು ಭೀಷ್ಮ ಮಣಿಕಂಠನನ್ನು ಬಿಡುಗಡೆ ಮಾಡುತ್ತಾನೆ. ಭೀಷ್ಮನಾಗಿ ವಿಜಯ ಆರ್‌. ನಾಯಕ್‌, ಮಣಿಕಂಠನಾಗಿ ನೂತನ್‌ ಕುಮಾರ್‌, ಹರೀಶ್‌ ಕರ್ಕೇರ, ನಾಗರಾಜ ಆಚಾರ್ಯ, ನವೀನ್‌ಚಂದ್ರ, ಪವಿತ್ರ ಆಚಾರ್ಯ, ಸುರೇಂದ್ರ ಆಚಾರ್ಯ, ಕುಸುಮ ಕಾಮತ್‌ ಇವರ ನಟನೆ ನೈಜವಾಗಿ ಮೂಡಿಬಂತು. ಸಂಗೀತ ನಾಟಕಕ್ಕೆ ಬಲಕೊಟ್ಟರೆ, ಬೆಳಕು ಕಳೆಯನ್ನು ಇನ್ನೂ ಹೆಚ್ಚಿಸಿತು. ಚೆಂಡೆಯ ಅಬ್ಬರ ಇನ್ನೂ ಮಾರ್ಮಿಕವಾಗಿ ಮೂಡಿ ಬರಬೇಕಿತ್ತು.

ಎರಡನೇ ದಿನದ ನಾಟಕ ನವಸುಮ ರಂಗಮಂಚ ಕೊಡವೂರುರವರ ಡಾ| ರಾಜೇಂದ್ರ ಕಾರಂತ ಬರೆದ ತುಳುವಿಗೆ ಅನುವಾದಿಸಿದ “ಮರಣದ ಲೆಪ್ಪು’ ಬಾಲಕೃಷ್ಣ ಕೊಡ ವೂರು ನಿರ್ದೇಶನದಲ್ಲಿ ಪ್ರದರ್ಶನವಾಯಿತು.

Advertisement

ನರಸಿಂಹ ರಾವ್‌ ಎನ್ನುವ ಮಾಜಿ ಮುಖ್ಯ ಮಂತ್ರಿ ದೇಹಾರೋಗ್ಯ ಕೆಟ್ಟು ತನ್ನ ಗಾಲಿ ಕುರ್ಚಿಯೊಂದಿಗೆ ಬೈರ ಅವರನ್ನ ಕರೆತರುವಲ್ಲಿ ನಾಟಕ ಪ್ರಾರಂಭವಾಗುತ್ತದೆ. ಸುಮಾರು ಹತ್ತು ವರ್ಷ ಮುಖ್ಯಮಂತ್ರಿ ಗಾದಿಗೇರಿದ್ದ ನರಸಿಂಹ ತನ್ನ ಎಲ್ಲಾ ಮಾನವೀಯ ಮೌಲ್ಯವನ್ನು ಕಳಚಿಕೊಂಡಿದ್ದಾನೆ. ಅಧಿಕಾರದ ಗುಂಗಿನಲ್ಲಿ ಒಂದು ಆಸ್ಪತ್ರೆಗೆ ಪರ ವಾ ನಿಗೆ ಕೊಟ್ಟಿರಲಿಲ್ಲ ಅವನ ಹೆಂಡತಿ ತಾರಾ ಅವನನ್ನೂ ಮೀರಿ ಬೆಳೆದು ನಿಂತಿದ್ದಾಳೆ.

ತಾನೇ ಸಾಕಿದ ಮಗ ತನ್ನನ್ನೇ ಮೂಲೆಗುಂಪು ಮಾಡಿ ಅಧಿಕಾರಕ್ಕೆ ಬಂದಿದ್ದಾನೆ. ನರಸಿಂಹ ರಾವ್‌ ಆಗಿ ರಾಜಗೋಪಾಲ ಶೇಟ್‌ ತಾರಾ ನರಸಿಂಹಳಾಗಿ ಚಂದ್ರಾವತಿ ಪಿತ್ರೋಡಿ, ಬೈರನಾಗಿ ಬಾಲಕೃಷ್ಣ ಕೊಡವೂರು, ಡಾಕ್ಟರ್‌ ಆಗಿ ಸುಶಾಂತ್‌ ಪೂಜಾರಿ, ರೈತನಾಗಿ ದಿನೇಶ್‌ ಅಮೀನ್‌ ಕದಿಕೆ, ವಿನೋದ್‌ ಕಾಂಚನ್‌ ವೈಷ್ಣವಿ ಇವರ ನಟನೆ ಚೆನ್ನಾಗಿ ಮೂಡಿಬಂತು. ನೆರಳು ಬೆಳಕಿನ ಬೆಳಕು ಜಯಶೇಖರ ಮಡಪ್ಪಾಡಿ ನಾಟಕದ ಗೆಲುವಿಗೆ ಕಾರಣವಾದರೆ ಸಂಗೀತ ರೋಹಿತ್‌ ಮಲ್ಪೆ ಒಟ್ಟಾರೆ ನಾಟಕ ಚೆನ್ನಾಗಿ ಮೂಡಿಬಂತು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೇವರುಗಳು, ಅವರೇ ನಿಜವಾದ ಮುಖ್ಯಮಂತ್ರಿ ಎನ್ನುವುದು ಅಂತ್ಯಕ್ಕೆ ತಿಳಿಯಿತು.

ಮೂರನೇ ದಿನದ ನಾಟಕ ರಂಗ ಸುರಭಿ ಬೈಂದೂರು ನಟಿಸಿದ ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚೋಮನ ದುಡಿ. ರಂಗರೂಪ- ನಿರ್ದೇಶನ ಗಣೇಶ್‌ ಎಂ. ಅವರದ್ದು. ಅಸಮಾನತೆಯ ವಿರುದ್ಧ ಚೋಮ ನಡೆಸುವ ಹೋರಾಟ ಈ ನಾಟಕದ ಕಥಾವಸ್ತು. ಪ್ರತಿ ಹಂತದಲ್ಲೂ ವ್ಯವಸ್ಥೆಯಲ್ಲಿ ಅನುಭವಿಸಿದ ಅನುಭವಕ್ಕೆ ಪೂರಕವಾಗಿ, ಚೋಮನ ಎತ್ತರ ದನಿ ಸಂಕಪ್ಪಯ್ಯನ ಎದುರು ಬಗ್ಗಿಸಿದ ತಲೆಯನ್ನು ಮೇಲೆತ್ತಲಾದ ಬೇಸಾಯ ಮಾಡಬೇಕೆಂದು ಜೀವನದುದ್ದಕ್ಕೂ ಹುರಿದುಂಬಿಸುತ್ತಲೇ ಚೋಮನ ಬದುಕು ಅಂತ್ಯವಾಗುತ್ತದೆ.

ತಾನು ಮಾಡಿದ 20 ರೂಪಾಯಿ ಸಾಲಕ್ಕಾಗಿ ಮಕ್ಕಳಾದ ಚನಿಯ, ಗುರುವರನ್ನು ಘಟ್ಟಕ್ಕೆ ಕಳಿಸುತ್ತಾನೆ. ಕ್ರಿಶ್ಚಿಯನ್‌ ಧರ್ಮಕ್ಕೆ ಸೇರಿದರೆ ಉಳಲು ಭೂಮಿ ಕೊಡುತ್ತೇವೆ ಎನ್ನುವ ಪಾದ್ರಿಗಳು, ಆಗ ಅವನಿಗೆ ಎದುರಾಗುವುದು ತಾನು ನಂಬಿದ್ದ ಪಂಜುರ್ಲಿ ದೈವ. ಒಬ್ಬ ಮಗ ಕ್ರಿಶ್ಚಿಯನ್‌ ಹುಡುಗಿಯ ಜೊತೆ ಓಡಿ ಹೋಗುತ್ತಾನೆ, ಮನ್ವೇಲ ಬೆಳ್ಳಿಯನ್ನು ಕೊಡಿಸುತ್ತಾನೆ, ಪುಟ್ಟ ಮಗ ನೀಲನ ಸಾವು ಅಸ್ಪತ್ರೆಯೇ ಕಾರಣವಾಗುತ್ತದೆ. ಉದ್ದಕ್ಕೂ ಎಲ್ಲಾ ಸ್ಥರಗಳಲ್ಲಿ ಚೋಮ ಸೋಲನ್ನುಕಂಡರೆ ಅಂತ್ಯ ದಲ್ಲಿ ಅವನ ಸೋಲಿಗೆ ತಲೆ ತಗ್ಗಿಸುವ ಸರದಿ ನೋಡುಗರಾದ್ದಗುತ್ತದೆ.

ಚೋಮನಾಗಿ ಸತ್ಯನಾ ಕೊಡೇರಿ, ಬೆಳ್ಳಿಯಾಗಿ ಕಾವೇರಿ, ಸಂಕಪ್ಪಯ್ಯನಾಗಿ ರಾಮಕೃಷ್ಣ ,ಮನ್ವೇಲನಾಗಿ ಯೋಗೀಶ್‌ ಬಂಗೇಶ್ವರ, ಪ್ರೀತಮ್‌, ಗಿರಿಶ್‌ ಮೇಸ್ತ, ದಯಾನಂದ, ರವಿ ಮೇಘರಾಜ ಅಭಿನಯ ಮಾರ್ಮಿಕವಾಗಿ ಮೂಡಿ ಬಂತು. ಹಲವಾರು ಜನ ಪದ ಹಾಡು, ನೃತ್ಯ, ಕ್ರಾಂತಿ ಹಾಡುಗಳಿಂದ ಸಂಗೀತ ನಾಟಕಕ್ಕೆ ಪೂರಕವಾಗಿತ್ತು. ಸಂಗೀತದಲ್ಲಿ ನಿರೀ ಕ್ಷಕ ಪ್ರಶಾಂ ತ್‌ ನಾರಾಯಣ ಹೆಗಡೆ ಗಮನ ಸೆಳೆದರು.

ಜಯರಾಂ ನೀಲಾವರ

Advertisement

Udayavani is now on Telegram. Click here to join our channel and stay updated with the latest news.

Next