Advertisement
ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಪುಷ್ಪಾ ನಾಟ್ಯ ಸರಸ್ವತಿ ಕನ್ನಡ ಕಲಾ ಸಂಘ ಆಯೋಜಿಸಿದ್ದ ನಾಟಕೋತ್ಸವ ಮತ್ತು ನಾಡಿನ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೋರನಹಳ್ಳಿ ಗ್ರಾಮ ಪರಿಸರದಲ್ಲಿದ್ದುಕೊಂಡು ರಂಗಕಲೆ ಹಾಗೂ ಸಂಗೀತ ಮತ್ತು ಸಾಹಿತ್ಯ ಮುಂತಾದವುಗಳ ಬಗ್ಗೆ ಅಪಾರ ಕಳಕಳಿ ಹೊಂದಿರುವ ಪುಷ್ಪಾ ನಾಟ್ಯ ಸರಸ್ವತಿ ಕನ್ನಡ ಕಲಾ ಸಂಘದ ಮೂಲಕ ರಂಗ ಕಲೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ರಾಘವೇಂದ್ರ ದೇಸಾಯಿ ಅವರ ಕಾರ್ಯ ಶ್ಲಾಘನೀಯವಾದದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚು ರಂಗ ಚಟುವಟಿಕೆಗಳನ್ನು ಆಯೋಜಿಸಲು ಕಲಬುರ್ಗಿ ರಂಗಾಯಣದಿಂದ ಸರ್ವ ರೀತಿಯಿಂದ ಪ್ರೊತ್ಸಾಹ, ಸಹಾಯ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಅಕ್ಕಿಯವರಿಗೆ ಪುಷ್ಪಾ ಸರಸ್ವತಿ ಸಾಹಿತ್ಯ ಚೇತನ ಪ್ರಶಸ್ತಿ, ಸಾಹಿತಿ ಚಂದ್ರಕಾಂತ ಕರದಳ್ಳಿಯವರಿಗೆ ಪುಷ್ಪಾ ಸಾಹಿತ್ಯ ಸರಸ್ವತಿ ಚೇತನ ಪ್ರಶಸ್ತಿ, ಬುದ್ದಘೋಷ್ ದೇವಿಂದ್ರ ಹೆಗಡೆಯವರಿಗೆ ಪುಷ್ಪಾ ಸರಸ್ವತಿ ಸಾಂಸ್ಕೃತಿಕ ಚೇತನ ಪ್ರಶಸ್ತಿ, ಹಿರಿಯ ನಾಟಕ ನಿರ್ದೇಶಕ ಅಂಬ್ಲಿಪ್ಪ ಕಲ್ಲೂರ ಅವರಿಗೆ ಪುಷ್ಪಾ ರಂಗ ಕಲಾರತ್ನ ಪ್ರಶಸ್ತಿ, ಸಾಮಾಜಿಕ ಕಾರ್ಯಕರ್ತ ಜಿ. ಮಲ್ಲಯ್ಯ ಪೋಲಂಪಲ್ಲಿ ಅವರಿಗೆ ಪುಷ್ಪಾ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ, ಚಿತ್ರ ಕಲಾವಿದ ರುದ್ರಪ್ಪ ಎಸ್. ತಳವಾರ ಅವರಿಗೆ ಪುಷ್ಪಾ ಸರಸ್ವತಿ ಕಲಾ ಚೇತನ ಪ್ರಶಸ್ತಿ, ಪರಿಸರವಾದಿ ಶಿವಬಸಪ್ಪ ಸಗರ ಅವರಿಗೆ ಪುಷ್ಪಾ ಪರಿಸರ ಸ್ಫೂರ್ತಿ ಪ್ರಶಸ್ತಿ, ಯುವ ಕವಿ ವಿಶಾಲ ಸಿಂಧೆ ಅವರಿಗೆ ಪುಷ್ಪಾ ಯುವ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ದೋರನಹಳ್ಳಿಯ ಶಿವಮಾನಪ್ಪ ಎ. ನಿಲಾಂಕರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ರಮಾನಂದ ಅವಧೂತರು, ಮಾಜಿ ಸಚಿವ ವೀರಬಸಂತರೆಡ್ಡಿ ಮುದ್ನಾಳ, ಜಿಪಂ ಸದಸ್ಯ ವಿನೋದಗೌಡ ಮಾಲಿ ಪಾಟೀಲ್, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ, ಯಾದಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಮಾಗನೂರ, ಡಾ| ಭೀಮಣ್ಣ ಮೇಟಿ, ಸ್ವತ್ಛ ಭಾರತ ಅಭಿಯಾನ ವ್ಯವಸ್ಥಾಪಕ ವಿಠ್ಠಲ್ ಭಟ್ ಜೋಷಿ, ಪಿಡಿಒ ಗೋವಿಂದ ರಾಠೊಡ, ನಿಜಗುಣ ದೋರನಹಳ್ಳಿ, ಮುಖ್ಯಗುರು ಎಂ.ಎಸ್. ಪಾಟೀಲ್, ನಾಗಪ್ಪ ಕಣೆಕಲ್, ನಾಟಕ ಸ್ಪರ್ಧೆಗಳ ನಿರ್ಣಾಯಕರಾದ ಶಿವಶರಣಪ್ಪ ಕಮರವಾಡಿ, ಶಿವಣ್ಣ ಇಟ್ಟಿನ್ ಚಿತ್ತಾಪುರ ಮುಂತಾದವರು ಉಪಸ್ಥಿತರಿದ್ದರು. ಪುಷ್ಪಾ ನಾಟ್ಯ ಸರಸ್ವತಿ ಕನ್ನಡ ಕಲಾ ಸಂಘದ ಅಧ್ಯಕ್ಷ ರವಿ ಬಿ. ದೇಸಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಚಂದ್ರಕಲಾ ಗೂಗಲ್, ಮಹೇಶ ಪತ್ತಾರ ನಿರೂಪಿಸಿದರು. ಬಸನಗೌಡ ಹೇರುಂಡಿ ಸ್ವಾಗತಿಸಿದರು.
Related Articles
Advertisement