Advertisement
ಉಡುಪಿ: ಕೋವಿಡ್-19 ವೈರಸ್‌ನಿಂದ ಜನರನ್ನು ರಕ್ಷಿಸಲು ಹಳ್ಳಿಗಳಲ್ಲಿ ಬಿಗಿಯಾದ ಮುಂಜಾಗ್ರತಾ ಕ್ರಮಗಳನ್ನು ಗ್ರಾಮೀಣ ಕಾರ್ಯಪಡೆ ನಿರ್ವಹಿಸುತ್ತಿವೆ.
ಗ್ರಾಮಗಳಲ್ಲಿ ಮದುವೆ ಇನ್ನಿತರ ಕಾರ್ಯಗಳಿಗೆ ಜನರು ಗುಂಪುಗೂಡದಂತೆ ಕ್ರಮವಹಿಸುವುದು. ಸಾರ್ವಜನಿಕ ಸ್ಥಳ ಗಳಲ್ಲಿ ಅಂತರ ಕಾಯ್ದುಕೊಳ್ಳುವುದು, ಗ್ರಾ.ಪಂ. ಕಚೇರಿ, ಬಸ್ ನಿಲ್ದಾಣ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನೀರು ವ್ಯವಸ್ಥೆ ಕಲ್ಪಿಸುವುದು, ಮೂಲಕ ನಿಯಮ ಪಾಲನೆ ಮಾಡುವಂತೆ ಮನವೊಲಿಸುವ ಕಾರ್ಯ ಸಮಿತಿ ಮಾಡುತ್ತಿದೆ.
Related Articles
ಕೋವಿಡ್ -19 ನಿಯಂತ್ರಿಸುವುದಕ್ಕಾಗಿ ಗ್ರಾ.ಪಂ.ನ 14ನೇ ಹಣಕಾಸು ಬಳಕೆಗೆ ಜಿ.ಪಂ. ಅವಕಾಶ ನೀಡಿದೆ. ಕ್ರಿಯಾಯೋಜನೆ ಬದಲಿಸಿಕೊಂಡು ಹಣವನ್ನು ಪಡಿತರ ಇಲ್ಲದವರಿಗೆ, ವಲಸೆ ಕಾರ್ಮಿಕರಿಗೆ, ನಿರ್ಗತಿಕರಿಗೆ ದಿನಸಿ, ಆಹಾರ ಒದಗಿಸಲು ಬಳಸಿಕೊಳ್ಳಬಹುದಾಗಿದೆ. ಇನ್ನುಳಿದ ಕೆಲ ಅನುದಾನದಲ್ಲಿ ಬ್ಲೀಚಿಂಗ್ ಪೌಡರ್, ಮಾಸ್ಕ್ ಸ್ಯಾನಿಟೈಸರ್, ಕೈ-ಕಾಲುಗಳಿಗೆ ರಕ್ಷಣಾ ಕವಚ, ಹ್ಯಾಂಡ್ ವಾಷ್ ಲಿಕ್ವಿಡ್, ಖರೀದಿ ಮಾಡಬೇಕಿದೆ.
Advertisement
ಕಾರ್ಯಪಡೆ ಆದ್ಯತೆಯ ಕೆಲಸಗಳೇನು?1.ಸ್ವಚ್ಚತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ
2 ದಿನಸಿ ಅಂಗಡಿ ಓಪನ್ ಮಾಡಿಸಿ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸುವುದು.
3 ಅಗತ್ಯ ಪಡಿತರ ಸಾಮಗ್ರಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುವುದು.
4 ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸುವಂತೆ ತಿಳಿ ಹೇಳುವುದು.
5 ಬೇರೆ ಊರುಗಳಿಂದ ಬರುವ ಅಧಿಕಾರಿಗಳಿಗೆ ಊಟ ನೀಡುವುದರ ಜತೆಗೆ ನೈತಿಕ ಬೆಂಬಲ ನೀಡುವುದು.
6 ಹೊರ ದೇಶ, ರಾಜ್ಯ, ಜಿಲ್ಲೆಗಳಿಂದ ಹಳ್ಳಿಗಳಿಗೆ ಬಂದಿರುವ ಮತ್ತು ಬರುತ್ತಿರುವವರ ಬಗ್ಗೆ ನಿಗಾ ವಹಿಸಿ, ಅವರ ಆರೋಗ್ಯ ತಪಾಸಣೆ ಮಾಡಿಸುವುದು. ಹೋಂ ಕ್ವಾರಂಟೈನ್‌ಗೆ ಸೂಚಿಸುವುದು.
6 ಹೊರಗಿನಿಂದ ಹಳ್ಳಿಗಳಿಗೆ ಬಂದಿರುವವರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುವುದು.
6 ಧ್ವನಿವರ್ಧಕದ ಮೂಲಕ ಕೋವಿಡ್-19 ಬಗ್ಗೆ ಪ್ರಚಾರ,ಜಾಗೃತಿ ಮೂಡಿಸುವುದು. ಹಣಕಾಸಿನ ನೆರವು
ಸರಕಾರ ಬಿಡುಗಡೆಗೊಳಿಸಿದ 20,000 ರೂ ಮೊತ್ತದ ಹಣವನ್ನು ಗ್ರಾಮ ಮಟ್ಟದ ಪ್ರತಿ ಟಾಸ್ಕ್ ಪೋರ್ಸ್ ಕಮಿಟಿಗೆ ಬಳಕೆಗೆ ನೀಡಿದೆ. ಹೆಚ್ಚುವರಿ ಹಣಕಾಸಿನ ನೆರವನ್ನು ಕೂಡ ಬಳಸಿಕೊಳ್ಳಲಾಗಿದೆ. ಎಸ್‌ಬಿಎಂ ಅಡಿಯಲ್ಲಿ ಗ್ರಾ.ಪಂ. ಕಾರ್ಮಿಕರು, ಸ್ವಚ್ಚತೆ ಕಾರ್ಮಿಕರಿಗೆ ಅಗತ್ಯ ಬಳಕೆಗೆ ಸ್ಯಾನಿಟೈಸರ್, ಮಾಸ್ಕ್ , ಕೈಗವಸು ಖರೀದಿ ಹಾಗೂ ಹೆಚ್ಚುವರಿ ಇತರ ಹಣವನ್ನು ಬಳಸಿಕೊಳ್ಳಲು ಗ್ರಾ.ಪಂಗಳಿಗೆ ಸೂಚನೆ ನೀಡಲಾಗಿದೆ.
-ಪ್ರೀತಿ ಗೆಹ್ಲೋಟ್,
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿ.ಪಂ., ಉಡುಪಿ.