Advertisement
ದರ್ಪಣದೇಶದ 1.29 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳಲ್ಲಿ 2017ರ ಡಿ.15ರಿಂದ ದರ್ಪಣ (ಡಿಜಿಟಲ್ ಎಡ್ವಾನ್ಸ್‌ಮೆಂಟ್ ಆಫ್ ರೂರಲ್ ಪೋಸ್ಟ್ ಆಫೀಸ್ ಫಾರ್ ಎ ನ್ಯೂ ಇಂಡಿಯಾ) ಎನ್ನುವ ಯೋಜನೆ ಜಾರಿಯಾಗಿತ್ತು. ಸೇವಾ ಗುಣಮಟ್ಟ ವೃದ್ಧಿ, ಮೌಲ್ಯವರ್ಧಿತ ಸೇವೆಗಳ ಕೊಡುಗೆ, ಬ್ಯಾಂಕುಗಳಿಲ್ಲದಲ್ಲಿ ಹಣಕಾಸು ವ್ಯವಹಾರಗಳಲ್ಲಿ ಗ್ರಾಮೀಣ ಜನರ ಒಳಗೊಳ್ಳುವಿಕೆಗೆ ಪ್ರೋತ್ಸಾಹ ಇದರ ಮುಖ್ಯ ಉದ್ದೇಶ.
ಈಗ ಈ ಯೋಜನೆಯಂತೆ ಗ್ರಾಮೀಣ ಅಂಚೆ ಕಚೇರಿಗಳಿಗೆ ರೂರಲ್ ಇನಾ#ರ್ಮೆàಶನ್ ಕಮ್ಯುನಿಕೇಶನ್ ಟೆಕ್ನಾಲಜಿ (ಆರ್‌ಐಸಿಟಿ)ಅಂಗವಾಗಿ ಇನ್ಫೋಸಿಸ್ ಮೂಲಕ ಸಿಂಪ್ಯೂಟರ್ ಮಾದರಿಯ ಉಪಕರಣ ನೀಡಲಾಗಿದೆ. ಇದರಲ್ಲಿ ಎಟಿಎಂ ಕಾರ್ಡ್ ಸ್ವೆ„ಪ್ ಮಾಡಬಹುದು, ಬೆರಳಚ್ಚು ಗುರುತು ತೆಗೆಯಬಹುದು. ಇಂಟರ್‌ನೆಟ್ ಸಂಪರ್ಕದಿಂದ ಎಲ್ಲ ವ್ಯವಹಾರಗಳೂ ತತ್‌ಕ್ಷಣ ಅಂಚೆ ಇಲಾಖೆಯ ಕಂಪ್ಯೂಟರ್‌ಗೆ ರವಾನೆಯಾಗುತ್ತವೆ. ಉಪಯೋಗ
ಎಟಿಎಂ ಕಾರ್ಡ್ ಇದ್ದರೆ ಸಾಕು, ಮನಿಯಾರ್ಡರ್, ಸ್ಪೀಡ್‌ಪೋಸ್ಟ್, ರಿಜಿಸ್ಟರ್ ಪೋಸ್ಟ್‌ಗೆ ಪಾವತಿ ಮಾಡಬಹುದು. ರಿಜಿಸ್ಟರ್ಡ್ ಅಂಚೆ, ಸ್ಪೀಡ್‌ಪೋಸ್ಟ್, ಮನಿಯಾರ್ಡರ್, ವೃದ್ಧಾಪ್ಯ, ವಿಧವಾ, ಅಂಗವಿಕಲ ಮಾಸಾಶನಗಳನ್ನು ವಿತರಿಸಿದ ಕುರಿತು ತತ್‌ಕ್ಷಣ ಮಾಹಿತಿ ಅಪ್‌ಲೋಡ್ ಆಗುತ್ತದೆ. ವಿದ್ಯುತ್ ಬಿಲ್ ಪಾವತಿ ವಿವರ ತತ್‌ಕ್ಷಣ ಮೆಸ್ಕಾಂ ಕಂಪ್ಯೂಟರ್‌ಗೂ ರವಾನೆಯಾಗುತ್ತದೆ.
Related Articles
ಗ್ರಾಮಾಂತರದಲ್ಲಿ ನೆಟ್‌ವರ್ಕ್ ಸಮಸ್ಯೆಯಿದ್ದು, ಮಾಹಿತಿ ತುಂಬಲು ಆಗುತ್ತಿಲ್ಲ ಎಂಬ ಅಳಲು ಅಂಚೆ ನೌಕರರದು. ಈ ಕುರಿತು ನೌಕರರ ಸಂಘಟನೆ ಇಲಾಖೆಗೆ ದೂರು ಸಲ್ಲಿಸಿದೆ. ಸರ್ವರ್ ಬಿಝಿ ಸಂದೇಶ ಬರುವುದು ಬಹುದೊಡ್ಡ ಸಮಸ್ಯೆ. ಪ್ರಾಯಃ ಸರ್ವರ್‌ನ ಸಾಮರ್ಥ್ಯ ಹೆಚ್ಚಿಸದ ಕಾರಣ ವ್ಯವಹಾರ ತಾಸುಗಟ್ಟಲೆ ವಿಳಂಬವಾಗುತ್ತದೆ. ಇದರಲ್ಲಿ ನಮೂದಿಸದ ವಿನಾ ಹಣಕಾಸಿಗೆ ಸಂಬಂಧಿಸಿದ, ದಾಖಲೆಗಳ ಮೂಲಕ ವಿತರಿಸುವ ಯಾವುದೇ ಕೆಲಸ ಮಾಡಲಾಗುತ್ತಿಲ್ಲ. ಸ್ಪೀಡ್‌ಪೋಸ್ಟ್, ರಿಜಿಸ್ಟರ್ಡ್ ಪೋಸ್ಟ್, ಮನಿಯಾರ್ಡರ್ ವಿತರಣೆ ಕೂಡ ವಿಳಂಬವಾಗುತ್ತಿದೆ ಎನ್ನುವುದು ಸಿಬಂದಿಯ ದೂರು. ಅಕ್ಷರಗಳ ಕೀಲಿಮಣೆ ಸಣ್ಣದಾಗಿದ್ದು, ಕಾಣುವುದಿಲ್ಲ ಎನ್ನುತ್ತಾರೆ.
Advertisement
ವ್ಯವಹಾರಉಡುಪಿ ಜಿಲ್ಲೆಯಲ್ಲಿಯೇ ಅತಿಹೆಚ್ಚು ವ್ಯವಹಾರ ಮಾಡುವ ಗ್ರಾಮೀಣ ಅಂಚೆ ಕಚೇರಿ ಕುಂದಾಪುರ ತಾ|ನ ಕರ್ಕುಂಜೆಯಲ್ಲಿದೆ. ವಿಮೆ, ವಿದ್ಯುತ್ ಬಿಲ್ ಸ್ವೀಕಾರ, ಮನಿಯಾರ್ಡರ್‌ನಿಂದಾಗಿ ಕೆಲವು ಕಚೇರಿಗಳಲ್ಲಿ 1 ಲಕ್ಷ ರೂ.ಗೂ ಅಧಿಕ ವ್ಯವಹಾರ ಪ್ರತಿದಿನ ನಡೆಯುತ್ತದೆ. ಆ್ಯಂಟೆನಾ ಕೊಡಲಾಗುತ್ತಿದೆ
ಕೆಲವೆಡೆ ಸಿಗ್ನಲ್ ಸಮಸ್ಯೆ ಕುರಿತು ದೂರು ಬಂದಿದೆ. ಸಿಗ್ನಲ್ ಬೂಸ್ಟ್ ಮಾಡಿಕೊಡುವ ತಂತ್ರಾಂಶ ಅಳವಡಿಸಿದ ಸಾಧನೆಗಳು ಇವಾಗಿದ್ದು ಆ್ಯಂಟೆನಾ ಕೊಡಲಾಗುತ್ತಿದೆ. ಈಗಾಗಲೇ ಸೇನಾಪುರ, ಇಡೂರು ಕುಂಞಾಡಿಯಲ್ಲಿ ಕೊಡಲಾಗಿದ್ದು, ಇತರೆಡೆಗೂ ನೀಡಲು ಬರೆಯಲಾಗಿದೆ. ಸರ್ವರ್ ಬಿಝಿ ಸಮಸ್ಯೆ ಕುರಿತು ಇಲಾಖೆಗೆ ಪತ್ರ ಬರೆಯಲಾಗಿದೆ. ಮನಿಯಾರ್ಡರ್, ಪೋಸ್ಟ್ ವಿತರಣೆಗೆ ಯಂತ್ರಾರಂಭಕ್ಕೆ ಕಾಯಬೇಕಿಲ್ಲ. ಪುಸ್ತಕದಲ್ಲಿ ಬರೆದು ವಿತರಿಸಬಹುದು. ಗ್ರಾಹಕರಿಗೆ ವಿಳಂಬ ಮಾಡುವಂತಿಲ್ಲ.
-ಗಣಪತಿ ಮರಡಿ, ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಫ್ ಪೋಸ್ಟ್ , ಕುಂದಾಪುರ ಉಪವಿಭಾಗ ಹೆಚ್ಚುವರಿ ಸಮಯ
ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕಚೇರಿ ಸಮಯ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಸಂಜೆ 5 ಗಂಟೆಯಾದರೂ ಫೀಡ್ ಮಾಡುವ ಕೆಲಸ ಮುಗಿಯದು. ಯಂತ್ರಾರಂಭಕ್ಕೆ ಬೆರಳಚ್ಚು ಬೇಕಾದ ಕಾರಣ ಪೋಸ್ಟ್ ಮಾಸ್ಟರನ್ನು ಆಗಾಗ ಬದಲಿಸುವಂತಿಲ್ಲ. ಯಾರ ಬೆರಳಚ್ಚು ದಾಖಲಾಗಿದೆಯೋ ಅವರೇ ಬರಬೇಕಾಗುತ್ತದೆ.
– ಸಮಸ್ಯೆ ಎದುರಿಸುತ್ತಿರುವ ಪೋಸ್ಟ್ ಮಾಸ್ಟರ್ -ಲಕ್ಷ್ಮೀ ಮಚ್ಚಿನ