Advertisement

ಗ್ರಾಮೀಣ ವಸತಿ ಯೋಜನೆ: ಅಧಿಕಾರಿಗಳಿಗೆ ಗಡುವು

12:09 PM Jun 26, 2019 | Suhan S |

ಹಾಸನ: ಗ್ರಾಮೀಣ ವಸತಿ ಯೋಜನೆಯಡಿ 9500 ಫ‌ಲಾನುಭವಿಗಳಿಗೆ ಜು.5ರೊಳಗೆ ನಿವೇಶನದ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಪಿಡಿಒ ಗಳ ಸಭೆ ನಡೆಸಿದ ಅವರು, ಈಗಾಗಲೇ ಗುರುತಿಸಿರುವ ಫ‌ಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು. ಆನಂತರ ಮನೆ ನಿರ್ಮಾಣ ಕಾರ್ಯ ಆರಂಭಿಸಲು ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

ನಗರ ಪ್ರದೇಶದಲ್ಲಿಯೂ ವಸತಿ ರಹಿತ ಕೂಲಿ ಕಾರ್ಮಿಕರು, ಹೋಟೆಲ್ಗಳ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರನ್ನು ಗುರುತಿಸಿ ಪಟ್ಟಿ ಮಾಡುವ ಪ್ರಕ್ರಿಯೆ ಜೂ.21ರಿಂದ ಆರಂಭ ವಾಗಿದ್ದು, ಜೂ.29ಕ್ಕೆ ಮುಗಿಯಲಿದೆ. ಆನಂತರ ಅರ್ಹ ಫ‌ಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಲಾಗುವುದು. ಹಾಸನ ನಗರದಲ್ಲಿ 3ಸಾವಿರ ನಿವೇಶನಗಳನ್ನು ಹಂಚಲು ನಿರ್ಧರಿಸಿದ್ದು, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಎಸ್‌.ಎಂ. ಕೃಷ್ಣ ಉಪ ನಗರ ಬಡಾವಣೆಯಲಿ 500 ನಿವೇಶನಗಳನ್ನು ನೀಡಲಿದೆ. ಇನ್ನುಳಿದಂತೆ ನಗರಸಭೆ ಆಶ್ರಯ ಮತ್ತಿತರ ಯೋಜನೆಗಳಡಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರೈತರ ಸಬಲೀಕರಣಕ್ಕೆ ಕ್ರಮ: ಸರ್ಕಾರದ ಎಲ್ಲಾ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸ ಬೇಕು. ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ ಮತ್ತು ಅರಣ್ಯ ಇಲಾಖೆಗಳು ಜಂಟಿ ಯಾಗಿ ಮಾದರಿ ಸಂಯೋಜಿತ ಬೇಸಾಯ ಯೋಜನೆ ಜಾರಿಗೆ ತರುವ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ಕ್ರಮಕೈಗೊಳ್ಳಬೇಕು ಎಂದ ಅವರು, ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಹೊಸ ಸುಧಾರಣಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೈತರಲ್ಲಿ ಅತ್ಮಶ್ವಾಸ ತುಂಬಬೇಕಿದೆ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕ ವಾಗಿ ಸದ್ಬಳಕೆ ಮಾಡಿಕೊಂಡು ಅಂತರಿಕ ಬಹು ಬೆಳೆ ಪ್ರಯೋಗ ಜಾರಿಗೆ ತರಬೇಕು ಎಂದು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು.

ಪಿಡಿಒಗಳು ಕಾರ್ಯನಿರ್ವಹಿಸಲಿ: ಗ್ರಾಮ ಪಂಚಾಯಿತಿ ಗಳಲ್ಲಿ ಪಿಡಿಒಗಳು ಹೆಚ್ಚು ಸಮರ್ಥ ವಾಗಿ ಕೆಲಸಮಾಡಬೇಕು. ಯೋಜನೆಗಳ ಪರಿಣಾ ಮಕಾರಿ ಅನುಷ್ಠಾನದ ಜೊತೆಗೆ ಗ್ರಾಮ ಪಂಚಾ ಯತಿ ವ್ಯಾಪ್ತಿಯ ಸ್ವತ್ತುಗಳನ್ನು ಸುರಕ್ಷಿತಗೊಳಿಸ ಬೇಕು. ರೈತರ ಜಮೀನಿನಲ್ಲೂ ತೋಟಗಾರಿಕೆ ಇಲಾಖೆ ಫಾರಂಗಳಲ್ಲಿಯೂ ಮಾದರಿ ಬೇಸಾಯ ಜಾರಿಗೊಳ್ಳಬೇಕು ಅದಕ್ಕೆ ಅಗತ್ಯರುವ ಅನುದಾನ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Advertisement

ತೋಟಗಾರಿಕೆ ಕಾಲೇಜು ಆರಂಭಿಸಿ: ಸೋಮನ ಹಳ್ಳಿ ಕಾವಲ್ನಲ್ಲಿ ತೋಟಗಾರಿಕೆ ಕಾಲೇಜು ಪ್ರಾರಂಭಕ್ಕೂ ಅಗತ್ಯ ಸಿದ್ದತೆ ಮಾಡಿಕೊಳ್ಳಿ ಎಂದ ಅವರು, ಜಿಲ್ಲೆಯಲ್ಲಿ ಆಲೂಗೆಡ್ಡೆ ಬೇಸಾಯ ಪ್ರದೇಶ ಕ್ಷೀಣಿಸುತ್ತಿದೆ, ಇದನ್ನು ತಪ್ಪಿಸಲು ಸೂಕ್ತ ಪ್ರೋತ್ಸಾಹ ಕ್ರಮಗಳನ್ನು ಜಾರಿಗೊಳಿಸಿ, ಸಬ್ಸಿಡಿ ಹಣವನ್ನು ತ್ವರಿತವಾಗಿ ರೈತರ ಖಾತೆಗಳಿಗೆ ವರ್ಗಾಯಿಸಿ ಎಂದರು.

ಜಿಲ್ಲೆಯಲ್ಲಿ ಜಲಾಮೃತ, ಜಲ ಸಂವರ್ಧನೆ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿ ಗೊಳಿಸಬೇಕು ದೇಶದ ನಾನಾ ಭಾಗಗಳಲ್ಲಾಗಿರುವ ಯಶೋಗಾಥೆಗಳನ್ನು ಪರಿಶೀಲಿಸಿ ಜಿಲ್ಲೆ ಯಲ್ಲೂ ಅದನ್ನು ಸಾಧ್ಯತೆ ಆಧಾರದ ಮೇಲೆ ಜಾರಿಗೊಳಿಸಬೇಕು. ಪಶುಸಂಗೋ ಪನೆ ಯನ್ನು ಪ್ರೋತ್ಸಾಸಿ ಎಂದು ರೇವಣ್ಣ ಹೇಳಿದರು.

ಜಿಪಂ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಸ್ವರೂಪ್‌, ಜಿಪಂ ಸಿಇಒ ಪುಟ್ಟಸ್ವಾಮಿ, ಎಡೀಸಿ ವೈಶಾಲಿ, ಎಸಿಗಳಾದ ನಾಗರಾಜ್‌, ಕವಿತಾ ರಾಜಾರಾಂ ಹಾಗೂ ವಿವಿಧ ಇಲಾಖಾ ಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next