Advertisement

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮ

02:28 PM Jan 30, 2021 | Team Udayavani |

ಮದ್ದೂರು: ಕೋವಿಡ್ ಸಂದರ್ಭದಲ್ಲೂ ಲಯನ್ಸ್‌ ಸಂಸ್ಥೆ ಹಲವು ಸಮಾಜಮುಖೀ ಕಾರ್ಯಗಳನ್ನುಕೈಗೊಂಡು, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮಿಸು ತ್ತಿದ್ದೇವೆ ಎಂದು ಲಯನ್ಸ್‌ ಸಂಸ್ಥೆ ಜಿಲ್ಲಾ ರಾಜ್ಯಪಾಲ ರಮೇಶ್‌, ತಿಳಿಸಿದರು.

Advertisement

ಪಟ್ಟಣದ ಎಂ.ಕೆ.ಬಿ.ಕ್ರೀಡಾ ಬಳಗದಲ್ಲಿ ಮದ್ದೂರು ಲಯನ್ಸ್‌ ಸಂಸ್ಥೆ ಹಾಗೂ ಮಂಡ್ಯ ಒಡನಾಡಿ ಲಯನ್ಸ್‌ ಸಂಸ್ಥೆ ಸಹಯೋಗದಲ್ಲಿ ನಡೆದ ಸಂಸ್ಥೆ ಉದ್ಘಾಟನೆ, ಪ್ರತಿಜ್ಞಾವಿಧಿ ಬೋಧನೆ ಹಾಗೂ ಸನ್ನದು ಪತ್ರ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಲಯನ್ಸ್‌ ಸಂಸ್ಥೆ ಪದಾಧಿಕಾರಿಗಳು ಸೇವಾ ಮನೋಭಾವ ಮೈ ಗೂಡಿಸಿಕೊಂಡು ಸಮಾಜದ ಅಭ್ಯುದಯಕ್ಕೆ ಶ್ರಮಿಸಬೇಕು. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಜತೆಗೆ ಅತ್ಯುನ್ನತ ಹುದ್ದೆ ಅಲಂಕರಿಸಲು ಶ್ರಮಿಸಬೇಕು ಎಂದರು.

ಸೇವಾ ಕಾರ್ಯದಿಂದ ಮಾದರಿ: ಲಯನ್ಸ್‌ ಸಂಸ್ಥೆಯು  ಕೋವಿಡ್‌-19 ವೇಳೆ ರಾಜ್ಯ ಹಾಗೂ ಜಿಲ್ಲೆಯಲ್ಲಿ ಅರಿವುಮೂಡಿಸುವ ಜತೆಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ,  ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ,ಆರೋಗ್ಯ ಶಿಬಿರ, ರಕ್ತದಾನ ಇನ್ನಿತರೆ ಸಮಾಜಮುಖೀ ಸೇವಾ ಕಾರ್ಯಗಳನ್ನು ಕೈಗೊಂಡು ಇತರೆ ಸಂಘ-  ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಪ್ರತಿಭೆ ಅನಾವರಣಕ್ಕೆ ವೇದಿಕೆ: ಸಂಸ್ಥೆ ಅಧ್ಯಕ್ಷ ಎಸ್‌.ಪಿ. ಆದರ್ಶ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಅಗತ್ಯವ ರುವ ಪೀಠೊಪಕರಣಗಳು ಇನ್ನಿತರೆ ಸಾಮಗ್ರಿಗಳನ್ನು ವಿತರಿಸಲು ಮುಂದಾಗುವ ಜತೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯೋಜನೆಗಳನ್ನು ಕೈ ಗೊಂಡು ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವುದಾಗಿ ಹೇಳಿದರು.

ಇದನ್ನೂ ಓದಿ:ಕಲಬುರಗಿ ಮ್ಯಾನ್ ಹೋಲ್ ದುರಂತಕ್ಕೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಕಾರಣ: ಎಂ. ಶಿವಣ್ಣ

Advertisement

ಪ್ರತಿಜ್ಞಾವಿಧಿ: ಮಂಡ್ಯ ಒಡನಾಡಿ ಲಯನ್ಸ್‌ ಸಂಸ್ಥೆ ನೂತನ ಪದಾಧಿಕಾರಿಗಳಿಗೆ ಸಂಸ್ಥಾಪಕ ಅಧ್ಯಕ್ಷ ವಿ.ಕೆ. ಜಗದೀಶ್‌ ಪ್ರತಿಜ್ಞಾವಿಧಿ ಬೋಧಿಸಿದರು. ಐಎಎಸ್‌ ವ್ಯಾಸಂಗ ಮಾಡುತ್ತಿರುವ ಮಳವಳ್ಳಿ ತಾಲೂಕಿನ ವಿದ್ಯಾ ರ್ಥಿನಿ ರಜಿನಿ ಅವರಿಗೆ ಸಂಸ್ಥೆಯಿಂದ ಆರ್ಥಿಕ ಧನ ಸಹಾಯ ವಿತರಿಸಿದರು. ಲಯನ್ಸ್‌ ಸಂಸ್ಥೆ ವಲಯ ಅಧ್ಯಕ್ಷ ಪಣ್ಣೇದೊಡ್ಡಿ ವಿ. ಹರ್ಷ, ಪ್ರಾಂತೀಯ ಅಧ್ಯಕ್ಷ ಸುನೀಲ್‌ಕುಮಾರ್‌, ಪದಾ ಧಿಕಾರಿಗಳಾದ ಸುರೇಶ್‌ರಾಮು, ಮೋಹನ್‌, ಕೆ.ಎಲ್‌. ರಾಜಶೇಖರ್‌, ಆನಂದ್‌, ಸುನೀಲ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next