Advertisement

ಗ್ರಾಮೀಣ ಸಂಸ್ಕೃತಿ ಸೊಗಡು ಶ್ರೀಮಂತ: ಶಿವಗುಂಡಪ್ಪ

09:32 AM Feb 12, 2019 | |

ಭಾಲ್ಕಿ: ಗ್ರಾಮೀಣ ಜನರ ಸಂಸ್ಕೃತಿಯ ಸೊಡಗು ಎಲ್ಲರೂ ಮೆಚ್ಚುವಂತಹದ್ದಾಗಿದೆ ಎಂದು ಡೈಯಟ್ ಬೀದರ್‌ ಹಿರಿಯ ಉಪನ್ಯಾಸಕ ಶಿವಗುಂಡಪ್ಪ ಸಿದ್ದನಗೋಳ ಹೇಳಿದರು.

Advertisement

ಧನ್ನೂರ(ಎಸ್‌) ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಕಲ್ಯಾಣ ಕುವರ ಕಲ್ಚರಲ್‌ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ‘ನಮ್ಮೂರು ಧನ್ನೂರು ಹಬ್ಬ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅರಳುವ ಪ್ರತಿಭೆಗಳು ಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಜನಪದ ಕಲೆ ವ್ಯಾಪಕವಾಗಿ ಪಸರಿಸಿದೆ. ನಮ್ಮ ಜನಪದರು ಆಡುಭಾಷೆಯಲ್ಲಿಯೇ ಹಲವಾರು ಕವನಗಳನ್ನು ರಚಿಸಿ ಕೇಳುಗರ ಮನ ರಂಜಿಸಿದ್ದಾರೆ. ಹೀಗಾಗಿ ಗ್ರಾಮೀಣ ಸಂಸ್ಕೃತಿಯ ಸೊಡಗು ಎಲ್ಲರನ್ನೂ ಮೆಚ್ಚುವಂತೆ ಮಾಡುತ್ತದೆ ಎಂದು ಹೇಳಿದರು.

ಮುಖ್ಯಶಿಕ್ಷಕ ಗಣಪತಿ ಬಾವುಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲ್ಯಾಣ ಕುವರ ಕಲ್ಚರಲ್‌ ಟ್ರಸ್ಟ್‌ ಅಧ್ಯಕ್ಷ, ಚಿತ್ರನಟ ಬಿ.ಜೆ.ವಿಷ್ಣುಕಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ರಾಠೊಡ, ಬಾಬುರಾವ್‌ ಮಜ್ಜಗೆ, ಸೂರ್ಯಕಾಂತ ಕುಲಕರ್ಣಿ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಇದೇವೇಳೆ ಹಾಸ್ಯ ನಟ ವೈಜಿನಾಥ ಬಿರಾದಾರ, ನಟಿ ರೇಖಾದಾಸ್‌ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಬೀದರ ಜಿಲ್ಲೆಯ ಯುವಕ, ಯುವತಿಯರಿಂದ ರೂಪ ದರ್ಶಕ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮದ ಪ್ರತಿಭೆಗಳಿಗೆ ಸನ್ಮಾನ, ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಟ್ರಸ್ಟ್‌ ವತಿಯಿಂದ ಸನ್ಮಾನ ನಡೆಯಿತು.

Advertisement

ವಿವಿಧ ಕಾರ್ಯಕ್ರಮಗಳು: ನಮ್ಮೂರ ಪ್ರತಿಭೆಗಳು ಕಾರ್ಯಕ್ರಮವನ್ನು ಕರ್ನಾಟಕ ಕಾಲೇಜಿನ ಪ್ರಾಂಶುಪಾಲ ಡಾ|ಎಂ.ಎಸ್‌. ಪಾಟೀಲ ಉದ್ಘಾಟಿಸಿದರು. ಸಂಜಿವಕುಮಾರ ಕಣಜಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ವೀರಶೆಟ್ಟಿ ಬಾವುಗೆ, ಅರವಿಂದ ಕೋಟೆ, ಶಿವಕುಮಾರ ಬಚ್ಚಣ್ಣಾ, ಉಪಸ್ಥಿತರಿದ್ದರು.

ಮನರಂಜನೆ ಕಾರ್ಯಕ್ರಮವನ್ನು ಸಂಗೀತ ಕಲೆಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಂಭುಲಿಂಗ ವಾಲ್ದೊಡ್ಡಿ ಉದ್ಘಾಟಿಸಿದರು. ಕಲ್ಯಾಣಕುವರ ಕಲ್ಚರಲ್‌ ಟ್ರಸ್ಟ್‌ ಅಧ್ಯಕ್ಷ ಬಿ.ಜೆ.ವಿಷ್ಣುಕಾಂತ ಅಧ್ಯಕ್ಷತೆ ವಹಿಸಿದ್ದರು. ಸುನಿತಾ ಗೌಡರ, ಎಂ.ಮುಕ್ತುಂಬಿ ಇದ್ದರು. ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು.

ಮೆರವಣಿಗೆ: ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಆಯೋಜಿಸಿದ್ದ ನಮ್ಮೂರು ಧನ್ನೂರು ಹಬ್ಬದಲ್ಲಿ ಬೆಳಗ್ಗೆ ವಿವಿಧ ಜಾನಪದ ಕಲಾತಂಡದವರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರ ದೇವರ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next