Advertisement

ಬ್ಯಾಂಕ್‌ ಸಿಬ್ಬಂದಿ ವರ್ತನೆಗೆ ಗ್ರಾಮೀಣ ಗ್ರಾಹಕರ ಆಕ್ರೋಶ

05:20 PM Jan 17, 2022 | Team Udayavani |

ಕೊರಟಗೆರೆ: ಎಸ್‌ಬಿಐ ಕೊರಟಗೆರೆ ಶಾಖೆಯಲ್ಲಿ 55 ಸಾವಿರಕ್ಕೂ ಅಧಿಕ ಗ್ರಾಹಕರ ಖಾತೆಗಳಿವೆ. ಬ್ಯಾಂಕಿನಲ್ಲಿ ನಿತ್ಯ 4 ಸಾವಿರಕ್ಕೂ ಅಧಿಕ ಗ್ರಾಹಕರಿಂದ 2 ಕೋಟಿಗೂ ಅಧಿಕ ವಹಿವಾಟು ನಡೆಯಲಿದೆ. ಬ್ಯಾಂಕಿನಲ್ಲಿ ಕೆಲಸ ಮಾಡುವ ಪ್ರಭಾರ ವ್ಯವಸ್ಥಾಪಕ, ಲೆಕ್ಕಾಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಗ್ರಾಮೀಣ ಪ್ರದೇಶದ ಸಾವಿರಾರು ಮಹಿಳಾ ಗ್ರಾಹಕರಿಗೆ ಸಮಸ್ಯೆ ಎದುರಾಗಿದೆ.

Advertisement

ಪಟ್ಟಣದ ಟಿಎಂ ರಸ್ತೆಯ ಎಸ್‌ಬಿಐ ಬ್ಯಾಂಕಿನ ಆವರಣದಲ್ಲಿ ಗ್ರಾಹಕರಿಗೆ ಶೌಚಾಲಯ, ನೀರು, ಪಾರ್ಕಿಂಗ್‌ ವ್ಯವಸ್ಥೆ ಮರೀಚಿಕೆಯಾಗಿದೆ. ಅಕ್ಷರ ಜ್ಞಾನವಿಲ್ಲದ ಗ್ರಾಮೀಣ ಗ್ರಾಹಕರ ಪರಿಸ್ಥಿತಿ ದುಸ್ಥಿತಿಗೆ ತಲುಪಿದೆ. ಮಹಿಳೆಯರ ನೋವಿನ ವೇದನೆ ಹೆಚ್ಚಾಗಿ ಬ್ಯಾಂಕಿನ ವ್ಯವಹಾರವನ್ನೇ ನಿಲ್ಲಿಸುವ ಪ್ರಯತ್ನ ನಡೆದಿದೆ ಎಂದು ತಿಳಿದು ಬಂದಿದೆ.

ಬ್ಯಾಂಕಿನಿಂದ ಸೌಲಭ್ಯವಿಲ್ಲ: ಗ್ರಾಮೀಣ ಪ್ರದೇಶದಿಂದ ಸಾವಿರಾರು ಗ್ರಾಹಕರು ಬ್ಯಾಂಕಿಗೆ ವಹಿವಾ ಟಿಗೆ ಆಗಮಿಸುತ್ತಾರೆ. ಬ್ಯಾಂಕಿನ ಆವರಣದಲ್ಲಿ ಇಂತಿಷ್ಟು ಹಣ ಕೊಟ್ಟರೇ ಮಾತ್ರ ಖಾಸಗಿ ವ್ಯಕ್ತಿಗಳು ಬರೆದುಕೊಡುತ್ತಾರೆ ಇಲ್ಲವಾದರೇ ಗ್ರಾಹಕರು ಮನೆಗೆ ಹೋಗಬೇಕಾದ ಪರಿಸ್ಥಿತಿಯಿದೆ.

ವಹಿವಾಟಿಗೆ ಬರುವ ಗ್ರಾಹಕರಿಗೆ ಬ್ಯಾಂಕಿನಿಂದ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಗ್ರಾಹಕರ ಜೊತೆ ಉತ್ತಮ ಬಾಂಧವ್ಯವಿಲ್ಲದೇ ಸಮಸ್ಯೆ ನಿತ್ಯ ಹೆಚ್ಚಾಗಿ ಗ್ರಾಹಕರಿಂದ ತಮ್ಮ ಬ್ಯಾಂಕಿನ ಖಾತೆಯನ್ನುಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಗ್ರಾಹಕರಿಗೆ ಭಿತ್ತಿಪತ್ರ ಸ್ವಾಗತ: ಎಸ್‌ಬಿಐ ಕಟ್ಟಡದ ಎಟಿಎಂ ಎಡಭಾಗದಲ್ಲಿ ನರಗಳ ದೌರ್ಬಲ್ಯ, ಮಾನಸಿಕ ಸಮಸ್ಯೆ, ಲೈಂಗಿಕ ಸಮಸ್ಯೆ, ಉರಿನೋವು ಸೇರಿದಂತೆ ವಿವಿಧ ರೋಗಗಳಿಗೆ ಔಷಧಿನೀಡುವಂತಹ ಭಿತ್ತಿಪತ್ರ ಬ್ಯಾಂಕಿಗೆ ಬರುವಗ್ರಾಹಕರಿಗೆ ಸ್ವಾಗತ ಮಾಡುವಂತಿದೆ. ಬ್ಯಾಂಕ್‌ ಕಿಟಕಿಗಳು ಶಿಥಿಲವಾಗಿ ಭದ್ರತೆ ಮರೀಚಿಕೆಯಾಗಿದೆ.

Advertisement

ಬ್ಯಾಂಕ್‌ ಸಿಬ್ಬಂದಿ ವಿರುದ್ಧ ದೂರು: ಬ್ಯಾಂಕ್‌ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಶುಕ್ರವಾರ ಗಲಾಟೆ ನಡೆದಿದೆ. ಈ ವೇಳೆ ವಿಡೀಯೊ ಮಾಡಲುಪ್ರಯತ್ನಿಸಿದ ವೇಳೆ ಬ್ಯಾಂಕಿ ಪ್ರಭಾರ ವ್ಯವಸ್ಥಾಪಕಶ್ರೀನಿವಾಸ್‌, ಸಿಬ್ಬಂದಿ ರಾಮಚಂದ್ರ ನಾಯ್ಕ ಪತ್ರಕರ್ತನ ಮೊಬೈಲ್‌ ಕಸಿಯುವ ಪ್ರಯತ್ನ ನಡೆಸಿ,ಹಲ್ಲೆಗೆ ಯತ್ನಿಸಿದ್ದಾರೆ. ಬ್ಯಾಂಕಿನ ಇಬ್ಬರು ಸಿಬ್ಬಂದಿವಿರುದ್ಧ ಕೊರಟಗೆರೆ ಠಾಣೆಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ದೂರು ನೀಡಲಾಗಿದೆ.

ಎಸ್‌ಬಿಐ ಬ್ಯಾಂಕಿನಲ್ಲಿ ವಹಿವಾಟಿಗೆಗ್ರಾಹಕರು ನಿತ್ಯ ಅಲೆಯಬೇಕಿದೆ.ಮಹಿಳೆಯರು ಶೌಚಾಲಯಕ್ಕೆ ಪರದಾಡುವಪರಿಸ್ಥಿತಿಯಿದೆ. ಗ್ರಾಹಕರು ಬ್ಯಾಂಕಿನ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಪೊಲೀಸ್‌ ಠಾಣೆಗೆದೂರು ನೀಡುವ ಬೆದರಿಕೆ ಹಾಕುತ್ತಾರೆ.ಬ್ಯಾಂಕ್‌ ಸಿಬ್ಬಂದಿ ವರ್ತನೆ ಬದಲಾಗಬೇಕು. – ಚೇತನ್‌, ಎಸ್‌ಬಿಐ ಗ್ರಾಹಕ, ಎತ್ತುಗಾನಹಳ್ಳಿ

ಗ್ರಾಹಕರಿಗೆ ಸೇವೆ ನೀಡುವುದು ನಮ್ಮ ಕರ್ತವ್ಯ. ಅನಾರೋಗ್ಯದಿಂದ ನಾನುರಜೆ ಇದ್ದೇನೆ. ಬ್ಯಾಂಕಿನಲ್ಲಿ ಗ್ರಾಹಕರುಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿನಡೆದಿದೆ. ಘಟನೆ ಬಗ್ಗೆ ಮಾಹಿತಿ ಪಡೆದುಬ್ಯಾಂಕ್‌ ಸಿಬ್ಬಂದಿ ಜೊತೆ ಸಭೆ ನಡೆಸುತ್ತೇನೆ. – ಅರುಣ ಕುಮಾರಿ, ವ್ಯವಸ್ಥಾಪಕಿ, ಎಸ್‌ಬಿಐ ಬ್ಯಾಂಕ್‌, ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next