ರಾಮನಗರ: ತಾಪಂ ಮಾಜಿ ಸದಸ್ಯ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ರವಿ ಮತ್ತು ಬೆಂಬಲಿಗರು ಡಿಸಿಎಂಡಾ.ಸಿ.ಎನ್.ಅಶ್ವಥನಾರಾಯಣ ಅವರ ಸಮ್ಮುಖ ದಲ್ಲಿ ಬಿಜೆಪಿ ಪಕ್ಷ ಸೇರಿದರು.
ತಾಲೂಕಿನ ಕೈಲಾಂಚ ಹೋಬಳಿಯ ಮೂಡಲಹಳ್ಳಿದೊಡ್ಡಿ ಗ್ರಾಮದಲ್ಲಿ ರವಿ ಅವರ ನಿವಾ ಸಕ್ಕೆ ಭೇಟಿ ಕೊಟ್ಟ ಡಿಸಿಎಂಡಾ.ಸಿ.ಎನ್.ಅಶ್ವತ್ಥನಾರಾಯಣ ಪಕ್ಷದ ಶಾಲು ಹೊದಿಸಿ ರವಿ ಮತ್ತು ಸಂಗಡಿಗರಾದ ಪರಮೇಶ್, ವೆಂಕಟಪ್ಪ, ನಿಖೀಲ್‌ದೊರೆಗೌಡ, ಪುನೀತ್ ಗೌಡ, ಅಕ್ಷಯ್ ಶೆಟ್ಟಿ, ಸಿದ್ದಪ್ಪಾಜಿ, ದಿನೇಶ್, ಕುಮಾರ್ ಮುಂತಾದವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳು, ಸಿದ್ಧಾಂತಗಳನ್ನು ಒಪ್ಪಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದು ಸ್ಥಳೀಯ ಬಿಜೆಪಿ ಪ್ರಮುಖರು ತಿಳಿಸಿದರು. ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಮುಜರಾಯಿಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕೋಲಾರ ಸಂಸದ ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಗೀತಾ ವಿವೇಕಾನಂದ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್,ಪ್ರಧಾನ ಕಾರ್ಯದರ್ಶಿ ರುದ್ರದೇವರು, ನಗರ ಪ್ರಧಾನ ಕಾರ್ಯದರ್ಶಿ ಡಿ.ನರೇಂದ್ರ, ಪ್ರಮುಖ ರಾದ ಎಸ್.ಆರ್.ನಾಗರಾಜ್, ಶಿವಮಾಧು, ಬಿ.ನಾಗೇಶ್, ಜಿ.ವಿ.ಪದ್ಮನಾಭ, ಲೀಲಾವತಿ, ಲಿಂಗೇಗೌಡ, ರಾಜು, ಜಗದೀಶ್, ರಾಜೇಶ್ ಇದ್ದರು.
ಇದನ್ನೂ ಓದಿ : ಕೋವಿಡ್ ಸಂಕಷ್ಟ: ಫೈವ್ ಸ್ಟಾರ್ ಹೋಟೆಲ್ ಬಾಣಸಿಗ ಈಗ ಬೀದಿ ಬದಿ ವ್ಯಾಪಾರಿ
ರಸ್ತೆ ಬದಿ ಕಬ್ಬಿನಹಾಲು ಕುಡಿದ ಡಿಸಿಎಂ: ಅಶ್ವತ್ಥನಾರಾಯಣ: ಚನ್ನಪಟ್ಟಣ ತಾಲೂಕುಕೋಡಂಬಹಳ್ಳಿಯಲ್ಲಿ ಗ್ರಾಮಸ್ವರಾಜ್ ಸಮಾವೇಶ ಮುಗಿಸಿಕೊಂಡು ಕೈಲಾಂಚ ಮಾರ್ಗವಾಗಿ ಮೂಡಲಹಳ್ಳಿ ದೊಡ್ಡಿ ಗ್ರಾಮಕ್ಕೆ ಬರುವ ಮಾರ್ಗಮಧ್ಯೆ ಕನಕಪುರ-ರಾಮನಗರ ರಸ್ತೆ ಬದಿಯಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಮತ್ತು ಮುಜರಾಯಿ ಸಚಿವಕೋಟಾ ಶ್ರೀನಿವಾಸ ಪೂಜಾರಿ ಮತ್ತು ಸಂಸದ ಮುನಿಸ್ವಾಮಿ ಕಬ್ಬಿನ ಹಾಲು ಕುಡಿದರು.