Advertisement
ಪಟ್ಟಣದ ಹಳೇ ತಿರುಮಕೂಡಲಿನ ಬಳಿ ರಾಷ್ಟ್ರೀಯ ಹೆದ್ದಾರಿ 212ರ ಬದಿಯಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಹಬ್ಬದ ಪ್ರಯುಕ್ತ ಯುವಕರ ಸ್ನೇಹ ಬಳಗದಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಜಿಪಂ ಸದಸ್ಯ ಎಂ.ಅಶ್ವಿನ್‌ಕುಮಾರ್ ಮಾತನಾಡಿ, ಕ್ರೀಡಾಕೂಟಗಳಲ್ಲಿ ಸೋಲು ಗೆಲುವು ಎರಡನ್ನೂ ಸಮಾನತೆಯ ಭಾವನೆಯಿಂದ ಸ್ವೀಕರಿಸುವ ಕ್ರೀಡಾ ಮನೋಭಾವನೆ ಮುಖ್ಯವಾಗಿರಬೇಕು. ಪ್ರತಿ ವರ್ಷವೂ ತಿರುಮಕೂಡಲು ನರಸೀಪುರದಲ್ಲಿ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಕ್ರೀಡಾಕೂಟವನ್ನು ಆಯೋಜಿಸುವ ಸಂದರ್ಭದಲ್ಲಿ ಸವಾಲುಗಳು ಮತ್ತು ಸಮಸ್ಯೆಗಳು ಎದುರಾಗುತ್ತವೆ. ಎಲ್ಲವನ್ನೂ ಸಹನೆ ಮತ್ತು ತಾಳ್ಮೆಯಿಂದ ಎದುರಿಸಿ ಮುನ್ನೇಡೆಯಬೇಕೆಂದು ಸಲಹೆ ನೀಡಿದರು. ವಾಟಾಳು ಮಠದ ಸಿದ್ಧಲಿಂಗಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಪರ ಆಯುಕ್ತ ಹೆಳವರಹುಂಡಿ ಸಿದ್ಧಪ್ಪ, ಪಪಂ ಮಾಜಿ ಅಧ್ಯಕ್ಷ ವಿರೇಶ್, ಹಂಚ್ಯಾ ಗ್ರಾಪಂ ಅಧ್ಯಕ್ಷ ಮಂಜು, ಪುರಸಭೆ ಸದಸ್ಯ ಟಿ.ಜಿ.ಪುಟ್ಟಸ್ವಾಮಿ, ಕಸಾಪ ಯೋಜನಾ ಸಮಿತಿ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಉಪನ್ಯಾಸಕ ಕುಮಾರಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಶ್ರೀ ಬಸವೇಶ್ವರ ಗ್ಯಾಸ್ ಏಜೆನ್ಸಿ ಮಾಲೀಕ ಕೆ.ಎಸ್.ಜಗದೀಶ್,
ಗ್ರಾಪಂ ಸದಸ್ಯ ಎಂ.ಬಿ.ಸಾಗರ್, ಯಜಮಾನ್ ಕೃಷ್ಣಪ್ಪ, ಶ್ರೀ ಚೌಡೇಶ್ವರಿ ಯುವಕರ ಸ್ನೇಹ ಬಳಗದ ಅಧ್ಯಕ್ಷ ಮಣಿಕಂಠರಾಜ್‌ಗೌಡ, ಬ್ಲಿಸ್ಸಡ್ ಟ್ರಸ್ಟ್‌ನ ಅಧ್ಯಕ್ಷ ಡಿ.ನಿಂಗರಾಜು, ಗೌಡ್ರು ಮಲ್ಲಪ್ಪ, ಮುಖಂಡರಾದ ದಕ್ಷಿಣಾಮೂರ್ತಿ, ಭೈರಾಪುರ ದಿಲೀಪ್, ಬಾಗಳಿ ಯೋಗೇಶ್, ತಲಕಾಡು ಸುಂದರನಾಯಕ, ಮಾವಿನಹಳ್ಳಿ ರಾಜೇಶ್ ಹಾಗೂ ಇನ್ನಿತರರು ಹಾಜರಿದ್ದರು.
ಕಿಡಿಗೇಡಿಗಳ ಅಪಪ್ರಚಾರಕ್ಕೆ ಕಿಡಿ: ಹಳೇ ತಿರುಮಕೂಡಲಿನಲ್ಲಿ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ರದ್ದುಗೊಳಿಸಲಾಗಿದೆ ಎಂದು ಕೆಲವು ಕಿಡಿಗೇಡಿಗಳು ಅಪಪ್ರಚಾರವನ್ನು ಮಾಡಿದ್ದರಿಂದ ಸ್ಪರ್ಧೆ ಎರಡು ತಾಸುಗಳ ಕಾಲ ತಡವಾಗಿ ಆರಂಭವಾಯಿತು.
ಹಣವನ್ನು ಮಾಡಲಿಕ್ಕೆ ಕ್ರೀಡಾಕೂಟವನ್ನು ಆಯೋಜಿಸಿದ್ದೇನೆ ಎಲ್ಲಿ ಬೆಳೆದುಬಿಡುತ್ತೇನೆ ಎಂಬ ಭಾವನೆಯಿಂದ ನಿನ್ನೆಯಿಂದಲೇ ಅಪಪ್ರಚಾರವನ್ನು ಆರಂಭಿಸಿದ್ದರು. ನಾನೂ ಯಾವತ್ತೂ ಒಬ್ಬರಿಗೆ ಕೆಟ್ಟದ್ದನ್ನು ಬಯಸಿಲ್ಲ. ಬ್ಲಿಸ್‌ಡ್ ಚಾರಿಟಬಲ್ ಟ್ರಸ್ಟ್‌ನ ಅನಾಥ ಮಕ್ಕಳಿಗಾಗಿ ಈ ಸ್ಪರ್ಧೆಯನ್ನು ನಡೆಸುತ್ತಿದ್ದೇನೆ ಎಂದು ಶ್ರೀಚೌಡೇಶ್ವರಿ ಯುವಕರ ಸ್ನೇಹ ಬಳಗದ ಅಧ್ಯಕ್ಷ ಆರ್.ಮಣಿಕಂಠರಾಜ್‌ಗೌಡ ತಿಳಿಸಿದರು.