ಮುಂಬಯಿ: ಡಾಲರ್ ಎದುರು ರೂಪಾಯಿ ದಿನದಿಂದ ದಿನಕ್ಕೆ ದುರ್ಬಲವಾಗುತ್ತಾ ಹೋಗುತ್ತಿದ್ದು 8 ಪೈಸೆ ಕುಸಿತದ ಮೂಲಕ 3 ವಾರಗಳಲ್ಲೇ ಕಳಪೆ ಸಾಧನೆ ಇದಾಗಿದೆ. ಈ ಜನವರಿ ಬಳಿಕ ಡಾಲರ್ ಎದುರು ರುಪಾಯಿ ಶೇ. 2.36ರಷ್ಟು ಕುಸಿತ ಕಂಡಿದೆ. ಮುಂಬರುವ ತಿಂಗಳಲ್ಲಿ ಇದು ಈಗಿನ 71.36ರಿಂದ 72 ರೂ. ತಲುಪುವ ಸಾಧ್ಯತೆ ಇದೆ.
ಡಾಲರ್ ಎದುರು ರೂಪಾಯಿ ಪತನವಾದರೆ ಏನು ತೊಂದರೆ?
ಡಾಲರ್ ಎದುರು ರುಪಾಯಿ ಇಳಿಕೆಯಾಗುತ್ತಾ ಸಾಗುತ್ತಿರುವುದು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹೊಡೆತವಾಗಿದೆ. ಡಾಲರ್ ಮೌಲ್ಯ ಹೆಚ್ಚುತಾ ಹೋದರೆ ನಮ್ಮ ದೈನಂದಿನ ಖರ್ಚುಗಳ ಮೇಲೆ ಅದು ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ವಿದೇಶದಲ್ಲಿ ವ್ಯಾಸಾಂಗ ಮಾಡುವ ಭಾರತೀಯ ವಿದ್ಯಾರ್ಥಿಗಳಿಗೆ ಇದು ಬಹುದೊಡ್ಡ ಪೆಟ್ಟು ಎಂದು ಹೇಳಲಾಗುತ್ತಿದೆ.
ಅಮೆರಿಕದಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಯೋರ್ವ ವಾರ್ಷಿಕವಾಗಿ 47 ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 33.63 ಲಕ್ಷ ರೂ.ಗಳನ್ನು ವ್ಯಯಿಸಲಾಗುತ್ತದೆ. ಇದು ಅವನು ತನ್ನ ಶಿಕ್ಷಣ ಸಂಸ್ಥೆಗೆ ಕಲಿಕಾ ಖರ್ಚು ಮತ್ತು ಹಾಸ್ಟೆಲ್ ಫೀಸ್‌ಗಾಗಿ ವ್ಯಯ ಮಾಡುವ ಮೊತ್ತವಾಗಿದೆ.
2017ರಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ 65.18ರಷ್ಟಿತ್ತು. ಆ ಸಮಯದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಸುಮಾರು 30 ಲಕ್ಷ ರೂ.ಗಳನ್ನು ಅಮೆರಿಕದಲ್ಲಿ ಖರ್ಚು ಮಾಡಬೇಕಾಗಿ ಬರುತ್ತಿತ್ತು. ಆದರೆ ಇಂದು ಅದು ಬದಲಾಗಿದೆ. ಇಂದಿನ ರೂಪಾಯಿ ಮೌಲ್ಯಕ್ಕೆ 33.63 ಲಕ್ಷ ರೂ.ಗಳನ್ನು ವ್ಯಯಮಾಡಬೇಕಾಗಿದೆ. ಪ್ರಮುಖವಾಗಿ ರೂಪಾಯಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಾ ಹೋದಂತೆ ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯರ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ.