Advertisement

ಡಾಲರ್‌ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ತಳ ಮಟ್ಟಕ್ಕೆ 

03:02 PM Sep 12, 2018 | |

ಮುಂಬಯಿ : ಡಾಲರ್‌ ಎದುರು ರೂಪಾಯಿ ಮೌಲ್ಯ ಬುಧವಾರ ಸಾರ್ವಕಾಲಿಕ ತಳ ಮಟ್ಟಕ್ಕೆ  ಕುಸಿದಿದೆ. 

Advertisement

ಕಚ್ಚಾ ತೈಲದ ಬೆಲೆ ನಿರಂತರ ಏರಿಕೆ ಮತ್ತು ವಿದೇಶಿ ನಿಧಿಯ ಹೊರಹರಿವಿನಿಂದಾಗಿ 72.87 ರಲ್ಲಿದ್ದ  ರೂಪಾಯಿ ಮೌಲ್ಯ ಇಂದು 72.91 ರೂ. ಮಟ್ಟಕ್ಕೆ ಕುಸಿದಿದ್ದು 73 ರ ಸನಿಹಕ್ಕೆ ಬಂದಿದೆ. 

ಮುಖ್ಯವಾಗಿ ವಾಣಿಜ್ಯ ಸಮರ, ಕಚ್ಚಾ ತೈಲ ಬೆಲೆ ಏರಿಕೆ  ನಂತರ, ಬ್ಯಾಂಕುಗಳು ಮತ್ತು ಆಮದುದಾರರಿಂದ ಸ್ಥಿರವಾದ ಡಾಲರ್ ಬೇಡಿಕೆ ರೂಪಾಯಿ ಮೌಲ್ಯದ ಒತ್ತಡಕ್ಕೆ ಕಾರಣವಾಗಿದೆ. 

ಸದ್ಯ ರೂಪಾಯಿ ಏಷ್ಯಾದಲ್ಲೇ ಡಾಲರ್ ಎದುರು ಅತಿ ಹೆಚ್ಚು ಮೌಲ್ಯ ಕಳೆದುಕೊಂಡ ಕರೆನ್ಸಿಯಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next