Advertisement

ಅಶೋಕನಗರ ರಸ್ತೆಗೆ ರೂಪಕಲಾ ಭೇಟಿ

06:15 PM Sep 19, 2020 | Suhan S |

ಕೆಜಿಎಫ್: ಅಶೋಕನಗರ ರಸ್ತೆ ಅಗಲೀಕರಣಕ್ಕಾಗಿ ನಿರ್ಲಕ್ಷ್ಯ ವಹಿಸುತ್ತಿರುವ ಜಿಲ್ಲಾಡಳಿತ ವನ್ನು ಪ್ರಶ್ನಿಸಿ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟ ಕಾಲ ಧರಣಿ ನಡೆಸುವುದಾಗಿ ಶಾಸಕಿ ಎಂ. ರೂಪಕಲಾ ತಿಳಿಸಿದ್ದಾರೆ.

Advertisement

ಶುಕ್ರವಾರ ಅಶೋಕನಗರ ರಸ್ತೆಗೆ ಭೇಟಿ ನೀಡಿದ ಸಂದರ್ಭದಲ್ಲಿಜಿಲ್ಲಾಡಳಿತದವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಣದ ಕೈಗಳು ಕೆಲಸ ಮಾಡುತ್ತಿವೆ. ಹಿಂದಿನ ಜಿಲ್ಲಾಧಿಕಾರಿಗಳು ಹೈಕೋರ್ಟ್‌ ಆದೇಶದಂತೆವಿಚಾರಣೆ ನಡೆಸಿ,9 ಮೀಟರ್‌ ರಸ್ತೆ ಮಾಡಲುಅಕ್ಕಪಕ್ಕದ ಕಟ್ಟಡ ತೆರವು ಮಾಡುವಂತೆಆದೇಶ ನೀಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯವಹಿಸಿದ್ದಾರೆ. ಎಷ್ಟು ಬಾರಿ ಸಂಪರ್ಕಿಸಿ, ಕಾಮಗಾರಿ ಶುರು ಮಾಡುವಂತೆ ಕೋರಿದ್ದರೂ ಪ್ರಯೋಜನವಾಗಲಿಲ್ಲ ಎಂದು ಹೇಳಿದರು.

ಅಶೋಕನಗರ ರಸ್ತೆಯಲ್ಲಿ ಮಳೆಗಾಲದಲ್ಲಿ ಓಡಾಡಲು ತೊಂದರೆ ಯಾಗುತ್ತಿದೆ. ಆರು ವರ್ಷದಿಂದ ಇಲಾಖೆಯ ನಿರ್ಲಕ್ಷ್ಯ ದಿಂದ ಜನತೆ ಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಯನ್ನು ಇಲಾಖೆ ನಿರ್ವಹಿಸುತ್ತಿಲ್ಲ ಎಂದು ಶಾಸಕಿ ದೂರಿದರು.

ರಸ್ತೆ ತೆರವು ಮಾಡಿ ಅಗಲೀಕರಣ ಯಾಕೆ ಮಾಡುತ್ತಿಲ್ಲ ಎಂಬುದನ್ನು ತಿಳಿಸಬೇಕು. ತೆರವು ಕಾರ್ಯಕ್ರಮದ ‌ ದಿನಾಂಕ ತಿಳಿಸಬೇಕು. ಅಲ್ಲಿಯವರೆಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ‌ ಧರಣಿಯಿಂದ ಮೇಲೆಳುವುದಿಲ್ಲ.ಅಧಿವೇಶನಕ್ಕೆ ಕೂಡ ಹೋಗುವುದಿಲ್ಲ ಎಂದು ರೂಪಕಲಾ ತಿಳಿಸಿದರು. ಪೌರಾಯುಕ್ತ ಸಿ.ರಾಜು, ಲೋಕೋಪಯೋಗಿ ಇಲಾಖೆಯ ರವಿ, ರಾಜಗೋಪಾಲ್‌, ನಗರಸಭೆ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next