Advertisement

ಫೂಟ್ ಪಾತ್ ಮೇಲೆ ಕುಳಿತಿದ್ದ ಮಹಿಳೆ ಮೇಲೆ ಹಾಡಹಗಲೇ ರೇಪ್!

03:10 PM Oct 23, 2017 | Sharanya Alva |

ವಿಶಾಖಪಟ್ಟಣ: ಕುಡಿದ ಮತ್ತಿನಲ್ಲಿ ಹಾಡಹಗಲೇ ಫೂಟ್ ಪಾತ್(ಪಾದಚಾರಿ ರಸ್ತೆ) ಮೇಲೆ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಘಟನೆ ವಿಶಾಖಪಟ್ಟಣದ ವೈಜಾಗ್ ನಲ್ಲಿ ನಡೆದಿದೆ.

Advertisement

ಘಟನೆ ಕುರಿತು ರಿಕ್ಷಾ ಚಾಲಕರೊಬ್ಬರು ಮೊಬೈಲ್ ನಲ್ಲಿಯೇ ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಿದ್ದು, ಆ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಹಾಡಹಗಲೇ ಅತ್ಯಾಚಾರ ಎಸಗಿದ ಘಟನೆ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು 20 ವರ್ಷದ ಯುವಕನೊಬ್ಬನನ್ನು ಬಂಧಿಸಿರುವುದಾಗಿ ವರದಿ ಹೇಳಿದೆ.

ಸಂತ್ರಸ್ತೆ ಮುಖ್ಯ ರಸ್ತೆಯ ಸಮೀಪದ ಫೂಟ್ ಪಾತ್ ಮೇಲೆ ಕುಳಿತುಕೊಂಡಿದ್ದಳು.  ನೂರಾರು ಜನ ಸಂಚರಿಸುತ್ತಿದ್ದ ವೇಳೆಯಲ್ಲಿಯೇ ಯುವಕ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದ. ಭಾನುವಾರ ಮಧ್ಯಾಹ್ನ 2ಗಂಟೆಗೆ ಈ ಘಟನೆ ನಡೆದಿತ್ತು, ಕಣ್ಣೆದುರೇ ಘಟನೆ ನಡೆದಿದ್ದು, ಯಾರೊಬ್ಬರೂ ಸಂತ್ರಸ್ತೆಯ ನೆರವಿಗೆ ಮುಂದಾಗಿಲ್ಲ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next