ಚಾಮರಾಜನಗರ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ 1.05 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅರಿಶಿನ ಕ್ಲೀನಿಂಗ್, ಗ್ರೇಡಿಂಗ್ ಹಾಗೂ ಪ್ಯಾಕಿಂಗ್ ಘಟಕವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು, ಜಿಲ್ಲಾ ಕೇಂದ್ರದಲ್ಲಿರುವ ಎಪಿಎಂಸಿ ತಮಿಳುನಾಡು ಗಡಿಯಲ್ಲಿದೆ. ಇಲ್ಲಿನ ರೈತರು ತಾವುಗಳು ಬೆಳೆದ ಅರಿಶಿನವನ್ನು ಪಾಲಿಶ್‌ಹಾಗೂ ಸಂಸ್ಕರಣೆ ಮಾಡಲು ತಮಿಳುನಾಡು ರಾಜ್ಯಕ್ಕೆತೆಗೆದುಕೊಂಡು ಹೋಗಬೇಕಾಗಿತ್ತು. ಈಗ ಎಪಿಎಂಸಿಆಡಳಿತ ಮಂಡಳಿಯವರು ಸಂಸ್ಕರಣಾ ಘಟಕಆರಂಭಿಸಿದ್ದು, ಈ ಭಾಗದ ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ಡಿ. ನಾಗೇಂದ್ರ ಮಾತನಾಡಿ,2015-16ನೇ ಸಾಲಿನಲ್ಲಿ ಆರ್‌ಕೆವಿವೈ ಯೋಜನೆಯಡಿ 5ಟಿಪಿಎಚ್ ಸಾಮರ್ಥ್ಯದ ಕ್ಲೀನಿಂಗ್, ಗ್ರೇಡಿಂಗ್ ಹಾಗೂಪ್ಯಾಕಿಂಗ್ ಘಟಕದ ನಿರ್ಮಾಣ ಕಾಮಗಾರಿ 47 ಲಕ್ಷ ರೂ. ವೆಚ್ಚದಲ್ಲಿ ಆರಂಭಿಸಲಾಯಿತು.
ಘಟಕಕ್ಕೆ ವಿದ್ಯುತ್ ಸರಬರಾಜು ಕಾಮಗಾರಿಯನ್ನು 15 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಆರಿಶಿನ ಸಂಸ್ಕರಣೆಗಾಗಿಕ್ಲೀನಿಂಗ್, ಗ್ರೇಡಿಂಗ್ ಮತ್ತು ಪ್ಯಾಕಿಂಗ್ ಯುನಿಟ್ ಅನ್ನುಸರಬರಾಜು ಮಾಡಿ ಆಳವಡಿಸಿ, ಚಾಲನಾ ಪರೀಕ್ಷೆಮಾಡುವ ಕಾಮಗಾರಿಗೆ 43 ಲಕ್ಷ ರೂ. ವೆಚ್ಚವಾಗಿದೆ. ಒಟ್ಟು 1.05 ಕೋಟಿ ರೂ.ಗಳ ಸುಸಜ್ಜಿತ ಅರಿಶಿನ ಸಂಸ್ಕರಣ ಘಟಕ ನಿರ್ಮಾಣವಾಗಿದೆ ಎಂದರು. ಈ ಘಟಕವು ಪ್ರತಿ ಗಂಟೆಗೆ 20ರಿಂದ 30 ಚೀಲ ಅರಿಶಿನ ಪಾಲಿಶಿಂಗ್ ಮಾಡುತ್ತದೆ. ಪ್ರತಿ ಗಂಟೆಗೆ 50 ಕ್ವಿಂಟಲ್ ಕ್ವೀನಿಂಗ್ ಮಾಡುತ್ತದೆ ಎಂದರು.
ಈ ವೇಳೆ ಎಪಿಎಂಸಿ ಉಪಾಧ್ಯಕ್ಷೆ ನಾಗಮ್ಮ, ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ಶಂಕರಮೂರ್ತಿ, ನಿರ್ದೇಶಕರಾದವಿಶ್ವನಾಥ್, ಮಹದೇವಸ್ವಾಮಿ, ನಂಜುಂಡಸ್ವಾಮಿ,ಜೆ.ಪಿ.ದೊರೆಸ್ವಾಮಿ, ಮಹದೇವಮ್ಮ, ಶಿವಣ್ಣ, ಹೆಗ್ಗೂರುಶೆಟ್ಟಿ, ಬಸವನಾಯಕ, ಚಂದ್ರಶೇಖರ್, ಪುಟ್ಟಸುಬ್ಬಪ್ಪ,ಸಹಾಯಕ ನಿರ್ದೇಶಕ ಎಂ ರವಿಚಂದ್ರ, ಕಾರ್ಯದರ್ಶಿಪ್ರಕಾಶ್ ಕುಮಾರ್, ಮಾರುಕಟ್ಟೆ ಅಧಿಕಾರಿಗಳಾದ ಮಧುಕುಮಾರ್, ಮಹದೇವಕುಮಾರ್, ಮುಖಂಡಬಸುಮರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.