ತುಮಕೂರು: ರಾಜ್ಯದಲ್ಲಿಯೇ ಮೊದಲು ಎನ್ನಲಾದ ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಕಲ್ಪಿಸುವ ಲಾಕ್ಡ್‌ಹೌಸ್ ಮಾನಿಟರಿಂಗ್ ಸಿಸ್ಟಂ ತಂತ್ರಾಂಶಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ಚಾಲನೆ ನೀಡಿದರು.
ನಗರ ವ್ಯಾಪ್ತಿಯಲ್ಲಿ ಸಂಭವನೀಯ ಕಳ್ಳ ತನ ಮತ್ತು ಮನೆ ಕಳ್ಳತನಗಳನ್ನು ತಡೆಗಟ್ಟಲು ಬೀಗ ಹಾಕಿದ ಮನೆಗಳ ಮೇಲೆ ನಿಗಾ ಇಡುವ ಸಲುವಾಗಿ ಸ್ಮಾರ್ಟ್ ಸಿಟಿ ಮತ್ತು ತುಮಕೂರು ಪೊಲೀಸ್ ಇಲಾಖೆಯಿಂದ ಈ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು ಇದು ರಾಜ್ಯ ದಲ್ಲಿಯೇ ಮೊದಲು ಎನ್ನಲಾಗಿದೆ. ಇದರ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ಮಾರ್ಟ್ ಸಿಟಿಯಿಂದ ಕೈಗೊಳ್ಳಲಾಗುತ್ತಿ ರುವ ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್‌ಮೆಂಟ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ನ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಿದರು.
ಕಂಟ್ರೋಲ್ ಸೆಂಟರ್ ಕಾರ್ಯಾರಂಭ: ಈ ವೇಳೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ಮಾತನಾಡಿ, ಈಗಾಗಲೇ 39.97 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಂಟ್ರೋಲ್ ಸೆಂಟರ್ ಕಾರ್ಯಾರಂಭ ಮಾಡಲಾಗಿದೆ. ನಗರದ ವಿವಿಧ ಕಡೆ 80 ಸಿ.ಸಿ. ಟಿ.ವಿ. ಅಳ ವಡಿಕೆ ಮತ್ತು ಸರ್ವೆಲೆನ್ಸ್, ವೇರಿಯಬಲ್ ಮೆಸೇಜಿಂಗ್ ಸಿಸ್ಟಂ, ಎನ್‌ವಿರಾನ್‌ಮೆಂಟ್ ಮಾನಿ ಟರಿಂಗ್, ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಂ ಮತ್ತು ತುಮಕೂರು ಒನ್ ಅಪ್ಲಿಕೇಷನ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
216 ಸಿ.ಸಿ. ಕ್ಯಾಮೆರಾ ಅಳವಡಿಕೆ: ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನ 2ನೇ ಹಂತದ ಯೋಜನೆಯಡಿ 16.14 ಕೋಟಿ ರೂ. ವೆಚ್ಚ ದಲ್ಲಿ ನಗರಾದ್ಯಂತ ಒಟ್ಟು 216 ಸಿ.ಸಿ. ಟೀವಿ ಅಳವಡಿಕೆ, ಸರ್ವೆಲೆನ್ಸ್ ಮತ್ತು 10 ಇಂಟೆಲಿಜೆನ್ಸ್ ಸಿಗ್ನಲಿಂಗ್ ಜಂಕ್ಷನ್‌ಗಳೊಂದಿಗೆ ಫೇಷಿ ಯಲ್ ರೆಕಗ್ನಿಷನ್ ಸೌಲಭ್ಯ ವನ್ನು ಒದಗಿಸ ಲಾಗುವುದು ಎಂದು ತಿಳಿಸಿದರು.
ವರ್ಷದಲ್ಲಿ ಕಾಮಗಾರಿ ಪೂರ್ಣ: ಸುಮಾರು 1918 ಚದರ ಮೀಟರ್ ಅಳತೆಯಲ್ಲಿ ಇಂಟಿಗ್ರೇಟೆಡ್ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ನ ನೂತನ ಕಟ್ಟಡವನ್ನು ಅಂದಾಜು 10.15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಸೆಂಟರ್‌ನ ಕಟ್ಟಡ ದಲ್ಲಿ 2 ಅಂತಸ್ತುಗಳಿದ್ದು, 12 ತಿಂಗಳ ಅವಧಿ ಯಲ್ಲಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸ ಲಾಗುವುದು ಎಂದು ಸಚಿವರಿಗೆ ಮಾಹಿತಿ ನೀಡಿದರು.
ಬೀಗ ಹಾಕಿದ ಮನೆ ಮೇಲೆ ನಿಗಾ: ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋ.ನಂ. ವಂಸಿಕೃಷ್ಣ, ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ ತಂತ್ರಾಂಶದ ಬಗ್ಗೆ ಸಚಿವರಿಗೆ ಮಾಹಿತಿ ನೀಡುತ್ತಾ, ನಗರ ವ್ಯಾಪ್ತಿಯಲ್ಲಿ ಸಂಭವನೀಯ ಕಳ್ಳತನ ಮತ್ತು ಕಳ್ಳತನಗಳನ್ನು ತಡೆಗಟ್ಟಲು ಬೀಗ ಹಾಕಿದ ಮನೆಗಳ ಮೇಲೆ ನಿಗಾ ಇಡುವ ಸಲುವಾಗಿ ಸ್ಮಾರ್ಟ್ ಸಿಟಿ ಮತ್ತು ತುಮಕೂರು ಪೊಲೀಸ್ ಇಲಾಖೆ ಯಿಂದ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ತಿಳಿಸಿದರು. ಶಾಸಕ .ಬಿ. ಜ್ಯೋತಿಗಣೇಶ್, ಕೇಂದ್ರ ವಲಯ ಐಜಿಪಿ ಶರತ್‌ಚಂದ್ರ, ಮೇಯರ್ ಫರೀದಾ ಬೇಗಂ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಉಪಮೇಯರ್ ಶಶಿಕಲಾ ಗಂಗಹನುಮಯ್ಯ ಇದ್ದರು.